ಎಲ್ಲರ  ಜೀವನದಲ್ಲಿ ಸಮಯ ಅನ್ನೋದು ಎಷ್ಟು ಮುಖ್ಯ ಅಲ್ಲವ.  ಅದಕ್ಕೆ    ” time is mony” ಎನ್ನೋ ಮಾತೊಂದಿದೆ.  ಸಮಯವನ್ನು ಅತ್ಯಂತ ಶ್ರೇಷ್ಠವಾದ ಹಣಕ್ಕೆ ಹೋಲಿಸಿದ್ದಾರೆ.  ಯಾವಾಗಲೂ ಹಣಕ್ಕಾಗಿ ನಾವು ಪಡದ ಕಷ್ಟವೇ ಇಲ್ಲ. ಪ್ರತಿಯೊಬ್ಬರೂ ಹಣಸಂಪಾದನೆಗೆ ತೊಡಗುತ್ತಾರೆ.  ಕೆಲವರು ಸಾಕಷ್ಟು ಗಳಿಸುತ್ತಾರೆ,  ಕೆಲವರು ಗಳಿಸಲು ಆಗುವುದಿಲ್ಲ, ಕೆಲವರು ಪ್ರಯತ್ನಿಸಿ ಸೋಲುತ್ತಾರೆ , ಮತ್ತೆ ಕೆಲವರು ಗಳಿಸಿದ್ದನ್ನು ಲೀಲಾಜಾಲವಾಗಿ ಕಳೆಯುತ್ತಾರೆ.  ಆದರೆ ಇಷ್ಟೆಲ್ಲಾ ಕೆಲಸಮಾಡುವಾಗ ನಾವೆಷ್ಟು ಸಮಯವನ್ನು ವ್ಯಯಿಸುತ್ತೇವೆ ಅಥವಾ ವ್ಯಯಿಸಿದ್ದೇವೆ ಎನ್ನುವುದು ಮುಖ್ಯ.  ಕೆಲವರು ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗುತ್ತಾರೆ…ಮತ್ತೆ ಕೆಲವರು ವರ್ಷಗಳು ಉರುಳಿದರೂ ಶ್ರೀಮಂತರಾಗುವುದಿಲ್ಲ.  ಇವೆರಡರ ನಡುವಿನ ಸಮಯದಲ್ಲಿ ನಾವು ಕಳೆವ ಗಳಿಕೆಯ ಸಮಯ ತುಂಬಾ ಮೌಲ್ಲಯುತವಾಗಿರುತ್ತದೆ. 

