2020 ರ ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಕೇಂದ್ರ ಹಣಕಾಸು ಸಚಿವೆ ಯಾದ ‘ನರ‍್ಮಲಾ ಸೀತಾರಾಮನ್’ ರವರು ಪರ‍್ಲಿಮೆಂಟಿನಲ್ಲಿ ಇನ್ನ ಮುಂದೆ ಹಸಿರು ನಿಶಾನೆ ರ‍್ಥವ್ಯವಸ್ಥೆ ಕಂಡುಬರುತ್ತದೆ. “ಗ್ರೀನ್ ಶೂಟ್ಸ್ ಆರ್ ವಿಸಿಬಲ್” ಎಂದು ಹೇಳಿದ್ದಾರೆ. ಅಂದರೆ ಇನ್ನು ಮುಂದೆ ರ‍್ಥವ್ಯವಸ್ಥೆಯು ಮಂದಗತಿಯಲ್ಲಿ ಸಾಗೋದಿಲ್ಲ, ಅದು ಅಲ್ಲಿಗೆ ನಿಲ್ಲುತ್ತದೆ ಎಂದರ್ಥ. ಆದರೆ ಗ್ಲೋಬಲ್ ಕ್ರೆಡಿಟ್ ರೇಟಿಂಗ್ ಏಜೆನ್ಸಿಸ್ (ಕ್ರೆಡಿಟ್ ರೇಟಿಂಗ್ ಏಜೆನ್ಸಿಸ್) ಅವರು ೨೦೨೧ರಲ್ಲಿ ಭಾರತದ ಜಿಡಿಪಿಯು ತೀರ ಪ್ರಮಾಣದಲ್ಲಿ ಕುಸಿಯುತ್ತದೆ ಎಂದು ಅಂದಾಜಿಸಿದ್ದಾರೆ.
ಭಾರತದ ರ‍್ಥ ವ್ಯವಸ್ಥೆಯಲ್ಲಿ ಅನುಭೋಗಿಗಳ ಬೇಡಿಕೆಯು ತೀರ ಕಡಿಮೆಯಾಗಿದೆ ಮತ್ತು ಖಾಸಗಿ ಹೂಡಿಕೆಯು ತುಂಬಾ ಕಡಿಮೆಯಾಗಿದೆ. ಇವೆರಡೂ ಅಂಶಗಳು ಭಾರತದ ರ‍್ಥವ್ಯವಸ್ಥೆಯನ್ನು ೮ ಪ್ರಮುಖ ವಲಯಗಳಲ್ಲಿ ಋಣಾತ್ಮಕವಾದ ಬೆಳವಣಿಗೆ ಕಂಡು ಬರುವಂತೆ ಮಾಡಿದೆ. ಅಂದರೆ ೨೦೧೯ರಲ್ಲಿ ಶೇಕಡವಾರು ೭.೩ ಇದ್ದದ್ದು ೨೦೨೦ ಜುಲೈನಲ್ಲಿ ೨.೧ ಶೇಕಡವಾರಿಗೆ ಕುಸಿತಗೊಂಡಿದೆ. ಆದರೆ ಈ ಎಲ್ಲಾ ರ‍್ಥಿಕ ಕುಸಿತಕ್ಕೆ ಕೋವಿಡ್ ೧೯ ಮುಖ್ಯ ಕಾರಣವಾಗಿದೆ, ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶವನ್ನು ರ‍್ಥಿಕ ಮುಗ್ಗಟ್ಟಿಗೆ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಸೃಷ್ಟಿಸಿದೆ. ಈ ಪಿಡುಗು ಅಥವಾ ಕೋವಿಡ್ ೧೯ ಬಂದಾಗಿನಿಂದ ಒಂದುಕಡೆ ಬೇಡಿಕೆಯಲ್ಲಿ ಅಧಿಕವಾಗಿ ಕಡಿಮೆಯಾಗಿದೆ, ಮತ್ತೊಂದು ಕಡೆ ನಿರುದ್ಯೋಗ ಸಮಸ್ಯೆ ಅಧಿಕವಾಗಿದೆ.
ಬೇಡಿಕೆ ತೀರ ಕಡಿಮೆಯಾಗಿ ಬೆಲೆ ಗಗನಕ್ಕೆ ಏರಿದೆ. ಒಂದು ಕಡೆ ನಿರುದ್ಯೋಗ ಸಮಸ್ಯೆ ಉಲ್ಬಣವಾಗಿದೆ, ಈ ಪರಿಸ್ಥಿತಿಯನ್ನು ಅಂದರೆ ನಿರುದ್ಯೋಗ ಸಮಸ್ಯೆ ಒಂದು ಕಡೆ ಹೆಚ್ಚಾಗಿ, ಬೆಲೆಯೂ ಕೂಡ ಹೆಚ್ಚಾಗಿ, ಹಣದುಬ್ಬರ ಹೆಚ್ಚಾಗುವುದನ್ನು ಇಂಗ್ಲಿಷ್ನಲ್ಲಿ ಸ್ಟ್ಯಾಗ್ ಫ್ಲೇಶನ್ (ಸ್ಟ್ಯಾಗ್ ಫ್ಲೇಶನ್) ಎಂದು ಕರೆಯಲಾಗುತ್ತದೆ. ಅದನ್ನು ಕನ್ನಡದಲ್ಲಿ ಹೇಳುವುದಾದರೆ, ಸ್ಥಗಿತ ಹಣದುಬ್ಬರ ಎನ್ನಲಾಗುತ್ತದೆ.
