ಮೈಸೂರು-20. ತಂದೆತಾಯಿಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆದಾಗಲೆ ಬದುಕಿನಲ್ಲಿ ಯಶಸ್ಸು, ಕೀರ್ತಿ ಎಲ್ಲವೂ ಲಭಿಸುತ್ತದೆ ಎಂದು ಖ್ಯಾತ ಸಂಸ್ಕೃತ ವಿದುಷಿ ಡಾ. ಕೆ.ಲೀಲಾ ಪ್ರಕಾಶ್ ಅಭಿಪ್ರಾಯಪಟ್ಟರು.

ಮಾರ್ಚ್ 20 ರ ಭಾನುವಾರ ಸಂಜೆ ಕೃಷ್ಣಮೂರ್ತಿ ಪುರಂ ನ ನಮನ ಕಲಾಮಂಟಪ ದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಯುವ ಸಾಧಕರಿಗೆ ಯುವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪುನೀತ್ ಹಾದಿಯಲ್ಲಿಯೇ ನೇತ್ರದಾನ, ರಕ್ತದಾನ, ಶ್ರಮದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುವಲ್ಲಿ ಯುವಕರು ಮುಂದಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಯುನಿವರ್ಸಲ್ ಅಕಾಡೆಮಿ ಅಧ್ಯಕ್ಷರಾದ ಪ್ರಕಾಶ್ ಜಿಎಸ್ ಹಳ್ಳಿ ಅವರು, ಇಂದು ಎಲ್ಲೆಡೆ ನೋಡಿದರು ಪುನೀತ್ ಮಯವಾಗಿದೆ. ಪುನೀತ್ ಮಕ್ಕಳು ಯುವಕರು ಹಿರಿಯರಾದಿಯಾಗಿ ಎಲ್ಲರಿಗೂ ಆದರ್ಶವಾಗಿದ್ದಾರೆ, ಇದರೊಂದಿಗೆ ಇಂದಿನ ಯುವಕರು ಪರಿಸರಪ್ರೇಮವನ್ನು ಬೆಳೆಸಿಕೊಂಡು ಪರಿಸರ ರಕ್ಷಣೆ ಯತ್ತ ಗಮನ ಹರಿಸಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ನವೀನ್ ಕುಮಾರ್, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಿರುವ ಕಾರ್ಯ ಎಲ್ಲರಿಗೂ ಅನುಕರಣೀಯ ಎಂದರು.

ವೈದ್ಯ ತರಂಗಿಣಿ ಮಾಸ ಪತ್ರಿಕೆ ಸಂಪಾದಕ ಎನ್.ಅನಂತ ಹಾಗೂ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್ ಉಪಸ್ಥಿತರಿದ್ದರು. ಇದೇ ಸಂದರ್ಭ ಶ್ರೀಧರ ದೀಕ್ಷಿತ್, ಕೆ ಪಿ ಯೋಗೇಶ್, ಬಸವರಾಜೇಂದ್ರ ಸ್ವಾಮಿ, ಬಿಆರ್ ಮಂಜುನಾಥ್, ವಿಜಯಕುಮಾರ್, ಕಲ್ಯಾಣ್ ಕುಮಾರ್ ಎಂ ಎಲ್ ಇವರುಗಳಿಗೆ ಯುವ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಹೇಶ ನಾಯಕ್, ಎನ್ ಆನಂತ್,ವಿಶ್ವೇಶ್ವರ ಆರಾಧ್ಯ ದಿಡ್ಡಾಪುರಾ.ಎಂ.ಆರ್.ಇಂದ್ರಾಣಿ,,

ರವಿಭಗೀರಥ್, ಲೇಔಟ್ ಅವಿನಾಶ್, ಹರ್ಷವರ್ದನ್,ಮುಂತಾದವರು ಹಾಜರಿದ್ದರು.