ಮೈಸೂರು: ಕುಂಬಾರ ಕೊಪ್ಪಲು ಹೈಟೆಕ್ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಮೀಪದಲ್ಲಿರುವ ಬಸ್ ನಿಲ್ದಾಣ ಹಾಗೂ ಅಕ್ಕ ಪಕ್ಕ ಅಂಗಡಿ ಬಳಿ ಮಹಿಳೆಯರು, ಹೆಣ್ಣು ಮಕ್ಕಳು ಓಡಾಡಲು ಹೆದರೋ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಆಸ್ಪತ್ರೆ ಎಂದರೆ ತಮ್ಮ ತಮ್ಮಲ್ಲಿ ಅನಾರೊಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಅಂದರೆ ನಾನಾ ತರಹದ ದೊಡ್ಡ ದೊಡ್ಡ ಡಾಕ್ಟರ್‍ಗಳು ಇನ್ನಿತರೇ ಹಿರಿಯ ಅಧಿಕಾರಿಗಳು ದಿನನಿತ್ಯ ಬೇಟಿ ನೀಡುವ ಕೇಂದ್ರದ ಹಾಜು ಬಾಜಿನಲ್ಲೇ ಪುಂಡರ ಹಾವಳಿ ಅಂದರೆ ಏನಾಗಿರಬೇಡ. ಇಲ್ಲಿನ ಸಧ್ಯದ ಪರಿಸ್ಥಿತಿ ಹೇಗಿದೆ ಎಂದರೆ ಜಯದೇವ ಆಸ್ಪತ್ರೆಯ ಸುತ್ತಮುತ್ತಲಿನಲ್ಲಿ ಪುಂಡ-ಪೋಕರಿಗಳ ಹಾವಳಿ ಮಿತಿ ಮೀರಿದ್ದು ಆಸ್ಪತ್ರೆಗೆ ಬರುವ ರೋಗಿ ಮತ್ತು ರೋಗಿಯ ಜೊತೆಗೆ ಬರುವಂತಹ ಸಂಬಂಧಿಕರಿಗೆ ಇಲ್ಲಿನ ಪುಂಡ-ಪೋಕರಿ ಹುಡುಗರುಗಳಿಂದ ವಿಪರೀತ ತೊಂದರೆಯಾಗುತ್ತಿದ್ದೆ ಎಂಬುದÀರ ಬಗ್ಗೆ ಸಾರ್ವಜನಿರಕು ಪತ್ರಿಕಾ ಕಛೇರಿಗೆ ಒಂದಕ್ಕೆ ದೂರವಾಣಿ ಕರೆಮಾಡಿದ್ದು, ಜೊತೆಗೆ ವಾಟ್ಸ್ ಆಪ್ ಗಳ ಬಗ್ಗೆ ಇಲ್ಲಿನ ಸಮಸ್ಯೆಗಳನ್ನು ಎಸ್.ಎಂ.ಎಸ್ ಮತ್ತು ಪುಂಡರುಗಳ ಗುಂಪು ಗುಂಪಾಗಿ ಸೇರಿ ಹರಟೆ ಇನ್ನಿತರೇ ಚಟುವಟಿಕೆಗಳನ್ನು ವಿಡಿಯೋ ಮಾಡಿ ಅದನ್ನು ಎಲ್ಲರಿಗೂ ಕಳುಹಿಸುವ ಮೂಲಕ ವಿನೂತನ ರೀತಿಯಲ್ಲಿ ದೂರಿದ್ದಾರೆ.

ನಗರದಲ್ಲಿನ ನೂತನ ಹೈಟೆಕ್ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹೃದ್ರೋಗ ರೋಗಿಗಳಿಗೆಂದೇ ನಿರ್ಮಿಸಿದ್ದೇನು ಸರಿಯಷ್ಟೇ. ಆದರೆ ಅಲ್ಲಿನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚ ಮತ್ತು ಶಾಂತಿಯನ್ನು ಕಾಪಾಡುವಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಸಂಬಂಧಿಸಿರುತ್ತದೆ. ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಮಾನಸಿಕ ಕಿರಿಕಿರಿ ಮತ್ತು ಇನ್ನೀತರೇ ತೊಂದರೆಗೆ ಒಳಗಾಗÀದಂತೆ ನೋಡಿಕೊಳ್ಳುವುದು ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಸೇರಿರುತ್ತದೆ. ಈಗಿನ ಕೋವಿಡ್-19 ಶುರುವಾದಾಗ ಇಲ್ಲಿ ಕೋವಿಡ್-19 ರೋಗಿಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್-19 ಇರುವ ಪರಿಸ್ಥಿತಿಯಲ್ಲಿ ಚಿಕಿತ್ಸೆಗೆಂದು ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲೇ ಇತ್ತು. ಇಷ್ಟೇ ಅಲ್ಲದೇ ಇನ್ನೀತರೇ ರೋಗಗಳಿಗೂ ಇಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರು ಬರುತ್ತಿರುತ್ತಾರೆ. ವಿನಾಕಾರಣ ಇವರೆಲ್ಲರಿಗೋ ಈ ಪುಂಟರುಗಳಿಂದ ತೊಂದರೆಯಾಗುತ್ತಿದ್ದು ಮತ್ತು ಇಲ್ಲಿನ ಹತ್ತಿರದ ನಿವಾಸಿಗಳಿಗೂ ಇವರ ಹಾವಳಿ ವಿಪರೀತವಾಗಿದೆ ಎಂದೆಸಿದೆ.