ಸ್ವತಂತ್ರ ನಂತರದಲ್ಲಿ ಭಾರತದ ರಾಷ್ಟ್ರೀಯ ಆದಾಯ ಈ ಮಟ್ಟಕ್ಕೆ ಕಡಿಮೆಯಾಗಿರುವುದು ಕೇವಲ ೪ ಬಾರಿ ಅಷ್ಟೇ ೧೯೫೮, ೧೯೬೬, ೧೯೭೩, ೧೯೮೦. ಆದರೆ ೨೦೨೦-೨೧ ನೇ ವರ್ಷದಲ್ಲಿ ರ‍್ಥಿಕ ಕುಗ್ಗುವಿಕೆ ಇಡೀ ದೇಶದ ಇತಿಹಾಸದಲ್ಲೇ ಮೊದಲು ಹಾಗೂ ಭಾರತದ ರ‍್ಥವ್ಯವಸ್ಥೆಯ ಕುಗ್ಗುವಿಕೆಯು ತನ್ನದೇ ಆದಂತಹ ಪರಿಣಾಮವನ್ನು ಬೀರಿ ಭಾರತಾದ್ಯಂತ ಮಾತ್ರ ಅಲ್ಲ ವಿಶ್ವಾದ್ಯಂತ ಅಸಮಾನತೆಗೆ ಕಾರಣವಾಗಿದೆ, ಈ ಅಸಮಾನತೆಯು ಕೂಡ ಕಳೆದ ಮೂರು ದಶಕಗಳಲ್ಲಿ ಹೆಚ್ಚಾಗಿದೆ ಎಂದು ಕೂಡ ಹೇಳಬಹುದು. ಇಡೀ ಪ್ರಪಂಚದ ರ‍್ಥವ್ಯವಸ್ಥೆಯನ್ನ ತೆಗೆದುಕೊಂಡರೆ ಈ ರ‍್ಥಿಕ ಕುಗ್ಗುವಿಕೆಯ ಪರಿಸ್ಥಿತಿಯನ್ನ ಅನುಭವಿಸಿರುವುದು ಹೆಚ್ಚಾಗಿ ಭಾರತವೇ ಎಂದು ಹೇಳಬಹುದು. ೨೦೨೦-೨೧ನೇ ಹಣಕಾಸಿನ ರ‍್ಷದಲ್ಲಿ ಜಿಡಿಪಿ ಇಡೀ ಪ್ರಪಂಚಿಕವಾಗಿ ನೋಡಿದಾಗ ಶೇಕಡವಾರು ೩.೩ ಇದ್ದದ್ದು ಶೇಕಡವಾರು ೨.೨ ಕ್ಕೆ ಕುಸಿತಗೊಂಡಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಅಥವಾ ಉದಯೋನ್ಮುಖ ರಾಷ್ಟçಗಳ ರ‍್ಥವ್ಯವಸ್ಥೆಯಲ್ಲಿ ಕುಸಿತ ಉಂಟಾಗಿದೆ.
ಭಾರತದ ನಿರುದ್ಯೋಗವನ್ನು ಬೇರೆ ದೇಶದ ನಿರುದ್ಯೋಗ ಪ್ರಮಾಣಗಳ ಜೊತೆ ಹೋಲಿಕೆ ಮಾಡಿ ನೋಡಿದಾಗ, ೨೦೨೧ರ ನಿರುದ್ಯೋಗ ಪ್ರಮಾಣ ಅಥವಾ ದರದಲ್ಲಿ ಭಾರತ ತೀರ ಕಡಿಮೆ ಪ್ರಮಾಣದಲ್ಲಿ ಉದ್ಯೋಗವನ್ನು ಒದಗಿಸುತ್ತಿದೆ ಎಂದು ತಿಳಿದುಬರುತ್ತದೆ. ನಿರುದ್ಯೋಗ ದರವು ಬಹಳ ಹೆಚ್ಚಾಗಿದೆ. ಪ್ರಪಂಚದಲ್ಲಿ ಸರಾಸರಿಯಾಗಿರುವಂತಹ ರಾಷ್ಟ್ರ ಅಥವಾ ನಮ್ಮ ರಾಷ್ಟçದ ತಲಾದಾಯಕ್ಕೆ ಸರಿ ಸಮನಾಗಿರುವ ದೇಶಗಳ ಜೊತೆ ಹೋಲಿಕೆ ಮಾಡಿ ನೋಡಿದಾಗಲೂ ಕೂಡ ಭಾರತದಲ್ಲಿರುವ ನಿರುದ್ಯೋಗ ಪ್ರಮಾಣ ೨೦೨೦ ರಲ್ಲಿ ಅತಿ ಹೆಚ್ಚಾಗಿದೆ ಎಂದು ಹೇಳಬಹುದು ಹಾಗೆಯೇ ಕೋವಿಡ್ ೧೯ ಪಿಡುಗಿನ ಈ ಸಂರ‍್ಭದಲ್ಲಿ ರ‍್ಕಾರವು ಹಲವಾರು ಪ್ಯಾಕೇಜ್ ಗಳನ್ನು ಕೂಡ ನೀಡಿದೆ, ಜಿಡಿಪಿ ಈಗಾಗಲೇ ಅತಿ ಕಡಿಮೆ ಪ್ರಮಾಣಕ್ಕೆ ಇಳಿಮುಖವಾಗಿದ್ದು, ಪ್ರಸ್ತುತ ಋಣಾತ್ಮಕ ಪ್ರಮಾಣವನ್ನ ಅಂದರೆ ಶೇಕಡ -೭.೩ ರಷ್ಟು ಜಿಡಿಪಿಯನ್ನು ಹೊಂದಿದೆ.
