.ಮೈಸೂರು-18 ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜೂ.21 ರಂದು ಸುವರ್ಣ ಬೆಳಕು ಫೌಂಡೇಷನ್ ಹೊಯ್ಸಳ ಕರ್ನಾಟಕ ಸಂಘ ಸಹಯೋಗದಲ್ಲಿ ನಗರದ ಲಕ್ಷ್ಮಿಪುರಂನಲ್ಲಿರುವ ಹೊಯ್ಸಳ ಸಭಾಂಗಣದಲ್ಲಿ ಯುವ ಯೋಗ ಪಟುಗಳಿಂದ ಸೂರ್ಯನಮಸ್ಕಾರ ಹಾಗೂ ಕಠಿಣ ಆಸನಗಳ ಪ್ರದರ್ಶನ ಕಾರ್ಯಕ್ರಮ.

ನೆಡೆಯಲಿದ್ದು ಯೋಗ ಹಾಗೂ ಆಸನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಜರುಗಲಿದೆ.ಈ ಯೋಗದ ಕಾರ್ಯಕ್ರಮವನ್ನು ಪೈಟರ್ ಸ್ಪೋಟ್ಸ್ ವೇರ್ ಮಾಲೀಕರಾದ ಮಂಜುನಾಥಸಿಂಗ್ ಹಾಗೂ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಸತ್ಯನಾರಯಣ.ಕೆ.ಆರ್ ಉದ್ಘಾಟಿಸಿ ಕಾರ್ಯಕ್ರಮದ ಕುರಿತು ಮಾತನಾಡಲಿದ್ದಾರೆ.

 

ಇದೇ ಕಾರ್ಯಕ್ರಮದಲ್ಲಿ.ಮೈಸೂರು ವಿಶ್ವವಿದ್ಯಾನಿಲಯದ ಯೋಗ ತರಬೇತುದಾರರು ದೈಹಿಕ ಶಿಕ್ಷಣ ವಿಭಾಗ ಮೈಸೂರು ಶಿಕ್ಷಕರು ಆದ ರವಿ.ಬಿ. ಮೈಸೂರಿನ ನೃಪತುಂಗ ಕನ್ನಡ ಶಾಲೆಯಲ್ಲಿ 14 ವರ್ಷದಿಂದ ಯೋಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹೆಚ್.ಜಿ ಸುಜಾತ ಹಾಗೂ ರವಿಕುಮಾರ್ ಯೋಗಚಾರ್ಯರು ಕರ್ನಾಟಕ ರಾಜ್ಯ ಡಾ.ಗಂಗುಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಗೇ ಸುವರ್ಣ ಬೆಳಕು ಫೌಂಡೇಶನ್ ಸನ್ಮಾನ ನೀಡಿ ಗೌರವಿಸಲಾಗುವುದು.

By admin