ಚಾಮರಾಜನಗರ. ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಂಸ್ಕೃತಿ ಚಿಂತಕರು ,ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಕಾರ್ಯಕ್ರಮಗಳಲ್ಲಿ ಎರಡು ಮೂರು ದಶಕಗಳಿಂದ ಕನ್ನಡ ನಾಡು ನುಡಿ ಜಲ ಭಾಷೆಯ ಸೇವೆಯನ್ನು ಸಲ್ಲಿಸಿದ ಅವರು ಡಾಕ್ಟರ್ ಎಂ ಚಿದಾನಂದಮೂರ್ತಿ ಅವರ ಕನ್ನಡ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಕನ್ನಡದ ಸೇವೆಯನ್ನು ಸಲ್ಲಿಸಿದ್ದಾರೆ. ಹತ್ತಾರು ಕನ್ನಡ ಸಂಘಟನೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಋಗ್ವೇದಿ ಉತ್ತಮ ಸಂಘಟನಾಕಾರರು, ಸರಳ ಜೀವಿಗಳು, ಪ್ರಾಮಾಣಿಕರು ಆಗಿದ್ದಾರೆ.
 ದಶಕಗಳಿಂದ ನಾಡಿನ ಹತ್ತಾರು ಪತ್ರಿಕೆಗಳಲ್ಲಿ ಲೇಖನಗಳನ್ನು, ವ್ಯಕ್ತಿಚಿತ್ರಗಳನ್ನು ಬರೆಯುವ ಹವ್ಯಾಸ ಇಟ್ಟುಕೊಂಡಿರುವ ಋಗ್ವೇದಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿರುವ ರಾಜ್ಯ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಗಡಿ ಜಿಲ್ಲೆಯಾಗಿರುವ ಚಾಮರಾಜನಗರ ತಮಿಳು ಮತ್ತು ಕೇರಳ ಭಾಷೆಗಳ ಒಡನಾಟ ಹೊಂದಿರುವ ಭೂಮಿಯಾಗಿದೆ. ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಿಂತನೆಯ ಮೂಲಕ ನಾಡು ಕಟ್ಟುವ ಕೆಲಸವನ್ನು ಮಾಡುವ ವಿಶ್ವಾಸವನ್ನು ಹೊಂದಿರುವ ಇವರು ತಮ್ಮದೇ ಆದ ಅನೇಕ ವಿಚಾರಧಾರೆಗಳ ಮೂಲಕ ಗಡಿಗಳಲ್ಲಿ ಮತ್ತು ಗ್ರಾಮ ಗ್ರಾಮಗಳಲ್ಲಿ ಕೂಡ ಕನ್ನಡದ ಕೆಲಸವನ್ನು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.
ನಾಡಿನ ಅನೇಕ ಶ್ರೇಷ್ಠ ಚಿಂತಕರು, ಸಾಹಿತಿಗಳು ಜ್ಞಾನಿಗಳು ,ಧಾರ್ಮಿಕ ಚಿಂತಕರ ಒಡನಾಟ ಇಟ್ಟುಕೊಂಡಿರುವವರು ಕನ್ನಡಸಾಹಿತ್ಯಪರಿಷತ್ತಿನ ಅಧ್ಯಕ್ಷರಾಗಿರುವುದಕ್ಕೆ ಅನೇಕ ಸಂಘ ಸಂಸ್ಥೆ ಗಳು  ಅಭಿನಂದನೆ ಸಲ್ಲಿಸಿದೆ.