ಮೈಸೂರು. ಡಿ.19. ಶ್ರಿ ಮಹರ್ಷಿ ವಾಲ್ಮೀಕಿ ಜಾತ್ರೆ-03 ಪ್ರಯುಕ್ತ ಪರಮಪೂಜ್ಯ ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿಗಳು ಹಾಗೂ ಮಠದ ಧರ್ಮದರ್ಶಿಗಳು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ ಅಪ್ಪಣ್ಣ ನವರು ಇಂದು ಮೈಸೂರು ಜಿಲ್ಲೆಯ ಹುಣಸೂರಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ನಡೆಸಿದರು, ಇದೆ ಸಂದರ್ಭದಲ್ಲಿ 2021ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಚ ಡಿ. ಕೋಟೆ ಕ್ಷೇತ್ರದ ಶಾಸಕರು ಹಾಗೂ ಹುಣಸೂರು ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷರಾದ ಶ್ರೀ ಅನಿಲ್ ಚಿಕ್ಕಮಾದು ರವರು, ಸಂಘದ ಗೌರವ ಅಧ್ಯಕ್ಷರಾದ ಅಣ್ಣಯ್ಯ ನಾಯಕರು, ದ್ಯಾವಪ್ಪ ನಾಯಕರು, ಪ್ರಭಾಕರ್ ಹುಣಸೂರು, ವೆಂಕಟೇಶ್ ನಾಯಕರು, ತಿಮ್ಮನಾಯಕರು, ಮಯೂರ ನಾಯಕರು, ಕಾಳಿದಾಸ ನಾಯಕರು, ರಮ್ಮನಹಳ್ಳಿ ಶಿವಣ್ಣ ಹಾಗೂ ಮುಖಂಡರು ಉಪಸ್ಥಿತರಿದ್ದರು.

By admin