ಕೋವಿಡ್ ನ ಎರಡನೇ ಅಲೆಯಿಂದ ಭಾರತದ ಜಿಡಿಪಿ ಮತ್ತಷ್ಟು ಕಡಿಮೆಯಾಗಿದೆ, ಅದರಲ್ಲೂ ರ‍್ಥಿಕ ರ‍್ಷ ೨೦೨೧-೨೨ರ ಮೊದಲ ತ್ರೈಮಾಸದಲ್ಲಿ ಜಿಡಿಪಿ ತೀರಾ ಕಡಿಮೆಯಾಗಿದೆ. ಭಾರತದಲ್ಲಿ ರ‍್ಥಿಕ ಕುಗ್ಗುವಿಕೆ, ನಿರುದ್ಯೋಗ ಸಮಸ್ಯೆ ಮತ್ತು ಹಣದುಬ್ಬರ ಹೆಚ್ಚಾಗಿದ್ದು ಸ್ಥಗಿತ ಹಣದುಬ್ಬರದ (sಸ್ಟ್ಯಾಗ್ ಫ್ಲೇಶನ್) ಪರಿಸ್ಥಿತಿ ಉದ್ಬವಿಸುತ್ತಿದೆ.
ಸಗಟು ಬೆಲೆ ಸೂಚ್ಯಂಕ (ಹೋಲ್‌ಸೇಲ್ ಪ್ರೆöÊಸ್ ಇನ್‌ಡೆಕ್ಸ್) ಜನವರಿ ೨೦೨೧ ರಲ್ಲಿ ಶೇಕಡ ೨.೫೧ ರಷ್ಟು ಇದದ್ದು ಮೇ ೨೦೨೧ ರಲ್ಲಿ ಶೇಕಡವಾರು ೧೨.೪ಕ್ಕೆ ಹೆಚ್ಚಳವಾಗಿದೆ. ಅನುಭೋಗಿ ಬೆಲೆ ಸೂಚ್ಯಂಕದ (ಕನ್ಸೂö್ಯಮರ್ ಪ್ರೆöÊಸ್ ಇನ್‌ಡೆಕ್ಸ್) ಆಧಾರದ ಮೇಲೆ ಹಣದುಬ್ಬರದ ದರವೂ ಕೂಡ ಶೇಕಡವಾರು ೪.೬ ರಿಂದ ಶೇಕಡವಾರು ೬.೩ಕ್ಕೆ ಹೆಚ್ಚಳವಾಗಿದೆ. ಇದು ಕೇಂದ್ರ ಬ್ಯಾಂಕು ನಿಗದಿಪಡಿಸಿರುವುದಕ್ಕಿಂತ ಹೆಚ್ಚಾಗಿದೆ. ನಿರುದ್ಯೋಗದರವೂ ಶೇಕಡಾವಾರು ೫.೫ ರಿಂದ ೧೧.೯ಕ್ಕೆ ಹೆಚ್ಚಾಗಿದ್ದು ಮತ್ತೊಂದು ಕಡೆ ಜಿಡಿಪಿಯು ಕುಸಿತಗೊಂಡು ಭಾರತದ ಒಟ್ಟಾರೆ ರ‍್ಥಿಕ ವ್ಯವಸ್ಥೆಯನ್ನು ಪಾತಾಳಕ್ಕೆ ತಳ್ಳಿದೆ. ೧೯೬೦ ಮತ್ತು ೭೦ರ ದಶಕದಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಗಗನಕ್ಕೇರಿದ್ದು ಬೆಲೆಯೂ ಕೂಡ ಮುಗಿಲು ಮುಟ್ಟಿತ್ತು ಅಂತಹ ಸಂರ‍್ಭದಲ್ಲಿ ಜನರಿಗೆ ನೀಡುತ್ತಿದ್ದ ಕೂಲಿಯು ಕೂಡ ಸ್ಥಗಿತವಾಗಿತ್ತು. ಈ ಪರಿಸ್ಥಿತಿಯನ್ನ ‘ಸ್ಟ್ಯಾಗ್ ಫ್ಲೇಶನ್’ ಎಂದು ಮೊದಲ ಬಾರಿಗೆ ೧೯೬೫ರಲ್ಲಿ ಜಾನ್ ಮ್ಯಾಕ್ಸಿಯೋಡ್ ಹೆಸರಿಸಿದರು.
