ಚೆನೈ: ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಆಯ್ಕೆಯಾಗಿದ್ದ ಡಿಎಂಕೆ ನಾಯಕ ಎಂ.ಕೆ.ಸ್ಟಾಲೀನ್ ಅವರು ಶುಕ್ರವಾರ ತಮಿಳುನಾಡಿನ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬನವರಿವಾಲ್ ಪುರೋಹಿತ್ ಅವರು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಅವರ ಸಚಿವ ಸಂಪುಟದ ೩೩ ಮಂದಿ ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.
ಇವತ್ತು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ೬೯ ವರ್ಷದ ಎಂ.ಕೆ.ಸ್ಟಾಲೀನ್ ಅವರ ರಾಜಕೀಯ ಹಾದಿ ರೋಚಕವಾಗಿದ್ದು, ಪಾಲಿಕೆ ಚುನಾವಣೆ ಮೂಲಕ ಅಧಿಕಾರದ ಗದ್ದುಗೆಯನ್ನು ಹಂತಹಂತವಾಗಿ ಏರಿ ಬಂದಿದ್ದನು ಕಾಣಬಹುದಾಗಿದೆ. ಎರಡು ಬಾರಿ ಚೆನೈನ ಮೇಯರ್ ಆಗಿದ್ದ ಅವರು ಏಳು ಬಾರಿ ಶಾಸಕರಾಗಿ ಆರಿಸಿ ಬಂದಿದ್ದಾರೆ. ತಂದೆ ಕರುಣಾನಿಧಿ ಸಾವಿನ ಬಳಿಕ ಪಕ್ಷದ ಚುಕ್ಕಾಣಿ ವಹಿಸಿಕೊಂಡ ಸ್ಟಾಲೀನ್ ೧೦ ವರ್ಷಗಳ ಸುಧೀರ್ಘ ಹೋರಾಟದ ಬಳಿಕ ಏಪ್ರಿಲ್ ೬ರಂದು ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಗಳಿಸಿದ್ದಾರೆ. ೨೩೪ ಸ್ಥಾನಗಳ ತಮಿಳುನಾಡಿನಲ್ಲಿ ಡಿಎಂಕೆ ೧೫೯ ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುವ ಮೂಲಕ ಹೊಸ ಆಡಳಿತ ಆರಂಭಿಸಿದೆ ಇವರ ಆಡಳಿತ ಹೇಗಿರುತ್ತೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

By admin