ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೇ ೧೫ರ ಭಾನುವಾರ ಬೆಳಗ್ಗೆ ೧೧ಗಂಟೆಗೆ ಬಸವ ಜಯಂತಿ ಪ್ರಯುಕ್ತ ಸಾಧಕರಿಗೆ ಶ್ರೀ ಬಸವ ವಿಭೂಷಣ ಹಾಗೂ ಶ್ರೀ ಬಸವ ಭೂಷಣ ಪ್ರಶಸ್ತಿ ಪ್ರದಾನ, ಬಸವ ಸಂದೇಶ ಕುರಿತು ಸಾಹಿತಿ ಶ್ರೀ ಕಿರಣ್ ಸಿಡ್ಲೆಹಳ್ಳಿ ಅವರಿಂದ ಉಪನ್ಯಾಸ ಹಾಗೂ ಅಭಿರುಚಿ ಬಳಗದ ಶ್ರೀ ಎನ್. ವಿ.ರಮೇಶ್ ನೇತೃತ್ವದಲ್ಲಿ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ.ಕೆ. ರಘುರಾಮ್ ವಾಜಪೇಯಿ ವಹಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಆಧ್ಯಾತ್ಮಿಕ ಶರಣರಾದ ಶ್ರೀ ಸೋಮಶೇಖರ ಸ್ವಾಮೀಜಿ ವಹಿಸಲಿದ್ದು, ಶ್ರೀಬಸವೇಶ್ವರರ ಭಾವಚಿತ್ರಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಮಡ್ಡಿಕೆರೆ ಗೋಪಾಲ್ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಮುಕ್ತಕ ಕವಿ ಪರಿಷತ್ ಅಧ್ಯಕ್ಷ ಮುತ್ತುಸ್ವಾಮಿ ಹಾಗೂ ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ್,. ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್, ಹಾಗೂ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀ ಸೋಮಶೇಖರ ಸ್ವಾಮೀಜಿ ಅವರಿಗೆ ಬಸವ ವಿಭೂಷಣ ಪ್ರಶಸ್ತಿ ಹಾಗೂ ಸಾಂಬಮೂರ್ತಿ-ಗಾಯನ, ಡಾ.ಕಿರಣ್ ಸಿಡ್ಲೆಹಳ್ಳಿ-ಶಿಕ್ಷಣ, ಪ್ರಕಾಶ್ ಜಿಎಸ್ ಹಳ್ಳಿ-ಪರಿಸರ ಸೇವೆ, ಶ್ರೀಧರ್ ಹೆಚ್. ಬಿ-ಶಿಕ್ಷಣ, ಶ್ರೀ ಮಲ್ಲೇಶ್-ಉದ್ಯಮ, ಅಂಬಿಕಾ-ಕ್ರೀಡೆ, ಸ್ನೇಕ್ ಪ್ರಶಾಂತ್-ಉರಗ ಸೇವೆ ಇವರುಗಳಿಗೆ ಶ್ರೀ ಬಸವ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.