ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್
(ಜನನ 3.7.1933 : ನಿಧನ 20.2.2023)

ಎಸ್.ಕೆ. ಭಗವಾನ್

1962-2002ನಾಲ್ಕುದಶಕ ಪರ್ಯಂತ
ಛಾಯಾಗ್ರಾಹಕ ದೊರೆ ಜೊತೆಗೂಡಿ
ದೇಶದ ಪ್ರಪ್ರಥಮ ಭಲೇಜೋಡಿ
ನಿರ್ಮಾಪಕ-ನಿರ್ದೇಶಕ ಪಟ್ಟಗಿಟ್ಟಿಸಿದ!
ಮೊಟ್ಟಮೊದಲ ಬಾಂಡ್ ಕನ್ನಡದ
ಸಿಐಡಿ.999 ಸಿನಿಮಾಗಳನ್ನು ನೀಡಿದ
ಕನ್ನಡ ಚಲನಚಿತ್ರ ಇತಿಹಾಸದ 
ಕಲೆಗಾರ ತಲೆಗಾರ ದಂತಕಥೆಯಾದ!

ಬಿ.ದೊರೈರಾಜ್- ಎಸ್.ಕೆ.ಭಗವಾನ್
ಚಂದನವನ ತೆರೆಗಿತ್ತ 50ಕ್ಕೂ ಹೆಚ್ಚು
ಚಲನಚಿತ್ರಗಳಾ ಪೈಕಿ 25ಕ್ಕೂ ಹೆಚ್ಚು
ಕಾದಂಬರಿ ಆಧಾರ(ಪ್ರೇರಿತ)ದ ಕಿಚ್ಚು
ಕನ್ನಡ ಸಂಸ್ಕೃತಿ ನಾಗರಿಕತೆ ಕೆಚ್ಚು
ನಾಡಿನಾದ್ಯಂತ ಹಿಡಿಸಿ ಸ್ವದೇಶಿಹುಚ್ಚು
ಸಕಲ ಕಲೆಗಳ ಸೌಂದರ್ಯ ಖನಿ
ಭವ್ಯ ಪರಂಪರಾ ನಗರದ ಬನಿ
ಸವ್ಯ ಸಾಂಸ್ಕೃತಿಕ ರಾಜಧಾನಿ
ಮೈಸೂರು ನಗರದಲ್ಲಿ ಜನಿಸಿ
ನವರಸಕಲಾ ಇತಿಹಾಸ ಬರೆದ
ಚಲನಚಿತ್ರ ಚಂದ್ರಹಾಸ ನೀ..!

ಅತಿಹೆಚ್ಚು ರಾಜ್ಯ(ಗಳ) ಪ್ರಶಸ್ತಿ
ಅತ್ಯಮೂಲ್ಯ ರಾಷ್ಟ್ರೀಯ ಪ್ರಶಸ್ತಿ
ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿ
ಬಹುಮಾನ ಬಿರುದುಗಳಾಸ್ತಿ
ಪುರಸ್ಕಾರ ಪಡೆದಿದ್ದ ಕನ್ನಡದ ಆಸ್ತಿ
ದೊರೆ-ಭಗವಾನ್ ಅವಳಿ ಹೆಸರು
ಆಚಂದ್ರಾರ್ಕ ಕನ್ನಡನಾಡ ಉಸಿರು

ಹೊಸಬರಿಗೆ ಸುವರ್ಣಾವಕಾಶ ನೀಡಿ
ಜೀವ ಜೀವನ ತುಂಬಿದ ಶ್ರೀಕೃಷ್ಣಗಾರುಡಿ
ಹಳಬರನ್ನೂ ಕಡೆಗಣಿಸದೆ ಪುನರುತ್ಥಾನದಡಿ
ಪುರಸ್ಕಾರ ಪುನರಾಶ್ರಯ ಪುನರ್ಜನ್ಮ ನೀಡಿ
ಎನಿಸಿದ್ದರು ಚೊಚ್ಚಲ ಅಜಾತಶತ್ರು-ಜೋಡಿ
ಒಬ್ಬರನಂತರ ಇನ್ನೊಬ್ಬ ತೆರಳಿದರು ನೋಡಿ
ಸಿನಿಲೋಕವನ್ನು ಪ್ರೀತಿಸಿ-ಗೌರವಿಸಿದಾ ಮೋಡಿ
ಛಾಯಾಗ್ರಾಹಕ-ನಟ-ನಿರ್ಮಾಪಕ-ನಿರ್ದೇಶಕ
ನಿಮಗಿದೋ ನನ್ನ ಗೌರವಪೂರ್ವಕ ಗುಣಗಾನ
ಮನದಾಳದ ಭಾವಪೂರ್ಣ ಅಶ್ರುತರ್ಪಣ..!
ಕುಮಾರಕವಿ ಬೋ.ನಾ.ನಟರಾಜ
9036976471