ಮೈಸೂರು -20 ಶೇ.7.5 ಮೀಸಲಾತಿ ಸಂವಿಧಾನ ನಮ್ಮ ಸಮಾಜಕ್ಕೆ ನೀಡಿರುವ ಹಕ್ಕು. ನಮ್ಮ ಹೋರಾಟ ಸಾಮಾಜಿಕ ನ್ಯಾಯಕ್ಕಾಗಿ. 40 ವರ್ಷಗಳಿಂದ ನಿರಂತರ ಶೋಷಣೆಗೆ ಒಳಗಾಗಿರುವ ನಾವು ಕಡೆಯದಾಗಿ ಬೀದಿಗೆ ಇಳಿದಿದ್ದೇವೆ. ಮೀಸಲು ಪ್ರಮಾಣವನ್ನು ಶೇ7.5 ಗೆ ಏರಿಕೆ ಮಾಡುವಂತೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪೂಜ್ಯರು ಸತತ ಪಾದಯಾತ್ರೆ ನಡೆಸುತ್ತಿದ್ದರೂ,100 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಸತ್ಯಾಗ್ರಹ ಕೈಗೊಂಡಿದ್ದರೂ ಸರ್ಕಾರ ಸ್ಪಂದಿಸದಿರುವುದು.ಸರಕಾರ ಸೌಜನ್ಯ ತೋರುತ್ತಿಲ್ಲ.
.ಹೀಗಾಗಿ ರಮ್ಮನಹಳ್ಳಿ ಸ್ಯಾಟಲೈಟ್ ಬಸ್ ಸ್ಟಾಪ್ ನಲ್ಲಿ ಮಾನವ ಸರಪಳಿ ಮಾಡುವುದರ ಮುಖಾಂತರ ವಾಲ್ಮೀಕಿ ಸರ್ಕ್‌ಲ್ ನಲ್ಲಿ ಇಂದು ಸ್ವಾಮೀಜಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ವಾಲ್ಮೀಕಿ ನಾಯಕರ ಧ್ವನಿ ಸಂಘ ಮಾನವ ಸರಪಳಿ ಮತ್ತು ಹೋರಾಟ ಪ್ರತಿಭಟನೆ ಮಾಡಿದರು. ಚಿತ್ರದಲ್ಲಿ ವಾಲ್ಮೀಕಿ ನಾಯಕರ ಧ್ವನಿ ಸಂಘದ ಅಧ್ಯಕ್ಷ ಮಹೇಶ್, ಜಯಸಿಂಹ ಪೈಲ್ವಾನ್, ಶಿವು, ಯೋಗೇಶ್,ಸೋಮಣ್ಣ ಶಿವು ರಮನಹಳ್ಳಿ ಕ್ಯಾತಮಾರನಹಳ್ಳಿ ಲೋಕೇಶ್ ಬಂಡಿಗೇರಿ ವೆಂಕಟಯ್ಯ ಸೋಮಶೇಖರ್ ನಾಗರಾಜು ಶಿವು ರಾಜಶೇಖರ್ ಶಂಕರ ಮಂಜು ನಾಗೇಂದ್ರ, ಸಿದ್ದಪ್ಪ, ಪಾಪಣ್ಣ, ಶೇಖರ, ಮಂತಾದವರು ಹಾಜರಿದ್ದರು