ಮೈಸೂರು ಸುವರ್ಣ ಬೆಳಕು ಪೌಂಡೇಷನ್ ಆಯೋಜಿಸಿದ್ದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಡಾ.ಕೆ.ಲೀಲಾಪ್ರಕಾಶ್,ಖ್ಯಾತ ಸಾಹಿತಿಗಳು, ಬಿಡುಗಡೆ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ,ಡಾ.ಕೆ.ರಘುರಾಮ್ ವಾಜಪೇಯಿ ಅವರುಕ್ರೀಡೆಯಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ವೃದ್ಧಿಸುತ್ತದೆ ಯುವ ಸಮುದಾಯ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗದಿದ್ದರೆ ಪರವಾಗಿಲ್ಲ ಪುನಃ ಪ್ರಯತ್ನಿಸಿ ಯಶಸ್ವಿಯಾಗಬೇಕು. ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು ಸುವರ್ಣ ಬೆಳಕು ಫೌಂಡೇಶನ್ ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಡಾ. ಕೆ.ಲೀಲಾ ಪ್ರಕಾಶ್, ಕ್ರೀಡಾಪಟುಗಳು ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮ ಅಧ್ಯಕ್ಷತ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು, ನಮ್ಮಲ್ಲಿ ಕ್ರೀಡೆಗೆ ಸರಿಯಾದ ಉತ್ತೇಜನ ದೊರಕುತ್ತಿಲ್ಲ,


ಕಲಾವಿದರು ಹಾಗೂ ಕ್ರೀಡಾಪಟುಗಳಿಗೆ ಸೂಕ್ತ ಸಂಭಾವನೆ ಹಾಗೂ ಪ್ರೋತ್ಸಾಹ ದೊರಕಬೇಕು ಎಂದು ನುಡಿದರು.ಇದೆ ಸಂಧರ್ಭದಲ್ಲಿ ಅಂತರರಾಷ್ಟ್ರೀಯ ಪಂಜಕುಸ್ತಿಯ ವಿಜೇತರಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಢಷನ್ ಫೌಂಡೇಷನ್,ಸಂಸ್ಥಾಪಕ ಅಧ್ಯಕ್ಷರು ಮಹೇಶ್, ಕೆ.ಟಿ.ಬಲರಾಮೇಗೌಡ,ಶ್ರೀಧರ್ ದೀಕ್ಷೀತ್,ಅನಂತ್,ಅಶ್ವಥ್,ಮುಂತಾದವರು ಉಪಸ್ಥಿತರಿದ್ದರು.