ಚಾಮರಾಜನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಪರಿಶಿಷ್ಟ ಪಂಗಡ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ ಶ್ರೀನಿವಾಸನಾಯಕ ಅವರಿಗೆ ಜಿಲ್ಲಾ ಕಾಂಗ್ರೆಸ್ ಎಸ್ಟಿ ಮೋರ್ಚಾ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಪರಿಶಿಷ್ಟಪಂಗಡ ವಿವಿದೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಎಸ್ಟಿಮೋರ್ಚಾ ಜಿಲ್ಲಾಧ್ಯಕ್ಷ ಬಿಕಾಂ ಮಹದೇವನಾಯಕ ರಾಜ್ಯಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ಇದೇ ವೇಳೆ ಮಹದೇವನಾಯಕ ಮಾತನಾಡಿ, ಪಕ್ಷ ನೀಡಿರುವ ಮಹತ್ವದ ಹೊಣೆಗಾರಕೆಯನ್ನು ಎಸ್ಟಿ ವಿಭಾಗದ ನೂತನ ಪ್ರಧಾನ ಕಾರ್ಯದರ್ಶಿಯವರು ಸಮರ್ಥವಾಗಿ ನಿಭಾಯಿಸಿ. ಪಕ್ಷಸಂಘಟನೆಗೆ ಮುಂದಾಗಬೇಕು, ಮುಂಬರುವ ಜಿಲ್ಲಾ, ತಾಲೂಕು, ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲುವಂತೆ ಶ್ರಮವಹಿಸಬೇಕು ಎಂದರು.
ನಗರಸಭೆ ಮಾಜಿಸದಸ್ಯ ಚಂಗುಮಣಿ, ಮಾಜಿ.ಗ್ರಾ,ಪಂ ಉಪಾಧ್ಯಕ್ಷ ಕೆ,ಎಸ್‌ನಾಗರಾಜು, ಮಹೇಶ್ ಪಟೇಲ್, ಹರದನಹಳ್ಳಿಕುಮಾರ್ ಹಾಜರಿದ್ದರು.