ಪ್ರಸ್ತುತ ಭಾರತದ ರ‍್ಥವ್ಯವಸ್ಥೆಯಲ್ಲಿ ಕೂಡ ಇದೇ ಸಮಸ್ಯೆ ತಲೆದೋರಿದೆ ಅಂದರೆ, ಅತಿ ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ, ಏರುತ್ತಿರುವ ಬೆಲೆಯಿಂದ ಉಂಟಾಗಿರುವ ಹಣದುಬ್ಬರ ಜಿಡಿಪಿ ಅತೀ ಕಡಿಮೆ ಪ್ರಮಾಣಕ್ಕೆ ಇಳಿಮುಖವಾಗಿರುವುದು ಸ್ಥಗಿತ ಹಣದುಬ್ಬರದ ಪರಿಸ್ಥಿತಿಯ ಹೊಸ್ತಿಲಿನಲ್ಲಿ ಇಂದು ಭಾರತ ನಿಂತಿದೆ. ಇಂತಹ ಸಂರ‍್ಭದಲ್ಲಿ ಎದುರಾಗಿರುವ ರ‍್ಥಿಕ ಸಮಸ್ಯೆಯನ್ನು ಹೋಗಲಾಡಿಸಲು ಭಾರತ ರ‍್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಆದರೆ ಭಾರತ ರ‍್ಕಾರ ಅಥವಾ ಕೇಂದ್ರ ಬ್ಯಾಂಕ್ ಏನಾದರೂ ಕಠಿಣ (ರಿಜಿಡ್) ವಾದಂತಹ ಹಣಕಾಸಿನ ನೀತಿಯನ್ನು ಅನುಸರಿಸುವುದಾದರೆ ಬಡ್ಡಿದರ ಅಧಿಕವಾಗುತ್ತದೆ, ಅಧಿಕ ವಾದಂತಹ ಬಡ್ಡಿ ದರದಿಂದ ಹಣದ ಪೂರೈಕೆ ಕಡಿಮೆಯಾಗಿ, ಹೂಡಿಕೆ ಪ್ರಮಾಣ ಕಡಿಮೆಯಾಗಿ ಇದರಿಂದ ಉಳಿತಾಯ, ನಿರುದ್ಯೋಗ, ಉದ್ಯೋಗದ ಅವಕಾಶಗಳು ಸರಕುಗಳಿಗೆ ಬೇಡಿಕೆ, ಎಲ್ಲವೂ ಕೂಡ ಕಡಿಮೆಯಾಗುತ್ತದೆ. ಇದರಿಂದ ಭಾರತ ದೇಶದಲ್ಲಿ ಕುಗ್ಗಿರುವ ಜಿಡಿಪಿಯು ಮತ್ತಷ್ಟು ಉಲ್ಬಣ ಗೊಳ್ಳುವಂತಹ ಪರಿಸ್ತಿಗೆ ಹೋಗಬಹುದು.
ಹಾಗೆ ಮತ್ತೊಂದು ಕಡೆ ಭಾರತ ರ‍್ಕಾರ ಈ ಸ್ಥಗಿತ ಹಣದುಬ್ಬರದ ವ್ಯವಸ್ಥೆಯ ಹೊಸ್ತಿಲಿನಲ್ಲಿರುವ ಭಾರತದ ರ‍್ಥವ್ಯವಸ್ಥೆಯನ್ನು ಸರಿದೂಗಿಸಲು ಏನಾದರೂ ಸಡಿಲವಾದಂತಹ ಹಣಕಾಸು ಮತ್ತು ಕೋಶಿಯ ನೀತಿಯನ್ನು ಅನುಸರಿಸುವುದಾದರೆ ಬ್ಯಾಂಕಿನ ಬಡ್ಡಿದರ ಕಡಿಮೆಯಾಗಿ ಹಣದ ಪೂರೈಕೆ ಹೆಚ್ಚಳವಾಗಿ, ಹೂಡಿಕೆ ಹೆಚ್ಚಳವಾಗಿ ಉತ್ಪಾದನಾಂಗಗಳಿಗೆ ಬೇಡಿಕೆ ಹೆಚ್ಚಾಗಿ ಉತ್ಪಾದನೆ ಹೆಚ್ಚಾಗಿ ಉದ್ಯೋಗವಕಾಶಗಳು ಕೂಡ ಅಧಿಕವಾಗಬಹುದು. ಇದರಿಂದ ಜನರಿಗೆ ಆದಾಯದ ಅರಿವು ಹೆಚ್ಚಾಗಿ ಕೊಂಡುಕೊಳ್ಳುವ ಸಾರ‍್ಥ್ಯ ಅಧಿಕವಾಗಿ ಭಾರತ ದೇಶದ ಜಿಡಿಪಿಯು ಕೂಡ ಅಧಿಕವಾಗುವಂತಹ ಸಂತೋಷದಾಯಕ ಸಂರ‍್ಭ ಒಂದು ಕಡೆಯಾದರೆ ಮತ್ತೊಂದು ಕಡೆ ಹೆಚ್ಚು ಬೇಡಿಕೆ ಉಂಟಾಗುವುದರಿಂದ ಬೆಲೆ ಕೂಡ ಅಧಿಕವಾಗುತ್ತದೆ, ಬೆಲೆ ಅಧಿಕವಾದಂತೆ ವೆಚ್ಚ ತಳ್ಳುವಿಕೆಯ ಹಣದುಬ್ಬರ (ಕಾಸ್ಟ್ ಪುಶ್ ಇನ್‌ಪ್ಲೇಶನ್) ಅಥವಾ ಬೇಡಿಕೆ ತಳ್ಳುವಿಕೆಯ ಹಣದುಬ್ಬರ ಡಿಮ್ಯಾಂಡ್ ಫುಲ್ ಇನ್ಫ್ಲೇಶನ್ (ಡಿಮಾಂಡ್ ಪುಲ್ ಇನ್‌ಪ್ಲೇಶನ್) ತೀಷ್ಣವಾಗಬಹುದು.
ಆದ್ದರಿಂದ ಈ ಪರಿಸ್ಥಿತಿಯನ್ನು ಸರಿದೂಗಿಸಲು ಹಣಕಾಸು ನೀತಿಯಾಗಲಿ, ಕೋಶಿಯ ನೀತಿಯಾಗಲಿ ಇವುಗಳನ್ನು ಯಾವ ರೀತಿ ಅನುಸರಿಸಬೇಕು ಎನ್ನುವಂಥದ್ದು ರ‍್ಕಾರದ ಮುಂದಿರುವಂತಹ ಒಂದು ದೊಡ್ಡ ಸವಾಲಾಗಿದೆ.
ಹಣದುಬ್ಬರಕ್ಕೆ ಕಾರಣಗಳು.ಹಣದುಬ್ಬರಕ್ಕೆ ಯಾವುದೋ ಒಂದೇ ಒಂದು ಕಾರಣ ಎಂದು ಹೇಳುವುದಕ್ಕೆ ಆಗುವುದಿಲ್ಲ ಅದಕ್ಕೆ ಹಲವಾರು ಅಂಶಗಳು ಕಾರಣವಾಗಿರುತ್ತದೆ.
ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಗಗನಕ್ಕೇರಿದೆ, ಒಂದು ಲೀಟರ್ ಗೆ ಮೂರು ಅಂಕಿ (ತ್ರಿಬಲ್ ಡಿಜಿಟ್) ಬೆಲೆಯನ್ನ ಪಾವತಿಸುತ್ತಿದ್ದೇವೆ, ಆದರೆ ಅಂತರರಾಷ್ಟ್ರೀಯಮಟ್ಟದಲ್ಲಿ ಇಷ್ಟೇ ಬೆಲೆ ಇದೆಯೇ ಎಂಬ ಪ್ರಶ್ನೆ ಬಂದರೇ, ಖಂಡಿತವಾಗಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇಷ್ಟು ಅಧಿಕವಾದ ಬೆಲೆಯಿಲ್ಲ. ಉದಯೋನ್ಮುಖ ರಾಷ್ಟ್ರಗಳಲ್ಲಿ ಇಷ್ಟರಮಟ್ಟಿಗೆ ಪೆಟ್ರೋಲ್ ಹಾಗೂ ಡೀಸೆಲ್ ನ ಬೆಲೆ ಅಧಿಕವಾಗಿಲ್ಲ.
ಕಾರ್ಮಿಕರಿಗೆ ಉದ್ಯೋಗವಕಾಶಗಳು ಕಡಿಮೆಯಾಗಿದೆ, ಅಂದರೆ ಅವರಿಗೆ ಕೊಂಡುಕೊಳ್ಳುವ ಸಾರ‍್ಥ್ಯ ತೀರ ಕಡಿಮೆಯಾಗಿದೆ, ಇದರಿಂದ ಬೇಡಿಕೆ ಕೂಡ ಕಡಿಮೆಯಾಗಿ ಉತ್ಪಾದಕರಿಗೆ ಉತ್ತೇಜನ ನೀಡದೇ ಇರುವ ಹಾಗೆ ಆಗಿದೆ, ಇದು ಕೂಡ ಹಣದುಬ್ಬಕ್ಕೆ ಕಾರಣವಾಗಿರುವ ಅಂಶ. ಆದರೆ ಮೂಲಭೂತವಾಗಿ ಇರುವಂತಹ ಸರಕುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ, ಅವುಗಳಿಗೆ ಬೆಲೆ ಅಧಿಕವಾಗಿದ್ದರೂ ಸಹ ಅಂತಹ ಸರಕುಗಳಿಗೆ ಬೇಡಿಕೆ ಕೂಡಾ ಇದ್ದೇ ಇದೆ. ಉದಾಹರಣೆ: ಅಕ್ಕಿ ಬೆಲೆ ೭೦, ೮೦ ರೂ ಆಗಿದ್ದರು ಬೇಡಿಕೆ ಕಡಿಮೆಯಾಗಿಲ್ಲ,
ಇದು ಮರ‍್ಷಲ್ ರವರ ಬೇಡಿಕೆ ಸಿದ್ಧಾಂತವನ್ನು ೧೮ ನೇ ಶತಮಾನದ ಕೊನೆಯಲ್ಲೀ ಟೀಕಿಸಿದ ಗಿಫಿನ್ರವರ ಗಿಫಿನ್ನಿನ ವಿರೋಧಾಭಾಸ (ಗೀಫಿನ್ ಪಾರಾಡಾಕ್ಸ್) ಅನ್ವಯಿಸುತ್ತದೆ. ಗೀಫಿನ್ ರವರ ವಿರೋಧಾಭಾಸದ ಪ್ರಕಾರ ರ‍್ಲ್ಯಾಂಡ್ ನಲ್ಲಿ ಒಮ್ಮೆ ಇದೇ ರೀತಿ ಹಣದುಬ್ಬರ ಹೆಚ್ಚಾಗಿ ಬಳಸುತ್ತಿದಂತಹ ನವಣೆ (ಮಿಲ್ಲೆಟ್ಸ್), ಮತ್ತು ಮಾಂಸ ಎರಡನ್ನು ಸಹ ಜನರು ಮುಖ್ಯ ಸರಕಾಗಿ ಬಳಸುತ್ತಿದ್ದರು, ಅದರಲ್ಲಿ ನವಣಿಯು ಮೂಲಭೂತವಾಗಿ ಹೆಚ್ಚಾಗಿ ಬಳಸುತ್ತಿದಂತಹ ಸರಕಾಗಿದು ಬೆಲೆ ಹೆಚ್ಚಾದರೂ ಸಹ ಜನರು ಅಂತಹ ಮೂಲಭೂತ ಸರಕುಗಳನ್ನು ತ್ಯಾಗ ಮಾಡಲಿಲ್ಲ, ಅಧಿಕವಾದ ಬೆಲೆ ಇದ್ದರೂ ಬೇಡಿಕೆ ಅಷ್ಟೇ ಇತ್ತು ಇದನ್ನು ಇಂಫಿರಿಯರ್ ಸರಕುಗಳನ್ನು (ಇನ್‌ಫೀರಿಯರ್ ಗೂಡ್ಸ್) ಎಂದು ಕರೆದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆಯು