ಮೈಸೂರು :ಮಾ ೧ ಸುವರ್ಣ ಬೆಳಕು ಫೌಂಡೇಷನ್ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ ಮೂರ್ತಿ ಡೆಂಟಲ್ ಕ್ಲಿನಿಕ್ ವತಿಯಿಂದ ಅಂಬಿಗರ ಚೌಡಯ್ಯ ರವರ ಜಯಂತ್ಸೋವ ಸ್ಮರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಮೈಸೂರಿನ ಬೆಸ್ತಗೇರಿ ಚಾಮರಾಜ ಡಬ್ಬಲ್ ರೋಡ್ ಶ್ರೀ ರಾಮ ಮಂದಿರದಲ್ಲಿ ಆಯೋಜಿಸಲಾಗಿತ್ತು.ಇದೇ ವೇಳೆ ಉದ್ಘಟನೆ ಮಾಡಿ ಮಾತನಾಡಿದ ಕಾಂಗ್ರೇಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ರವರು.ಸುವರ್ಣ ಬೆಳಕು ಫೌಂಡೇಷನ್ ಮಹೇಶ್ ರವರು ತಮ್ಮ ಸಂಸ್ಥೆಯಿಂದ ನಿರಂತರ ಕಾರ್ಯಕ್ರಾಮ ಸಮಾಜಮುಖಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಮಾಡುತ್ತ ಬಂದಿದ್ದು ಇಂದು ಸಾರ್ವಜನಿಕರಿಗೆ ಮೊಹಲ್ಲಾ ನಿವಾಸಿಗಳಿಗೆ ಉಚಿತವಾಗಿ ಎಎಸ್‌ಜಿ ಆಸ್ಪತ್ರೆಯ ಜೊತೆಗೂಡಿ ಕಣ್ಣಿನ ತಪಾಸಣೆ ದೂರದೃಷ್ಟಿ ಮತ್ತು ಸಮೀಪದೃಷ್ಟಿ ಪರೀಕ್ಷೆಗಳುಕಂಪ್ಯೂಟರೈಸ್ಟ್ ಕಣ್ಣಿನ ತಪಾಸಣೆ ನುರಿತ ವೈದ್ಯರ ತಂಡದಿಂದ ಕೌನ್ಸಿಲಿಂಗ್ ಸಲಹೆ ಕುಟುಂದ ಸದಸ್ಯರಿಗೆ ರೂ. ೬೦೦ ಮೌಲ್ಯದ ಉಚಿತತಪಾಸಣಾ ಕೂಪನ್ ನೀಡಲಾಗಿದ್ದು ಹಾಗೂ ಮೂರ್ತಿ ಡೆಂಟಲ್ ಕೇರ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಸಾಣೆ ಮಾಡುತ್ತಿದ್ದು ಇದರ ಸದಪಯೋಗ ಪಡೆದುಕೊಳ್ಳಬೇಕು ಎಂದರು.

ನಂತರ ಮಾತನಾಡಿದ ಎ.ಎಸ್.ಜಿ. ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಪವನ್ ಜೋಶಿರವರು ಇತ್ತೀಚಿಗೆ ಕಣ್ಣಿನ ಸಮಸ್ಯೆಯಂತು ಹೆಚ್ಚಾಗುತ್ತಿದ್ದು. ಪ್ರಪಂಚ ಸಣ್ಣದಾಗಿ ಮೊಬೈಲ್ ಉಪಯೋಗ ಜಾಸ್ತಿಯಾಗುತ್ತಿದ್ದು. ಕರೋನ ಸಮಯದಲ್ಲಿ ಹೊರಗಿನ ಚಟುವಟಿಕೆ ತೀರಾ ಕಡಿಮೆಯಾಗಿ ತೊಡಗಿತ್ತು. ಎಲ್ಲಾರು ತಮ್ಮ ತಮ್ಮ ಮನೆಯಲ್ಲಿ ಕುರೂವಂತೆ ಕೆಲಸವನ್ನು ಮಾಡುವಂತಹ ಸೋಮಾರಿತನ ಬಂತು ಏಕೆಂದರೆ ಹೊರಗಿನ ವ್ಯಾಯಾಮ ಇಲ್ಲ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರುವಾಗಿತ್ತು ಆದರೆ ಈಗ ಮಕ್ಕಳಿಗೆ ಕಣ್ಣಿನ ಸಮಸ್ಯೆಯಂತು ಹೆಚ್ಚಾಗಿದ್ದು. ಎರಡು ವರ್ಷದ ನಂತರ ಲಾಕ್ ಡೌನ್ ಕಳೆಯಿತು ಈಗ ಆಸ್ಪತ್ರೆಗೆ ಹೆಚ್ಚು ಮಕ್ಕಳು ಬರುತ್ತಿದ್ದು ದೂರ ದೃಷ್ಟಿ ಮಂಕಾಗಿದ್ದು ಶಾಲೆಯ ಶಿಕ್ಷಕರು ಮಕ್ಕಳ ಪೋಷಕರಿಗೆ ತಿಳಿಸಿದ್ದು ಬೇಸರದ ಸಂಗತಿಯಾಗಿದ್ದು.ತರಗತಿಯಲ್ಲಿ ಶಿಕ್ಷಕರು ಬೋರ್ಡ್‌ನಲ್ಲಿ ಬರೆದಿದ್ದು ಕಾಣಿಸಿದೆ ಬೋರ್ಡ ಬಳಿಯೆ ಬಂದು ಬರೆದುಕೊಳ್ಳುವ ಪರಿಸ್ಥಿತಿ ಬಂದಿದೆ ಅದರಿಂದ್ದ ಪೋಷಕರು ಮಕ್ಕಳ ಮೇಲೆ ಕಣ್ಣಿನ ಆರೈಕೆ ನೀಡಬೇಕು ಎಂದರು. ಶಿಬಿರದ ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್, ಪ್ರೋ.
ವಸಂತಮ್ಮ,ಡಾ.ರೇಖಾ ಮಾಳವಿಕಗುಬ್ಬಿವಾಣಿ, ಡಾ.ರೇಖಾ,ಶ್ರೀಧರ್‌ದೀಕ್ಷಿತ್,ಮಂಜುನಾಥ್.ಬಿ.ಆರ್. ಕಾರ್ತಿಕ್, ಶಿವುಕುಮಾರ್,ಶ್ಯಾಂ,ಪ್ರಶಾಂತ್, ದಾಸಪ್ಪ ವರ್ಷಿತ್,ಶ್ರೀಕಾಂತ್ ಮುಂತಾದವರು ಹಾಜರಿದ್ದರು.

ಭಾವ ಚಿತ್ರದ ವಿವರ.ಚಿತ್ರದಲ್ಲಿ. ನಿವೃತ್ತ ಪ್ರಾಧ್ಯಾಪಕರು ಮಹಾರಾಜ ಕಾಲೇಜು ಮೈಸೂರು ಪ್ರೋ. ವಸಂತಮ, ಕಾಂಗ್ರೇಸ್ ಮುಖಂಡ ಎನ್.ಎಂ.ನವೀನ್ ಕುಮಾರ್,ಡಾ.ರೇಖಾ, ಎ.ಎಸ್.ಜಿ. ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಪವನ್ ಜೋಶಿ, ಮಾಳವಿಕಾ ಗುಬ್ಬಿವಾಣಿ, ಶ್ರೀಧರ್‌ದೀಕ್ಷಿತ್ ಮಹೇಶ್ ನಾಯಕ್,