ಮೈಸೂರು- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ವತಿಯಿಂದ ಓಶೋಕಾಯ್ ಫಿಟ್ನೆಸ್ ಇವರ ಸಹಯೋಗದೊಂದಿಗೆ “ಸ್ವರಕ್ಷಾ” ಎಂಬ ಒಂದು ದಿನದ ಮಹಿಳಾ ಆತ್ಮರಕ್ಷಣಾ ಕಾರ್ಯಗಾರವನ್ನು ದಿನಾಂಕ 29 ನವೆಂಬರ್;ನಂದು ಓಶೋಕಾಯ್ ಫಿಟ್ನೆಸ್ ಸೆಂಟರ್, ಸರಸ್ವತಿಪುರಂ, ಮೈಸೂರು ಇಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಗಾರವು ನೋಬೆಲ್ ಬುಕ್ ಆಫ್ ವರ್ಡ್ ರೆಕಾಡ್ರ್ಸ್;ನಲ್ಲಿ ಸ್ಥಾನ ಪಡೆದಿರುವ ಭಾರತದ ಮಾರ್ಷಲ್ ಆಟ್ರ್ಸ್;ನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿರುವ ಹಾನ್ಶಿ
ಕೃಷ್ಣಮೂರ್ತಿಯವರು ನಡೆಸಿಕೊಟ್ಟರು. ಅಭ್ಯಾಸ ವ್ಯಾಯಾಮಗಳಿಂದ ಆರಂಭಗೊಂಡ ಕಾರ್ಯಗಾರದಲ್ಲಿ ಕ್ರಮೇಣ ಸರಳ ಹೋರಾಟ ತಂತ್ರಗಳನ್ನು, ಕಠಿಣ ಸ್ವರಕ್ಷಾ ಕ್ರಮಗಳನ್ನು
ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಕಾರ್ಯಗಾರದಲ್ಲಿ ಭಾಗವಹಿಸಿದವರ ಪ್ರಶ್ನೆಗಳನ್ನು ಉತ್ತರಿಸಿದ್ದಷ್ಟೇ ಅಲ್ಲದೇ, ಅವರಿಂದಲೇ ಅನೇಕ ಉದಾಹರಣೆಗಳನ್ನು ಪಡೆದುಕೊಂಡು
ಅಭ್ಯಾಸವನ್ನು ಮುಂದುವರೆಸಿದರು.
ಕಾರ್ಯಗಾರದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರ್.ಐ.ಡಿ. 3181ನ ಪಿ.ಡಿ.ಆರ್.ಆರ್. ಆಗಿರುವ ರೊಟೇರಿಯನ್/ರೊಟ್ರಾಕ್ಟರ್ ಹಿತೈಷಿ ಅವರು ಈ ತರಹದ ಕಾರ್ಯಗಾರಗಳ
ಪ್ರಾಮುಖ್ಯತೆಗಳನ್ನು ತಿಳಿಸುವುದರ ಜೊತೆಗೆ ಹೇಗೆ ಈ ಲಾಕ್;ಡೌನ್ ನಮಗೆ ಸ್ವಪ್ರೇಮವನ್ನು ಕಲಿಸಿದೆ ಹಾಗೆಯೇ ಅದರ ಸ್ವರಕ್ಷಣೆಯೊಂದಿಗಿನ ಸಂಬಂಧಕ್ಕೆ ಒತ್ತು ನೀಡಿದರು. ಅಷ್ಟೇ
ಅಲ್ಲದೇ ಪ್ರಸ್ತುತ ಸಮಾಜದಲ್ಲಿ ಸ್ತ್ರೀ ರಕ್ಷಣೆಯ ಅಗತ್ಯತೆ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿದರು.
ಕಾರ್ಯಗಾರಕ್ಕೆ ಚಾಲನೆ ನೀಡಿದ ಮೈಸೂರು ಮಿಡ್;ಟೌನ್ ರೋಟ್ರರಿಯ ಅಧ್ಯಕ್ಷರು, ರೊಟೇರಿಯನ್ ಅಯ್ಯಣ್ಣ, ಯುವ ಸೇವಾ ನಿರ್ದೇಶಕರಾದ ರೊಟೇರಿಯನ್ ರಾಕೇಶ್ ಬಾಬು,
ಖಜಾಂಚಿಗಳಾದ ರೊಟೇರಿಯನ್ ಸತ್ಯೇಂದ್ರ ಹಾಗೂ ಸಮುದಾಯ ಸೇವಾ ನಿರ್ದೇಶಕರಾದ ರೊಟೇರಿಯನ್ ಜಯಕುಮಾರ್ ಅವರು ಸಮಾಜ ಸೇವೆಗಾಗಿ ಕ್ಲಬ್ ಉತ್ಸಾಹದಿಂದ
ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳನ್ನು ಮುಕ್ತ ಕಂಠದಿಂದ ಹೊಗಳಿದರು. ಈ ಸಂದರ್ಭದಲ್ಲಿ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್;ನ ಪ್ರಥಮ
ಸುದ್ದಿಪತ್ರವನ್ನು ಬಿಡುಗಡೆ ಮಾಡಲಾಯಿತು.
ವಿವಿಧ ಕ್ಲಬ್;ಗಳ ರೊಟ್ರಾಕ್ಟರ್;ಗಳನ್ನು ಒಳಗೊಂಡತೆ ಮೈಸೂರಿನ ವಿವಿಧ ಭಾಗದಿಂದ ಸುಮಾರು 30 ಜನ ಭಾಗವಹಿಸಿದ್ದು ಕಾರ್ಯಗಾರವು ಯಶಸ್ವಿಯಾಗಿದೆ. ಕ್ಲಬ್‍ನ ಅಧ್ಯಕ್ಷರಾದ
ರೊಟ್ರಾಕ್ಟರ್ ಗೌರಿಕಾ ಕೆ., ಜಂಟಿ ಕಾರ್ಯದರ್ಶಿಗಳಾದ ರೊಟ್ರಾಕ್ಟರ್ ಭಾರತಿ ಎಚ್. ಸಿ., ಸಲಹೆಗಾರರಾದ ರೊಟ್ರಾಕ್ಟರ್ ರವಿಶಂಕರ್ ಎಸ್., ಶಿಕ್ಷಕ ಸಂಚಾಲಕರಾದ ರೊಟ್ರಾಕ್ಟರ್
ಪ್ರಿಯಾಂಕಾ ಎಂ. ಉಪಸ್ಥಿತರಿದ್ದರು.