ಇಂದು ಅರಣ್ಯ ಮತ್ತು ವಸತಿ ಧಾಮಗಳ ಅಧ್ಯಕ್ಷರಾದ ಶ್ರೀ ಎಂ ಅಪ್ಪಣ್ಣರವರು ಕಾರವಾರದಲ್ಲಿರುವ ದೇವಭಾಗ್ ವಸತಿ ಧಾಮಕ್ಕೆ ಭೇಟಿ ನೀಡಿ ಅಲ್ಲಿ ಮಳೆ ಗಾಳಿಯಿಂದ ಆಗಿರುವ ಹಾನಿಯನ್ನು ವೀಕ್ಷಣೆ ಮಾಡಿದರು, ನಂತರ ಸಿಬ್ಬಂದಿಗಳೊಂದಿಗೆ ಚರ್ಚಿಸುತ್ತಾ ಅವರ ಪಿಎಫ್ ಸಂಬಂಧಿತ ಸಮಸ್ಯೆಗೆ ಕೂಡಲೆ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೃಗೊಳ್ಳುವುದಾಗಿ ಆಶ್ವಾಸನೆ ನೀಡಿದರು, ನಂತರ ಸಿಬ್ಬಂದಿಗೆಲ್ಲಾ ಲಸಿಕೆ ಆಗಿರುವ ಕುರಿತು ಮಾಹಿತಿ ಪಡೆದು, ಬರುವ ಪ್ರವಾಸಿಗರಿಂದಲೂ ಲಸಿಕೆ ಆಗಿರುವ ದಾಖಲೆ ಪಡೆಯಲು ಸಿಬ್ಬಂದಿಗಳಿಗೆ ಸೂಚಿಸಿದರು.
ಕರೋನ ಲಾಕ್ ಡೌನ್ ನಂತರ ವಸತಿಧಾಮಕ್ಕೆ ಆಗಮಿಸಿರುವ ಅತಿಥಿಗಳೊಂದಿಗೆ ಚರ್ಚಿಸಿದ ಅಧ್ಯಕ್ಷರು ಅವರ ಬೇಡಿಕೆಗಳಾದ ಈಜುಕೊಳ ಹಾಗೂ ಸಮುದ್ರದಲ್ಲಿ ನಡೆಸುವ ಗೋವಾ ಮಾದರಿಯ ಆಟೋಟಗಳನ್ನು ಒದಗಿಸುವ ಬೇಡಿಕೆಗೆ ಸ್ಪಂದಿಸಿದ ಅಧ್ಯಕ್ಷರು ಕೂಡಲೇ ಕ್ರಮ ಕೃಗೊಳ್ಳುವುದಾಗಿ ಆಶ್ವಾಸನೆ ನೀಡಿದರು.ಇವರೊಂದಿಗೆ ವ್ಯವಸ್ಥಾಪಕರಾದ ಶ್ರೀ ಪಿ.ಆರ್.ನಾಯಕ್ ಹಾಜರಿದ್ದರು.