ಚಾಮರಾಜನಗರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳ್ಳುವ ಕ್ಷೇತ್ರದ ಕುರಿತು ಅಸಕ್ತಿ ಹಾಗೂ ಕುತೂಹಲ ಹೊಂದಿರಬೇಕು. ಆಗಮಾತ್ರ ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಬಿ.ಐ.ಎಮ್.ಎಸ್ ಚೇರ್‌ಮೆನ್ ಪ್ರ್ರೊ. ಡಿ. ಆನಂದ್ ಅವರು ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿರುವ ಸುವರ್ಣ ಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿಜಗುಣ ಸಭಾಂಗಣದಲ್ಲಿಂದು ವಿಜ್ಞಾನ, ಮಾನವೀಯ ಹಾಗೂ ವಾಣಿಜ್ಯ ಕ್ಷೇತ್ರಗಳ ನೂತನ ವಿದ್ಯಮಾನ(ಉದಯೋನ್ಮ್ಮುಖ ಪ್ರವೃತ್ತಿ)ಗಳ ಕುರಿತು ಕೇಂದ್ರದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್.ಎಸ್.ಎಲ್.ಸಿ ಬಳಿಕ ಮುಂದೇನು ಎಂಬ ಗೊಂದಲ ಸಾಕಷ್ಟು ವಿದ್ಯಾರ್ಥಿಗಳಲ್ಲಿದೆ. ವಿಜ್ಞಾನ, ವಾಣಿಜ್ಯ, ಕಲೆ, ಸಾಹಿತ್ಯ, ತತ್ವಜ್ಞಾನ, ಮಾನವೀಯ ಸೇರಿದಂತೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಯ್ಕೆ ಮಾಡುವ ವಿಷಯಗಳ ಬಗ್ಗೆವಿದ್ಯಾರ್ಥಿಗಳಿಗೆ ಅಸಕ್ತಿ, ಕುತೂಹಲ ಇದ್ದರೆ ಮಾತ್ರ ವಿಷಯದ ಆಳ ಅರಿವಾಗಲಿದೆ. ಜ್ಞಾನಾರ್ಜನೆಗೆ ಶಿಕ್ಷಣ ಶಕ್ತಿಯುತ ಅಸ್ತ್ರವಾಗಿದ್ದು, ಹಲವಾರು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ತೆರೆದಿಡಲಿದೆ. ಅವಕಾಶಗಳು ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಹೆಚ್ಚಿಸಲಿವೆ ಎಂದರು.
ಜಗತ್ತು ಇಂದು ಸ್ಪರ್ಧಾತ್ಮಕವಾಗಿದ್ದು, ವಿಜ್ಞಾನ ತಂತ್ರಜ್ಞಾನದಿಂದ ಇಂದು ಜಗತ್ತು ಸಾಕಷ್ಟು ಬದಲಾವಣೆಗೆ ತೆರೆದುಕೊಂಡಿದೆ. ಶಿಲಾಯುಗ, ಸುವರ್ಣಯುಗ, ಪ್ಲಾಸ್ಟಿಕ್‌ಯುಗದ ನಂತರ ಈಗ ನಾವು ಎಲೆಕ್ಟ್ರಾನಿಕ್ ಯುಗದಲ್ಲಿದ್ದೇವೆ. ಬದಲಾವಣೆ ಜಗದ ನಿಯಮ. ಶೈಕ್ಷಣಿಕ ಕ್ಷೇತ್ರದ ಸಹ ಬದಲಾವಣೆ ಅನುಗುಣವಾಗಿ ವಿದ್ಯಾಥಿಗಳು ಹೊಂದಿಕೊಳ್ಳಬೇಕು. ವಿಜ್ಞಾನದಲ್ಲಿ ಯಾವುದೇ ಅವಿಷ್ಕಾರವಾದರೂ ಅದರ ಅನುಕೂಲವನ್ನು ಮನುಷ್ಯನಿಗೆ ತಲುಪಿಸುವುದೇ ವಾಣಿಜ್ಯ ಕ್ಷೇತ್ರವಾಗಿದೆ ಎಂದು ಆನಂದ್ ಅವರು ತಿಳಿಸಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಮೈಸೂರು ವಿ.ವಿ. ರಿಜಿಸ್ಟಾರ್ ಪ್ರ್ರೊ. ಆರ್. ಶಿವಪ್ಪ ಅವರು ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಂಡರೂ ಸಹ ಮಾನವೀಯ ವಿಷಯಗಳಾದ ಇತಿಹಾಸ, ಭಾಷೆ, ಕಲೆ, ಸಾಹಿತ್ಯ, ತತ್ವಜ್ಞಾನ ವಿಷಯಗಳಿಗೂ ಅಷ್ಟೇ ಪ್ರಾಶಸ್ಯ ನೀಡಬೇಕು. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಇರಬೇಕು. ಕಾರ್ಯಾಗಾರದ ಅನುಕೂಲವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಸ್ನಾತಕೋತ್ತರ ಕೇಂದ್ರದ ವಿಸಿಟಿಂಗ್ ಪ್ರ್ರೊಫೆಸರ್ ಕೃಷ್ಣಮೂರ್ತಿ ಹನೂರು ಅವರು ಮಾತನಾಡಿ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದ ವಿಶಿಷ್ಟ ಸಂಗತಿಗಳನ್ನು ತಿಳಿಸಿಕೊಡುವ ವೇದಿಕೆಯಾಗಬೇಕು. ಜ್ಞಾನ ವಿಜ್ಞಾನದ ಜೊತೆಗೆ ಸಾಗುವುದರಿಂದ ವಿಶ್ವವಿದ್ಯಾಲಯದ ಉನ್ನತ ಶಿPಣವು ವಿದ್ಯಾರ್ಥಿಗಳ ಮನಸ್ಸನ್ನು ಸಾಕಷ್ಟು ಅವಕಾಶಗಳೆಡೆಗೆಸ ತೆರೆಯುವುದೇ ಆಗಿದೆ ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರ್ರೊ. ಆರ್. ಮಹೇಶ್ ಅವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಹಾಜರಿದ್ದರು.