ಹೆಚ್ಚಾಗಿದೆಯೇ ಎಂದು ನೋಡಿದಾಗ ಭಾರತದ ಬೆಲೆಗೆ ಹೋಲಿಸಿದಾಗ ಅಂತರಾಷ್ಟಿçÃಯ ಮಟ್ಟದಲ್ಲಿ ಅಷ್ಟçರ ಮಟ್ಟಕ್ಕೆ ಬೆಲೆ ಏರಿಕೆ ಆಗಿಲ್ಲ. ಇದು ಭಾರತದ ರ‍್ಥ ವ್ಯವಸ್ಥೆಯ ಆಂತರಿಕ ಮಟ್ಟದಲ್ಲಿ ಪೆಟ್ರೋಲ್ ಡೀಸೆಲ್ ನ ಬೆಲೆ ಅಧಿಕವಾಗಿರುವುದು. ಏಕೆಂದರೆ ನಾವು ಬ್ಯಾರೆಲ್ ಲೆಕ್ಕದಲ್ಲಿ ಬೇರೆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ ಹಾಗೂ ಇದರಲ್ಲಿ ಅತಿ ಹೆಚ್ಚು ಆಮದು ಶುಲ್ಕವನ್ನು ಹಾಕಲಾಗುತ್ತಿದೆ ಮತ್ತು ಅಬಕಾರಿ ಶುಲ್ಕವನ್ನು (ಎಕ್ಸ್ಸೈಸ್ ಟಾಕ್ಸ್) ಕೂಡ ಹೇರಲಾಗಿದೆ, ಅದರ ಜೊತೆಗೆ ರಾಜ್ಯ ರ‍್ಕಾರಗಳು ಪೆಟ್ರೋಲ್ ಡೀಸೆಲ್ ನ ಮೇಲೆ ಮಾರಾಟ ತೆರಿಗೆಯನ್ನು ಸಹ ವಿಧಿಸಲಾಗುತ್ತಿದೆ.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ವಿಚಾರವು ಹಲವಾರು ವಿಮರ್ಶೆಗಳಿಗೆ ಒಳಪಟ್ಟಿದೆ. ಜನಸಾಮಾನ್ಯರಿಗೆ ಕೇಂದ್ರ ರ‍್ಕಾರವು ಹೇಳುತ್ತಿರುವುದೇನೆಂದರೆ ಕೋವಿಡ್ ೧೯ ನಿಂದ ಜನರು ಜೀವನವನ್ನು ನಡೆಸುವುದಕ್ಕೆ ಈಗಾಗಲೇ ಪ್ಯಾಕೇಜ್ ಗಳನ್ನ ಕೇಂದ್ರ ರ‍್ಕಾರ, ರಾಜ್ಯ ರ‍್ಕಾರಗಳು ಘೋಷಣೆ ಮಾಡಲಾಗಿದೆ. ಈ ಪ್ಯಾಕೇಜುಗಳ ಹೊರೆಯನ್ನ ಭರಿಸುವುದಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಅಧಿಕ ಮಾಡಿರುವುದಾಗಿ ಕೇಂದ್ರ ಸರ್ಕಾರ ಸಮರ್ಥನೆ ನೀಡಿದೆ.
ಸ್ಥಗಿತ ಹಣದುಬ್ಬರವನ್ನು ತಡೆಯಲು ತೆಗೆದುಕೊಳ್ಳಬಹುದಾದ ಕ್ರಮಗಳು.• ಕೋವಿಡ್ ೧೯ ಪಿಡುಗು ಬಂದಿರುವುದರಿಂದ ನಮಗೆ ಈಗಾಗಲೇ ತಿಳಿದಿದೆ ಒಂದು ಕಡೆ ಜಿಡಿಪಿ ಪ್ರಮಾಣ ಕಡಿಮೆಯಾಗಿದೆ, ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ, ಬೆಲೆಯಲ್ಲಿ ಅಧಿಕವಾಗಿದೆ, ಅಂದರೆ ಈ ಮೂರು ಅಂಶಗಳು ಒಟ್ಟಾರೆ ಕ್ರೂಡೀಕರಿಸಿ ೧೯೬೦ ಮತ್ತು ೭೦ ರ ದಶಕದಲ್ಲಿ ಈ ಪರಿಸ್ಥಿತಿಯನ್ನು ಸ್ಥಗಿತ ಹಣದುಬ್ಬರ (ಸ್ಟ್ಯಾಗ್ ಫ್ಲೇಶನ್) ಎಂದು ಜಾನ್ ಮ್ಯಾಕ್ಸಿಯೋಡ್ ರವರು ಕರೆದರು, ಪ್ರಸ್ತುತ ಇದೇ ಸಮಸ್ಯೆ ಭಾರತ ದೇಶದ ರ‍್ಥಿಕ ಪರಿಸ್ಥಿತಿಯಲ್ಲಿ ಇರುವುದರಿಂದ ಪೂರೈಕೆ ಅಂಶಕ್ಕೆ ಮಾರಕವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕೇಂದ್ರ ರ‍್ಕಾರ ಅಥವಾ ರಾಜ್ಯ ರ‍್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದೆ.
