ಚಾಮರಾಜನಗರ: ಜಿಲ್ಲೆಯು ಕಳೆದ ಮಾರ್ಚ್ ಹಾಗೂ ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೯೨.೧೩ರಷ್ಟು ಫಲಿತಾಂಶ ಪಡೆದಿದೆ.
ಜಿಲ್ಲೆಯಲ್ಲಿ ೧೧೫೪೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ೧೦೬೩೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಚಾಮರಾಜನಗರ ತಾಲೂಕಿನಲ್ಲಿ ೩೭೯೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೩೩೩೦ ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಶೇ.೮೭.೭೦ರಷ್ಟು ಫಲಿತಾಂಶ ಬಂದಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ೨೩೯೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೨೧೭೩ ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಶೇ.೯೦.೬೨ರಷ್ಟು ಫಲಿತಾಂಶ ಬಂದಿದೆ. ಹನೂರು ತಾಲೂಕಿನಲ್ಲಿ ೨೨೨೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೨೧೫೩ ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಶೇ.೯೬.೮೯ರಷ್ಟು ಫಲಿತಾಂಶ ಬಂದಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ೨೧೬೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೨೦೫೮ ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಶೇ. ೯೫.೦೬ರಷ್ಟು ಫಲಿತಾಂಶ ಬಂದಿದೆ. ಯಳಂದೂರು ತಾಲೂಕಿನಲ್ಲಿ ೯೬೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೯೨೪ ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಶೇ.೯೫.೭೫ರಷ್ಟು ಫಲಿತಾಂಶ ಬಂದಿದೆ.
ಒಟ್ಟು ೫೮೧೮ ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೫೨೧೯ ಮಂದಿ ತೇರ್ಗೆಡೆಯಾಗಿದ್ದು, ಶೇ. ೮೯.೭೦ರಷ್ಟು ಫಲಿತಾಂಶ ಬಂದಿದೆ. ಒಟ್ಟು ೫೭೨೯ ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೫೪೧೯ ಮಂದಿ ತೇರ್ಗಡೆಯಾಗಿದ್ದು ಶೇ. ೯೪.೫೯ರಷ್ಟು ಫಲಿತಾಂಶ ಬಂದಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ. ೯೨.೫೦ರಷ್ಟು ಹಾಗೂ ನಗರ ಪ್ರದೇಶ ವಿದ್ಯಾರ್ಥಿಗಳು ಶೇ. ೯೧.೪೯ರಷ್ಟು ಫಲಿತಾಂಶ ಪಡೆದಿದ್ದಾರೆ.
ಸರ್ಕಾರಿ ಶಾಲೆಗಳ ೫೮೮೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೫೩೩೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. ೯೦.೫೬ರಷ್ಟು ಫಲಿತಾಂಶ ದಾಖಲಾಗಿದೆ. ಅನುದಾನಿತ ಶಾಲೆಗಳ ೨೮೪೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೨೫೯೧ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ. ೯೧.೧೦ರಷ್ಟು ಫಲಿತಾಂಶ ಬಂದಿದೆ. ಅನುದಾನ ರಹಿತ ಶಾಲೆಗಳ ೨೮೧೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೨೭೧೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. ೯೬.೪೫ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಯಲ್ಲಿ ಒಟ್ಟು ೫೨ ಶಾಲೆಗಳು ಶೇ. ೧೦೦ರಷ್ಟು ಫಲಿತಾಂಶ ಪಡೆದಿವೆ. ೨೨ ಸರ್ಕಾರಿ ಶಾಲೆ, ೬ ಅನುದಾನಿತ ಹಾಗೂ ೨೪ ಅನುದಾನ ರಹಿತ ಶಾಲೆಗಳು ಶೇ. ೧೦೦ರಷ್ಟು ಫಲಿತಾಂಶ ಪಡೆದಿವೆ. ಚಾಮರಾಜನಗರ ತಾಲೂಕಿನ ೭ ಸರ್ಕಾರಿ ಶಾಲೆಗಳು, ೧ ಅನುದಾನಿತ ಹಾಗೂ ೫ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೧೩ ಶಾಲೆಗಳು, ಗುಂಡ್ಲುಪೇಟೆ ತಾಲೂಕಿನ ೪ ಸರ್ಕಾರಿ, ೧ ಅನುದಾನಿತ ಹಾಗೂ ೧ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೬ ಶಾಲೆಗಳು, ಹನೂರು ತಾಲೂಕಿನ ೬ ಸರ್ಕಾರಿ ಹಾಗೂ ೬ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೧೨ ಶಾಲೆಗಳು, ಕೊಳ್ಳೇಗಾಲ ತಾಲೂಕಿನ ೨ ಸರ್ಕಾರಿ, ೩ ಅನುದಾನಿತ ಹಾಗೂ ೯ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೧೪ ಶಾಲೆಗಳು ಮತ್ತು ಯಳಂದೂರು ತಾಲೂಕಿನ ೩ ಸರ್ಕಾರಿ, ೧ ಅನುದಾನಿತ ಹಾಗೂ ೩ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೭ ಶಾಲೆಗಳು ಶೇ. ೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ.