ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಪ್ರಬಲರಾದ ಸಾಮಂತರಲ್ಲಿಚಿತ್ರದುರ್ಗದ ಪಾಳೆಯಗಾರರುಕೂಡ ಪ್ರಮುಖರು. ಇವರ ರಾಜಧಾನಿ ದುರ್ಗದ ಸುತ್ತ ಬಲವಾದ ಕೋಟೆಕೊತ್ತಲು ನಿರ್ಮಿಸಿಕೊಂಡು ಇನ್ನೂರ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಜನಪ್ರಿಯ ಆಳ್ವಿಕೆ ನಡೆಸಿದರು. ಚಿತ್ರದುರ್ಗದ ನಾಯಕರ ಇತಿಹಾಸ ತಿಳಿಯಲು ಬಖೈರುಗಳು, ಕೈಫಿಯತ್ತುಗಳು, ಜಾನಪದ ಕಥೆಗಳು, ಶಾಸನಗಳು ಮತ್ತು ಬಿಜಾಪುರ ಕೆಳದಿ ಮೈಸೂರು ಇತರೆ ಸಮಕಾಲೀನ ಸಂಸ್ಥಾನಗಳಲ್ಲಿ ಇರುವ ದಾಖಲೆಗಳಲ್ಲಿ ಸಾಕಷ್ಟು ಮಾಹಿತಿ ದೊರಕುತ್ತದೆ.
ಚಿತ್ರದುರ್ಗದ ನಾಯಕರು ಕ್ರಿ.ಶ.೧೫೬೮ ರಿಂದ ೧೭೭೯ರ ವರೆಗೆಸುಮಾರು ೨೧೦ಕ್ಕೂ ಹೆಚ್ಚಿನ ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಇವರು ಬೇಡಕುಲದ ವಾಲ್ಮೀಕಿಗೋತ್ರದ ಕಾಮಗೀತಿ ಎಂಬ ವಂಶದವರೆಂದು, ಮಹಾನಾಯಕಾಚಾರ್ಯರೆಂದು ಶಾಸನಗಳಿಂದ ತಿಳಿಯುತ್ತದೆ. ಶಾಸನ ತಜ್ಞ ಬಿ.ಎಲ್.ರೈಸ್‌ರವರ ಪ್ರಕಾರಇವರುಆಂಧ್ರದತಿರುಪತಿಯ ಬಳಿಯ ಮದಕೇರಿ ಎಂಬ ಗ್ರಾಮದಿಂದ ಬಂದವರಾಗಿದ್ದರಿಂದತಮ್ಮ ಮೂಲ ಸ್ಥಳ ಸೂಚಕವಾಗಿ ಇಟ್ಟುಕೊಂಡ ಮದಕೇರಿಯು ಮದಕರಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೆ ಪುಷ್ಟಿ ಕೊಡುವಂತೆ ಕರ್ನಾಟಕ ಹಾಗೂ ಆಂಧ್ರಪ್ರದೇಶದಗಡಿಯಲ್ಲಿರುವ ಆಹೋಬಲ ಪ್ರದೇಶದಲ್ಲಿ ಮದಕೇರಿ ಎಂಬ ಗ್ರಾಮವಿದೆ.ಅಹೋಬಲದಲ್ಲಿರುವ ಓಬಳ ದೇವರುಕೂಡ ಮದಕರಿ ನಾಯಕರ ಮನೆದೇವರಾಗಿದೆ ಎಂಬ ಸಾಕ್ಷ್ಯವಿದೆ. ಇನ್ನೊಂದು ಮೂಲದ ಪ್ರಕಾರ ಮದವೇರಿದ ಆನೆಯನ್ನು ಪಳಗಿಸಿದ್ದರಿಂದ ಈ ವಂಶಕ್ಕೆ ಮದಕರಿನಾಯಕ ಎಂಬ ಹೆಸರು ಬಂದಿರಬೇಕೆಂದು ನಂಬಿಕೆಯೂಇದೆ.
ಚಿತ್ರದುರ್ಗದ ಪಾಳೆಯಗಾರರ ಮೊದಲ ಅರಸತಿಮ್ಮಣ್ಣ ನಾಯಕ, ಈತ ಚಿತ್ರದುರ್ಗ ನಾಯಕರ ಆಳ್ವಿಕೆಯ ಸ್ಥಾಪಕ. ಇವನ ನಂತರ ಅನೇಕ ದೊರೆಗಳ ಆಳ್ವಿಕೆ ನಡೆಸಿದರು ಅವರಲ್ಲಿಅತ್ಯಂತ ಶ್ರೇಷ್ಟ ಪ್ರಸಿದ್ಧ ಅರಸನೆಂದರೆರಾಜ ಮದಕರಿನಾಯಕ. ಇವರುಅಕ್ಟೋಬರ್ ೧೩, ೧೭೪೨ ರಲ್ಲಿ ಜನಿಸಿದನು. ಸ್ಥಳ :ಚಿತ್ರದುರ್ಗಜಿಲ್ಲೆಯ ಹೊಸದುರ್ಗದಜಾನಕಲ್ ಎಂಬಲ್ಲಿ ಜನಿಸಿದನು. ಕಸ್ತೂರಿರಂಗಪ್ಪನಾಯಕನಿಗೆ ಮಕ್ಕಳಿರದಿದ್ದರಿಂದ ಜಾನಕಲ್ಲಿನ ದಳವಾಯಿ ಭರಮಪ್ಪನಾಯಕನ ಮಗನೇ ಮದಕರಿನಾಯಕ. ಇವನನ್ನು ರಾಜವೀರಮದಕರಿ ನಾಯಕ ಚಿಕ್ಕಮದಕರಿನಾಯಕ, ಗಂಡುಗಲಿ ಮದಕರಿನಾಯಕ, ದುರ್ಗದಹುಲಿ, ಚಿತ್ರದುರ್ಗದರಾಜ, ಐದನೇ ಮದಕರಿನಾಯಕ, ಚಂಡವಿಕ್ರಮರಾಯ, ಗಾದ್ರಿ ಮಲೆ ಹೆಬ್ಬುಲಿ, ಹಿಂದು ಪಾಳೆಯಗಾರರ ಗಂಡಇನ್ನು ಮುಂತಾದ ಬಿರುದುಗಳಿಂದ ಕರೆಯುತ್ತಾರೆ.ಮದಿಸಿದ ಕರಿಯ ಮದವದಗಿಡಿಸಿದ ಮದಕರಿ ನಾಯಕ:
ಮದಕರಿ ನಾಯಕ
ರಾಜವೀರ ಮದಕರಿನಾಯಕಅಧಿಕಾರಕ್ಕೆ ಬಂದಾಗ ಕೇವಲ ೧೨ ವರ್ಷದ ಬಾಲಕ ರಾಜ್ಯ ಆಡಳಿತವನ್ನು ಓಬವ್ವನಾ ಗತಿಯು ಎರಡು ದಶಕಗಳ ಆಡಳಿತ ನಡೆಸಿ ತೀರಿಕೊಂಡಳು. ನಂತರ ಇವರು ಚಿತ್ರದುರ್ಗ ಸಂಸ್ಥಾನದಲ್ಲಿ ತೆಗೆದುಕೊಂಡ ನಿರ್ಣಯಗಳು, ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲಿ ಹರಡಲು ಕಾರಣವಾಯಿತು ಎಂದು ಇತಿಹಾಸಕಾರರ ಅಭಿಪ್ರಾಯ.
೧೭೫೪ ಏಪ್ರಿಲ್ ೧೨ ರಂದು ಸಿದ್ಧೇಶ್ವರನ ಗುಡಿಯಲ್ಲಿ ಪಟ್ಟಾಭಿಷೇಕವಾಯಿತು. ಕರ್ಣವೀರ ಮದಕರಿನಾಯಕ ಆರಂಭದಲ್ಲಿ ರಾಯದುರ್ಗ, ಹರಪ್ಪನ ಹಳ್ಳಿಯ ನಾಯಕರನ್ನು ಎದುರಿಸಬೇಕಾಯಿತು. ನಂತರ ಜರಿಮಲೆ ಮತ್ತು ತರಿಕೆರೆ ನಾಯಕರ ಹಾವಳಿಯನ್ನು ಅಡಗಿಸಿದನು. ಮದಕರಿನಾಯಕ ಹೈದರಾಲಿಯಜೊತೆಗೆ ಮಿತ್ರತ್ವ ಬೆಳಸಿ ಹೈದರಾಲಿಗೆ ಬಂಕಾಪುರ, ನಿಜಗಲ್, ನಿಡುಗಲ್, ಬಿದನೂರು ಮೊದಲಾದ ಬಲಿಷ್ಠ ಕೋಟೆಗಳನ್ನು ಗೆದ್ದುಕೊಟ್ಟನು. ಹೈದರಾಲಿಯ ದುರಾಸೆಯನ್ನು ಸಹಿಸದ ಮದಕರಿ ನಾಯಕನಿಗೆ ಹೈದರಾಲಿಯೊಂದಿಗೆ ಶತ್ರುತ್ವ ಬೆಳೆಯಿತು.ಇದರಿಂದಆಕ್ರೋಶಗೊಂಡ ಹೈದರಾಲಿ ಚಿತ್ರದುರ್ಗದ ಕೋಟೆಯ ಮೇಲೆ ನಾಲ್ಕು ಬಾರಿಆಕ್ರಮಣ ನಡೆಸಿದನು.
ಮೊದಲನೇ ಆಕ್ರಮಣ- ೧೭೬೨ ರಲ್ಲಿ ಹೈದರಾಲಿ ಚಿತ್ರದುರ್ಗದ ಮೇಲೆ ಆಕ್ರಮಣ ಮಾಡಿಗಡಿ ದುರ್ಗಗಳಾದ ಧರ್ಮಪುರ, ಪರಶುರಾಮಪುರ, ದೊಡ್ಡೇರಿ, ಜಾನಕಲ್, ನಾಯಕನಹಟ್ಟಿ, ಹಿರಿಯೂರು, ಹೊಸದುರ್ಗ ಮೊದಲಾದ ಸ್ಥಳಗಳನ್ನು ಮುತ್ತಿದನು.ಈ ಸಂದರ್ಭದಲ್ಲಿ ಮದಕರಿನಾಯಕ ಹೈದರಾಲಿಗೆಎರಡು ಲಕ್ಷ ವರಹ ನೀಡಿ ಸಂಧಾನ ಮಾಡಿಕೊಂಡನು.
೧೭೭೪ ರಲ್ಲಿಚಿತ್ರದುರ್ಗದ ಮೇಲೆಎರಡನೇಆಕ್ರಮಣ ಮತ್ತುಮೂರನೇಆಕ್ರಮಣ -೧೭೭೭ ರಲ್ಲಿ ಚಿತ್ರದುರ್ಗದ ೭ ಸುತ್ತಿನ ಕೋಟೆಯ ಮೇಲೆ ಹೈದರಾಲಿ ಸೈನ್ಯ ಮುತ್ತಿಗೆ ಹಾಕುತ್ತದೆ. ಈ ಸಂದರ್ಭದಲ್ಲಿನಡೆದಓನಕೆ ಓಬ್ಬವ್ವನ ಘಟನೆಯು ಇಂದು ಜನಪ್ರಿಯ ಇತಿಹಾಸ. ಓನಕೆ ಓಬ್ಬವ್ವಳನ್ನುಚಿತ್ರದುರ್ಗದಕೋಟೆಯ ಪಾಳೆಯಗಾರನಾಗಿದ್ದ ಮದಕರಿನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ ಇವರನ್ನು ಕನ್ನಡನಾಡಿನ ವೀರ ವನಿತೆಯಾದ ಕಿತ್ತೂರುರಾಣಿ ಚೆನ್ನಮ್ಮ, ರಾಣಿಅಬ್ಬಕ್ಕನಿಗೆ, ಹೋಲಿಸಲಾಗಿದೆ. ಈ ಆಕ್ರಮಣದಲ್ಲಿ ಹೈದರಾಲಿಗೆ ಸೋಲುಂಟಾಯಿತು.
ನಾಲ್ಕನೇ ಆಕ್ರಮಣ- ೧೭೭೯ ರಲ್ಲಿ ಸತತ ನಾಲ್ಕು ತಿಂಗಳು ಚಿತ್ರದುರ್ಗಕ್ಕೆ ಮುತ್ತಿಗೆ ಹಾಕಿದಹೈದರಾಲಿ ರಾಯದುರ್ಗ ಹರಫಿನಹಳ್ಳಿ, ಸವಣೂರು, ಕಡಪ, ಕನಕಗಿರಿ ಮೊದಲಾದ ಸಂಸ್ಥಾನಿಕರ ನೆರವು ಪಡೆದು ಬಲಿಷ್ಠನಾದ.ಆದರೆ ನಂಬಿದ್ದಮರಾಠರು ಸಹ ಮದಕರಿನಾಯಕನ ಸಹಾಯಕ್ಕೆ ಬರಲಿಲ್ಲ. ಅಂತಿಮವಾಗಿಚಿತ್ರದುರ್ಗದಕೋಟೆ ಹೈದರಾಲಿ ಮತ್ತು ಅವನ ಮತ್ತುಕೂಟದ ವಶವಾಯಿತು. ಹೀಗೆ ೧೭೭೯ ರಲ್ಲಿ ಹೈದರಾಲಿ ಹಿಂದೂ ಪಾಳೆಯಗಾರರ ಜೊತೆಗೂಡಿ ಮದಕರಿನಾಯಕನನ್ನುಯುದ್ಧದಲ್ಲಿ ಸೋಲಿಸಿ ಮದಕರಿನಾಯಕ ಹಾಗು ಅವನ ಮಕ್ಕಳಾದ ಭರಮಪ್ಪನಾಯಕ ಹಾಗೂ ಪರಶುರಾಮ ನಾಯಕನನ್ನೂ ಬಂಧಿಸಿ ಅಜ್ಞಾತ ಸ್ಥಳವಾದ ಕಬ್ಬಾಳು ದುರ್ಗಕೊಟೆಯಲ್ಲಿಡುತ್ತಾನೆ, ನಂತರಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಅವನ ಮಕ್ಕಳನ್ನು ಗಲ್ಲಿಗೇರಿಸಿದನು [ಬೈರಾಪಟ್ನದಲ್ಲಿ] ನಂತರ ಹೈದರಾಲಿ ರಾಜವೀರ ಮದಕರಿನಾಯಕನನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಿ ಅಲ್ಲಿನ ಸುರಂಗದಲ್ಲಿ ಬಂಧನದಲ್ಲಿಟ್ಟನು.

ಸುರಂಗ ಕಾರಾಗೃಹ , ಶ್ರಿರಂಗಪಟ್ಟಣ
ಸೋಲು ಮತ್ತು ಸೆರೆವಾಸದ ನೋವುಗಳಿಂದ ನೊಂದರಾಜವೀರ ಮದಕರಿನಾಯಕ
೧೫ನೇ ಮೇ ೧೭೭೯ರಲ್ಲಿ ಶ್ರೀರಂಗಪಟ್ಟಣದ ಕಾರಾಗೃಹದಲ್ಲಿ ನಿಧನರಾದರು. ಇತಿಹಾಸಕಾರರ ಮತ್ತೊಂದು ಅಭಿಪ್ರಾಯದ ಪ್ರಕಾರರಾಜವೀರ ಮದಕರಿನಾಯಕನಿಗೆ ವಿಷ ಪ್ರಾಶನ ಮಾಡಿಸಿ ಕೊಲ್ಲಲಾಯಿತು ಎಂದಿದ್ದಾರೆ. ಅಂದಿನಿಂದ ಇಂದಿನವರೆವಿಗೂ ರಾಜವೀರ ಮದಕರಿನಾಯಕನ ವಂಶಸ್ತರು ಮದಕರಿನಾಯಕನ ನೆನಪಿಗೆ ಈ ದಿನದಂದು ಶ್ರೀರಂಗಪಟ್ಟಣ ದಲ್ಲಿ ಅವರ ಪುಣ್ಯಸ್ಮರಣೆ ಆಚರಿಸುತ್ತಾ ಬಂದಿದ್ದಾರೆ.
ಈ ಲೇಖನದ ಕಳಕಳಿಯೆಂದರೆ ಚಿತ್ರದುರ್ಗದ ನಾಯಕ ಸಂತತಿಯ ಶ್ರೇಷ್ಠ ಅರಸ ರಾಜವೀರ ಮದಕರಿ ನಾಯಕನು ಶ್ರೀರಂಗಪಟ್ಟಣದಲ್ಲಿ ನಿಧನ ಹೊಂದಿದ್ದರಿಂದರಾಜವೀರ ಮದಕರಿ ನಾಯಕನನ ನೆನಪಿಗೆ ಕರ್ನಾಟಕ ರಾಜ್ಯ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಒಂದು ಸ್ಮಾರಕ ನಿರ್ಮಾಣ ಮಾಡಿರಾಜ ವೀರ ಮದಕರಿ ನಾಯಕನಿಗೆಗೌರವ ಸಲ್ಲಿಸಬೇಕಾಗಿದೆ.

ಡಾ.ಎಸ್.ಬಿ.ಎಂ.ಪ್ರಸನ್ನ
ಭಾರತೀಯ ಇತಿಹಾಸ ಸಂಕಲನ ಸಮಿತಿ.
ಕರ್ನಾಟಕ