• ಭಾರತ ರ‍್ಕಾರವು ನೇರವಾಗಿ ಜನರಿಗೆ ವೆಚ್ಚ ಮಾಡುವ ತಂತ್ರವನ್ನ ರೂಡಿಸಬೇಕಾಗಿದೆ, ಏಕೆಂದರೆ ನೇರವಾಗಿ ವೆಚ್ಚವನ್ನು ಮಾಡುತ್ತಾ ಹೋದಂತೆ ಸರಕುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ, ಇದರಿಂದ ಉತ್ಪಾದನೆಯೂ ಕೂಡ ಅಲ್ಪಾವಧಿಯಲ್ಲಿ ಹೆಚ್ಚಾಗುತ್ತದೆ.
• ಪ್ರಸ್ತುತ ಸಂರ‍್ಭದಲ್ಲಿ ಮಧ್ಯಮ ಅವಧಿಯಲ್ಲಿ ಸಾರ‍್ಥ್ಯ ವೃದ್ದಿಗೆ (ಕ್ಯಪಾಸಿಟಿ ಬಿಲ್ಡಿಂಗ್), ಹೆಚ್ಚು ಆದ್ಯತೆಯನ್ನು ರ‍್ಕಾರಗಳು ನೀಡಬೇಕಾಗಿದೆ.
• ದರ‍್ಘಾವಧಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಕ್ಕೆ ರ‍್ಕಾರ ವಹಿಸಿಕೊಳ್ಳುವಂತಹ ಕ್ರಮಗಳನ್ನ ನಾವು ಅಲ್ಪಾವಧಿ ಮತ್ತು ಮಧ್ಯಮವಧಿಯ ಮಿಶ್ರಣದಲ್ಲಿ ಮಾಡಬೇಕಾಗುತ್ತದೆ, ಕೋವಿಡ್ ಸಂರ‍್ಭದಲ್ಲಿ ಭಾರತವು ಸೇರಿ ಹಲವಾರು ರಾಷ್ಟ್ರಗಳು ರ‍್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿದವು. ಅವುಗಳಲ್ಲಿ USಂ ೯.೮ ಶೇಕಡವಾರು, Uಏ ೧೬.೬ ಶೇಕಡವಾರು, ಂUSಖಿಖAಐIA ೧೮.೮ ಶೇಕಡವಾರು ಆ ದೇಶದ ಜಿಡಿಪಿಯ ಇಷ್ಟು ಪ್ರಮಾಣದಷ್ಟು ರ‍್ಥಿಕ ಪ್ಯಾಕೇಜ್ ಗಳನ್ನ ನೀಡಿದವು ಆದರೆ ಭಾರತದ ಜಿಡಿಪಿಯ ಶೇಕಡವಾರು ೦.೯ ರಷ್ಟು ರ‍್ಥಿಕ ಪ್ಯಾಕೇಜ್ ಅನ್ನು ಕೋವಿಡ್ ಸಂರ‍್ಭದಲ್ಲಿ ನೀಡಿದೆ, ಭಾರತದ ರ‍್ಥಿಕ ಪ್ಯಾಕೇಜ್ ಹೆಚ್ಚಾಗಿಯೇ ಇದೆ ಆದರೆ ಈ ಪ್ಯಾಕೇಜ್ ರ‍್ಗಾವಣೆ ಆಗುವಾಗ ನಿಜವಾಗಲೂ ಫಲಾನುಭವಿಗಳಿಗೆ ಇದು ತಲುಪಿದೆಯೇ? ಎಂದು ಪ್ರಶ್ನಿಸುವುದಾದರೇ ನೈಜ ಫಲಾನುಭವಿಗಳಿಗೆ ಅಂದರೆ ಸೀಮಾಂತ ರೈತರಿಗೆ, ವಲಸೆ ಕರ‍್ಮಿಕರಿಗೆ ಇದು ಸರಿಯಾದ ಪ್ರಮಾಣದಲ್ಲಿ ಎನ್ನಬಹುದು.
• ಅಲ್ಪಾವಧಿಯಲ್ಲಿ ಜನರು ವೆಚ್ಚ ಮಾಡುವುದನ್ನ ಅಥವಾ ಕೊಂಡು ಕೊಳ್ಳುವಂತಹ ಸಾರ‍್ಥ್ಯವನ್ನ ಹೆಚ್ಚು ಮಾಡಬೇಕು, ಅದಕ್ಕೆ ಸಂಬಂಧಪಟ್ಟಹಾಗೆ ತೆರಿಗೆ ನೀತಿಗಳಲ್ಲಿ ಒಂದಷ್ಟು ಸುಧಾರಣೆಗಳನ್ನು ತರಬೇಕು ಇದು ಮಾಡಿದಾಗ ಜನರ ಹತ್ತಿರ ಹಣದ ಪ್ರಮಾಣ ಹೆಚ್ಚಾಗಿ, ಕೊಂಡು ಕೊಳ್ಳುವಂತಹ ಸಾರ‍್ಥ್ಯ ಹೆಚ್ಚಾಗುತ್ತದೆ. ಮಧ್ಯಮ ಅವಧಿ ನೀತಿ-ನಿರೂಪಣೆಗಳನ್ನು ನೋಡುವುದಾದರೆ, ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಸೌರ‍್ಯಗಳು ಮತ್ತು ರಚನಾತ್ಮಕ ಬದಲಾವಣೆಗಳು, ಭಾರತದ ರ‍್ಥಿಕ ವ್ಯವಸ್ಥೆಯಲ್ಲಿ ನೀಡಿದಂತಹ ಮೊದಲ ಕೋವಿಡ್ ೧೯ ರ ಪ್ಯಾಕೇಜ್ನಲ್ಲಿಯು ಕೂಡ ೨೦ ಲಕ್ಷ ಕೋಟಿ ಪ್ಯಾಕೇಜ್ನಲ್ಲಿ ೨೦ ಸಾವಿರ ಕೋಟಿ ರೂಪಾಯಿಗಳನ್ನ ಒSಒಇ ಗಳಿಗೆ ನೀಡಿದರು. ಒSಒಇ ಗಳಲ್ಲಿ ಉದ್ಯಮಶೀಲರ ಬಂಡವಾಳ ಸಂಚಯನವನ್ನ ವೃದ್ಧಿಪಡಿಸಿ ಉತ್ಪಾದನಾ ಘಟಕಗಳನ್ನ ಪುಷ್ಟಿಗೊಳಿಸಬಹುದು.
