ಮೈಸೂರು: 17 ಮೇ  ಕೊರೊನ ಮಹಾಮಾರಿ ಎರಡನೇ ಅಲೆಯ ಪ್ರಭಾವದಿಂದ ಉಂಟಾಗಿರುವ ಲಾಕ್ ಡೌನ್ ಸಂಕಷ್ಟದ ಈ ಸಮಯದಲ್ಲಿ ಮೈಸೂರು ನಗರದಲ್ಲಿರುವ ನಿರಾಶ್ರಿತರಿಗೆ ಹಾಗೂ ನಿರ್ಗತಿಕರನ್ನು  ಹುಡುಕಿ ಹಸಿವನ್ನು ನೀಗಿಸುವ ಕಾರ್ಯವನ್ನು ನಗರದ ‘ವೀ ಕೇರ್ ಫಾರ್ ಯೂ ಮೈಸೂರು’ ಯುವಕರ ತಂಡವು ಪ್ರತಿನಿತ್ಯ ನೂರಾರು ಸಂಖ್ಯೆಯ ಸಂತ್ರಸ್ಥರಿಗೆ, ಸೇವಾ ವಸತಿಗಳಲ್ಲಿರುವ ನಿವಾಸಿಗಳಿಗೆ, ವಲಸೆ ಬಂದ ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ನೀಡುವ ಮೂಲಕ ಸೇವೆ ಸಲ್ಲಿಸುತ್ತಾ ಬಂದಿದೆ.

ಸ್ವಾಮಿ ವಿವೇಕಾನಂದರಿಂದ ಪ್ರೇರೇಪಣೆಗೊಂಡ ಈ ಯುವ ಪಡೆಯು ಇಂತಹ ಕಠಿಣ ಸಂದರ್ಭದಲ್ಲಿಯೂ  ತಮ್ಮ ಜೀವದ ಹಂಗನ್ನು ತೊರೆದು ಜೀವ ಸೇವೆಯೇ ಶಿವಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ಸಮರೋಪಾದಿಯಲ್ಲಿ  ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.

ಈ ಮುಂಚೆ ಐವತ್ತಕ್ಕೂ ಹೆಚ್ಚು ವಿಶೇಷಚೇತನ ಕುಟುಂಬಗಳಿಗೆ ದಿನಸಿ ವಿತರಣೆ ಮಾಡುವ ಮೂಲಕ ಸೇವೆ ಸಲ್ಲಿಸಿದೆ, ಬಳಿಕ ಲಾಕ್ ಡೌನ್ ಮುಗಿಯುವವರೆಗೂ ಸಂಕಷ್ಟದಲ್ಲಿರುವವರಿಗೆ ಹಸಿವು ನೀಗಿಸುವುದರ ಜೊತೆಗೆ ಉಚಿತವಾಗಿ ಸ್ವಾಮಿ ವಿವೇಕಾನಂದರ ಸಂದೇಶದ ಪುಸ್ತಕವನ್ನು ಪೊಲೀಸರಿಗೆ ನೀಡುವ ಕಾರ್ಯವನ್ನು  ಕೈಗೆತ್ತಿಕೊಂಡಿದೆ ‘ವೀ ಕೇರ್ ಫಾರ್ ಯು ಮೈಸೂರು’ ತಂಡ.


ಇಡೀ ದೇಶವೇ ಕೊರೋನಾ ಆಘಾತದಿಂದ ದಿಕ್ಕೆಟ್ಟು ಒಂದು ಹೊತ್ತಿನ ಕೂಳಿಗೂ ಕಷ್ಟವಾಗಿ ಹಸಿವಿನಿಂದ ಬಳಲುತ್ತಿರುವ ಜೀವಿಗಳಿಗೆ ಹೆದರದಿರಿ ನಿಮ್ಮೊಡನೆ ನಾವಿದ್ದೇವೆ We Care For You ಎನ್ನುವ ಭರವಸೆಯೊಂದಿಗೆ ಸ್ವಾಮಿ ವಿವೇಕಾನಂದರಿಂದ ಪ್ರೇರೇಪಣೆಗೊಂಡ ಶ್ರೀರಾಮಕೃಷ್ಣ ಆಶ್ರಮದ ಕೆಲವು ಯುವ ಸಮಾನ ಮನಸ್ಕ ಸ್ವಯಂ ಸೇವಕರು ಕಟ್ಟಿರುವ ಈ ತಂಡದಿಂದ ನಿರಾಶ್ರಿತರಿಗೆ, ದುರ್ಬಲರಿಗೆ ಮಧ್ಯಾಹ್ನದ ವೇಳೆ ರುಚಿಕರವಾದ ಆಹಾರವನ್ನು ಹಂಚುತ್ತಿರುವ ಸಂಗತಿ ನೋಡಿ ಖುಷಿಯಾಗಿದೆ. ಈ ಸಂದರ್ಭದಲ್ಲಿ “ಯಾರು ಇತರರಿಗೋಸ್ಕರ ಬದುಕುತ್ತಾರೋ ಅವರು ನಿಜವಾಗಿಯೂ ಬದುಕಿದವರು,ಉಳಿದವರು ಬದುಕಿಯೂ ಸತ್ತಂತೆ” ಎಂಬ ಸ್ವಾಮಿ ವಿವೇಕಾನಂದರ ಮಾತಿಗೆ ಅರ್ಥ ಬರುತ್ತದೆ.

     

~ ಸ್ವಾಮಿ ಶಾಂತಿವ್ರತಾನಂದ ಮಹರಾಜ್ , ಶ್ರೀ ರಾಮಕೃಷ್ಣ ಆಶ್ರಮ ಮೈಸೂರು


“ಅಂದುಕೊಂಡಷ್ಟು ಸುಲಭವಾಗಿಲ್ಲ ಕೊರೊನಾ ಎರಡನೆ ಅಲೆ ಮಹಾಮಾರಿಯ ಈ ಸಂಕಷ್ಟದ ಸಮಯದಲ್ಲಿ ನಮ್ಮ ‘ವೀ ಕೇರ್ ಫಾರ್ ಯು ಮೈಸೂರು’ ತಂಡದ ಪ್ರತಿಯೊಬ್ಬ ಸದಸ್ಯರು ಈ ಸಮಯದಲ್ಲಿ ಜೀವದ ಹಂಗನ್ನು ತೊರೆದು ಸೇವೆಗೆ ಕಟಿಬದ್ಧರಾಗಿ ನಿಂತಿದ್ದಾರೆ. ಹೀಗೆ ಈ ಸಮಯದಲ್ಲಿ ಎಲ್ಲರೂ ಮನೆಯಲ್ಲಿ ಉಳಿದು ತನ್ನ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ನಿಜವಾದ ನಿರಾಶ್ರಿತರಿಗೆ ಸಿಗಬೇಕಾದ ರಕ್ಷಣೆ ಮತ್ತು ಸೇವೆಗೆ ಅನುವು ಮಾಡಿಕೊಡುವಂತೆ ಸಾರ್ವಜನಿಕರಲ್ಲಿ ಕೋರುತ್ತೇವೆ. ಎನ್ನುತ್ತಾರೆ ತಂಡದ ಸದಸ್ಯರಾದ ಪುರುಷೋತ್ತಮ್ ಅಗ್ನಿ


ವೀ ಕೇರ್ ಫಾರ್ ಯು ಮೈಸೂರು ಯಾವುದೇ ರೀತಿಯ ತನು ಮನ ಧನ ಸಹಾಯವನ್ನು  ಸ್ವೀಕರಿಸುತ್ತದೆ. ಈ ಸಂದರ್ಭದಲ್ಲಿ ಇರುವವರು ನಮ್ಮ ತಂಡಕ್ಕೆ ನೀಡಿದರೆ ನಾವು ಇಲ್ಲದವರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳುತ್ತಾರೆ  ತಂಡದ ಸದಸ್ಯರಾದ ವೈಶಾಖ್ ಮತ್ತು ಶಿಬು

ಗೂಗಲ್ ಪೇ ಅಥವಾ ಫೋನ್ ಪೇ ಮಾಡಲಿಚ್ಛಿಸುವವರು 9945897401 ಗೆ ತಲುಪಿಸಿ ಸಹಕರಿಸಬಹುದು ಎಂದು ಮೈಸೂರು ಮಿರರ್ ವರದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.

 

 

 

 

By admin