ಮನದಾಳದ ಮಾತುಗಳು .......: February 2010

ಇದು ಹಣ ಗಳಿಕೆಯದ್ದಾದರೆ…..ಮತ್ತೊಂದು ಸಮಯ ಸ್ವಾತಿ ಮುತ್ತಾಗುವುದು ನಮ್ಮ ಪ್ರೀತಿ ಪಾತ್ರರೊಡನೆ ನಾವು ಮುತ್ತಂತೆ ಇದ್ದಾಗ.  ಯಾಕೆ ಗೊತ್ತಾ ನಾಳೆ ಅನ್ನುವ ಸಮಯ ಹೇಗಿರುತ್ತೋ ಗೊತ್ತಿಲ್ಲ.  ಇರೋವರೆಗೆ ಚೆನ್ನಾಗಿ ಇರಬೇಕು…..        ಮತ್ತೊಂದು ಸಮಯ ಸ್ವಾತಿಮುತ್ತಾಗುವುದು ನನ್ನ ದೃಷ್ಟಿಯಲ್ಲಿ ಪ್ರತೀ ಕ್ಷಣನೂ ವ್ಯರ್ಥ ಮಾಡದೆ ನಾವು ಸದಾ ಇರುವೆಗಳಂತೆ ಬ್ಯುಸಿಯಾಗಿ ಇರಬೇಕು ಎನ್ನುವುದು.  ಇರುವೆಗಳ ಸಾಹಸ,, ಸಮಯ ಪ್ರಜ್ಞೆ ಎಲ್ಲರಿಗೂ ತಿಳಿದಿರುವುದೇ.  ಅದು ಸಣ್ಣದಾದರೂ ನಮಗೆ ಅನೇಕ ವಿಷಯಗಳನ್ನು ಕಲಿಸಿಕೊಡುತ್ತದೆ.  ಕಾಲಕೆಳಗಿನ ಅತೀ ಚಿಕ್ಕ ಕೀಟವದು . ಆದರೆ ಅದರ ಮಹತ್ಕಾರ್ಯ ಆನೆಗಿಂತ ದೊಡ್ಡದು.  ನಾಳಿನ ಜೀವನಕ್ಕಾಗಿ ಇಂದೇ ಕಷ್ಟ ಪಡುತ್ತದೆ. ಒಂದು ನಿಮಿಷವೂ ವ್ಯರ್ಥವಾಗಿ ಕಳೆಯದೆ ,,,,ದಣಿವನ್ನು ಮರೆತು  ಸದಾ ಏನಾದರೊಂದು ಹೊತ್ತು ಕೊಂಡು ಹೋಗುವ ಕೆಲಸ ಮಾಡುತ್ತದೆ. ಏಕೆಂದರೆ ಮುಂದಿನ ಮಳೆಗಾಲದ ಜವಾಬ್ದಾರಿ ಅದಕ್ಕೆ ಹೆಚ್ಚಾಗಿರುತ್ತದೆ. ಈಗ ನೋಡಿ ಬಿಟ್ಟೂ ಬಿಡದೆ ತಿಂಗಳಗಟ್ಟಲೆ ಸುರಿವ ಮಳೆಗೆ ಹೆದರದ ಜೀವಿ ಎಂದರೆ ಅದೊಂದೆ .ತನಗೆ ಏನು ಬೇಕು ಅದನ್ನು ಮೊದಲೇ ಸಂಗ್ರಹ ಮಾಡಿಟ್ಟುಕೊಂಡು ಬದುಕುತ್ತದೆ. 

ಭಾವ ಬಿಂದು: 2011

ನಾವೂ ಕೂಡ ಇರುವೆಯ ನಿಯಮವನ್ನು ಪಾಲಿಸುತ್ತಾ ಜೀವನದಲ್ಲಿ ಸಮಯವನ್ನು ಸ್ವಾತಿಮುತ್ತಾಗಿಸಿಕೊಳ್ಳಬೇಕು.        ನಮ್ಮ ಸಮಯ ಭೂಮಿಯ ಮೇಲೆ ಸ್ವಲ್ಪ ಮಾತ್ರ.  ಈ ಸಮಯವನ್ನು ಒಂದಷ್ಟು ಒಳ್ಳೆಯ ರೀತಿ,,ನೀತಿ,,ಸಂಸ್ಕೃತಿ,, ಸಂಸ್ಕಾರವನ್ನು ಕಲಿಯಲು ಮೀಸಲಿಡಬೇಕು.  ಅದು ಮಕ್ಕಳಿಂದ ಕರಗತವಾಗಬೇಕು.  ಯಾಕೆ ಗೊತ್ತಾ…ನಾಳೆ ಕಲಿತರಾಯಿತು…ಕಲಿಸಿದರಾಯಿತು… ಎಂದುಕೊಂಡರೆ ನಾಳೆ ಬರುವುದರೊಳಗೆ ಏನು ಬೇಕಾದರೂ ಆಗಬಹುದು.  ಅದಕ್ಕೆ ದಾಸ ಶ್ರೇಷ್ಠರು ಹೇಳಿರುವುದು ” ನೀನು ನಾಳೆ ಮಾಡುವ ಕೆಲಸ ಇಂದೇ ಮಾಡು …..ಆ ನಾಳೆ ಅನ್ನೋ ಮಾತ ಮುಂದೆ ದೂಡು ” ಅಂತ.  ಹೌದಲ್ಲವ… ನಾವು ಕಲಿಯ ಬೇಕಾದದ್ದು ಬೇಕಾದಷ್ಟಿದೆ.. ಆದರೆ ಸಮಯವೇ ಇರಲ್ಲ. ಹಾಗಾಗಿ ಇರುವ ಅಲ್ಪಸಮಯದಲ್ಲಿ ಅನಾವಶ್ಯಕ ಕಾಲಹರಣ ಮಾಡುವುದ ಬಿಟ್ಟು ಏನಾದರೂ ಮಾಡುತಿರೋಣ. ”  Don’t sit like a rock ; to be work like a clock ” ……

ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ,,