ಈ ಕ್ರಮವು ಭಾರತ ದೇಶಕ್ಕೆ ವರವೂ ಹೌದು, ಶಾಪವೂ ಹೌದು ಎಂದೇ ಹೇಳಬಹುದು ಏಕೆಂದರೆ, ಪ್ರಾಪಂಚಿಕವಾಗಿ ಜನಸಂಖ್ಯೆ ಅಂಶದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವಂತಹ ರಾಷ್ಟ್ರ ಮತ್ತು ಭೌಗೋಳಿಕವಾಗಿ ಬಹಳ ವಿಸ್ತಾರವಾದಂತಹ ರಾಷ್ಟ್ರ. ವರವಾಗಿ ತೆಗೆದುಕೊಳ್ಳುವುದಾದರೆ, ಸರಕುಗಳಿಗೆ ಬೇಡಿಕೆ ಏನೂ ಕೊರತೆಯಿಲ್ಲ ಆದರೆ ರ‍್ಕಾರವು ಯಾವುದೇ ಪ್ಯಾಕೇಜ್ ಅನ್ನು ನೀಡುವಾಗ ಅಥವಾ ರ‍್ಗಾವಣೆ ಮಾಡುವಾಗ ನಿಜವಾದ ಫಲಾನುಭವಿಗಳಿಗೆ ಸೇರಬೇಕಾದರೆ ಯು ಐ ಡಿ (ಯೂನಿರ‍್ಸಲ್ ಐಡೆನ್‌ಟಿಟಿ) ಅಂದರೆ ಆಧಾರ್ ಕರ‍್ಡ್ ನ ಮೂಲಕ ಮನರೇಗಾ, ಪಿ.ಎಂ.ಕಿಸಾನ್ ಯೋಜನೆಗಳ ಅಡಿಯಲ್ಲಿ ಕೂಲಿಗಳನ್ನು ನೀಡಿ ಅನುಭೋಗದ ಪ್ರಮಾಣವನ್ನ ಹೆಚ್ಚಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ನಾಗರಿಕ ವಿಮಾನಯಾನ (ಸಿವಿಲ್ ಏವಿಯೇಷನ್), ಸಣ್ಣ ಕಂಪನಿಗಳಿಗೆ ತೆರಿಗೆ ವಿನಾಯಿತಿ ಯನ್ನ ನೀಡಬೇಕಾಗಿದೆ.
• ವಿದೇಶಿ ವ್ಯಾಪಾರ, ವಿದೇಶಿ ಹೂಡಿಕೆಗಳಿಗೆ ಹೆಚ್ಚು ಗಮನಹರಿಸಿ ನೀತಿ-ನಿರೂಪಣೆಗಳನ್ನು ಮಾಡಿದಾಗ ಬೇರೆ ದೇಶದಿಂದ ನಮ್ಮ ದೇಶಕ್ಕೆ ಬರುವಂತಹ ವಿದೇಶಿ ನೇರ ಹೂಡಿಕೆ ಹೆಚ್ಚಾಗಿ, ಭಾರತ ದೇಶದಲ್ಲಿ ದರ‍್ಘಾವಧಿಯಲ್ಲಿ ಒಂದು ಸ್ಥಿರತೆಯನ್ನು ಕಾಪಾಡಿಕೊಂಡು ರ‍್ಥಿಕ ಪ್ರಗತಿಯನ್ನು ಕೂಡ ಅನುಸರಿಸುವುದಕ್ಕೆ ಹಾಗು ಸ್ಥಗಿತ ಹಣದುಬ್ಬರದ ಹೊಸ್ತಿಲಿನಲ್ಲಿರುವ ಪರಿಸ್ಥಿತಿಯಿಂದ ಹೊರಗೆ ಬರುವುದಕ್ಕೆ ಅನುಕೂಲವಾಗುತ್ತದೆ. ಈ ಸ್ಥಗಿತ ಹಣದುಬ್ಬರದ ಪರಿಸ್ಥಿತಿಯಿಂದ ಹೊರಬರಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂಥದ್ದು ಕೇಂದ್ರ ಸರ್ಕಾರ ಸಡಿಲವಾಗಿರುವ ಹಣಕಾಸು ನೀತಿಯನ್ನ ಅಥವಾ ಕಠಿಣವಾದಂತಹ ಹಣಕಾಸು ಹಾಗೂ ಕೋಶಿಯ ನೀತಿಯನ್ನ ಅನುಸರಿಸಬೇಕಾಗಿರುವಂತದ್ದು ಭಾರತ ರ‍್ಕಾರದ ಮುಂದಿರುವ ಒಂದು ದೊಡ್ಡ ಸವಾಲು ಎಂದು ಹೇಳಬಹುದು.