ಚಾಮರಾಜನಗರ ಭಾಗದ ಉಪ್ಪಾರ ಸಮಾಜದ ಸ್ವಾಮಿಜಿಗಳಾದ  ಶ್ರೀ ಶ್ರೀ ಚಿನ್ನಸ್ವಾಮಿ ಮಹಾಸ್ವಾಮೀಜಿಯವರು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಇಂದು 12 ಘಂಟಿಗೆ ಶೀವೈಕ್ಯರಾದರು, ಇವರಿಗೆ 78  ವರ್ಷ ವಯಸ್ಸಾಗಿತ್ತು ಇವರ ಅಂತ್ಯ ಕ್ರಿಯೆಯನ್ನು ನಾಳೆ ಮದ್ಯಾಹ್ನ 2 ಘಂಟೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಯ್ಯನ ಸರಗೂರು ಮಠ ದಲ್ಲಿ ನಡೆಯಲಿದೆ, ಮಲೆ ಮಹದೇಶ್ವರ ಬೆಟ್ಟದ ಎಣ್ಣೆ ಮಜ್ಜನ ಸೇವಾಕರ್ತರು ನಮ್ಮ ಸಮಾಜದ ಗುರುಗಳು ಎಂದು ತಿಳಿಸಲು ವಿಷಾದಿಸುತ್ತೇನೆ. ಇವರ ನಿಧನಕ್ಕೆ ಚಾಮರಾಜನಗರ ಜಿಲ್ಲಾ ಉಪ್ಪಾರ ಯುವಕ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ,


ಇವರು ಕರ್ನಾಟಕದ  ಪ್ರಸಿದ್ಧ ಯಾತ್ರಾ ಸ್ಥಳ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಮಾಡುತ್ತಿರುವ ಉಪ್ಪಾರ ಸಮಾಜದ ಕುಲದ ಶಿವ ಶರಣ ದಂಪತಿಗಳಾದ ರಾಮವ್ವ ಹಾಗೂ  ಮೂಗಪ್ಪ  (ಶೆಟ್ಟಿ ಸರಗೂರುಪ್ಪ) ದಂಪತಿಗಳು ಎಣ್ಣೆ ಮಜ್ಜನ ಸೇವೆಯನ್ನು ಭಕ್ತಿಯಿಂದ ಈಗಲೂ ಮಹದೇಶ್ವರನಿಗೆ ಪೂಜೆ ಮಾಡುತ್ತಿರುವ ವಂಶದವರು ಮಠದ ಪೂಜ್ಯ ಸ್ವಾಮೀಜಿಗಳಾದ ಚಿನ್ನಸ್ವಾಮಿ ಅವರು  ಪ್ರತಿ ತಿಂಗಳು ಅಮಾವಾಸ್ಯೆ ಯೆಂದು ಎಣ್ಣೆ ಮಜ್ಜನ  ಸೇವೆಯನ್ನು ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರನಿಗೆ ಪೂಜೆ ಮಾಡಿ ಬರುವ ಭಕ್ತರಿಗೆ ಎಣ್ಣೆ ಮಜ್ಜನದ ಪ್ರಸಾದವನ್ನು ನೀಡುತ್ತಿದ್ದರು ಭಕ್ತಾದಿಗಳು ಎಣ್ಣೆಮಜ್ಜನ ಸೇವೆಗೆ ಪಾತ್ರರಾಗುತ್ತಿದ್ದರು.