ಇನ್ನು ಲಾಕ್ಡೌನ್ ಜಾರಿಯಾದ ಬಳಿಕ ಮದ್ಯ ಮಾರಾಟಕ್ಕೆ ನಿಷೇಧವಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಕುಡುಕರು ಕಾಣಸಿಗುತ್ತಿರಲಿಲ್ಲ, ಈಗ ಮತ್ತೆ ಮದ್ಯ ಮಾರಾಟ ಆರಂಭವಾಗಿರುವುದರಿಂದ ವ್ಯಸನಿಗಳ ಹಾವಳಿ ಮತ್ತೆ ಶುರುವಾಗಿದೆ. ಬೆಳಿಗ್ಗೆ ಬೆಳಿಗ್ಗೆಯೇ ಮದ್ಯಸೇವಿಸಿ ಎಲ್ಲೆದರಲ್ಲಿ ತೂರಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ಕುಡಿದು ಪಾದಚಾರಿ ಮಾರ್ಗಗಳಲ್ಲೇ ಮಲಗುವುದು, ಸುಮ್ಮನೆ ಬೊಬ್ಬಿಡುವುದು, ಅಶ್ಲೀಲ ಪದಗಳಿಂದ ನಿಂದಿಸುವುದು, ಹೊಡೆದಾಟ ಬಡಿದಾಟ ಮಾಡಿಕೊಳ್ಳುತ್ತಿದ್ದಾರೆ. ಇದು ಸಾಲದೆಂಬಂತೆ ಪಡ್ಡೆ ಯುವಕರು. ಅಲ್ಲಿಯೇ ಜೂಜಾಟ ಅಡುತ್ತಾ ಮೈ. ಮರೆಯುತ್ತಿದ್ದಾರೆ ಇಷ್ಟೇ ಅಲ್ಲದೇ ಮಲಗಿದ್ದಲ್ಲಿಯೇ ವಾಂತಿ, ಮಲ–ಮೂತ್ರ ಮಾಡಿಕೊಂಡು ತಮ್ಮ ಅಸಭ್ಯ ವರ್ತನೆಯಿಂದ ಸುತ್ತಲಿನ ಪರಿಸರದ ಸ್ವಚ್ಚತೆಯನ್ನು ಹಾಳು ಮಾಡುತ್ತಿದ್ದಾರೆ. ಎಲ್ಲಿ ಬೇಕೆಂದರಲ್ಲಿ ಉಗಿಯುವುದು ಮತ್ತು ಇನ್ನಿತರೇ ಚಟುವಟಿಕೆಗಳಿಂದ ರೋಗ ಹರಡುವ ಭೀತಿ ಎದುರಾಗಿದೆ ಇಲ್ಲಿನ ನಿವಾಸಿಗಳಿಗೆ.

ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಒತ್ತಾಯ ವಾಗಿದೆ. ಈಗಿರುವ ಕೋವಿಂಡ್-19 ಸಾಂಕ್ರಾಮಿಕದ ಜೊತೆಗೆ ಇವರ ಈ ಅನುಚಿತ ವರ್ತನೆಗೆ ಇಲ್ಲಿನ ನಿವಾಸಿಗಳು ಬೇಸತ್ತಿದ್ದು, ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹಬ್ಬುತ್ತಿರುವುದು ನಮಗೆ ಆತಂಕದ ವಿಷಯವಾದರೂ ಅದನ್ನು ಅರಿತು ಕನಿಷ್ಠ ಸುರಕ್ಷತೆಯನ್ನು ವಹಿಸದೇ ಹೋಗುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ ನಾಗರೀಕರಲ್ಲಿ.

ಎಲ್ಲಂದರಲ್ಲೆ ಗುಂಪು ಗುಂಪಾಗಿ ಮದ್ಯದ ಅಮಲಿನಲ್ಲಿರುವ ಪಡ್ಡೆ ಹುಡುಗರ ಭಯದಿಂದ ಮಹಿಳೆಯರು, ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆದಾಡೋದೇ ಆತಂಕಮಯ ಸ್ಥಿತಿ ಉಂಟಾಗಿದೆ. ಇನ್ನು ಕೆಲ ಪುಂಡ ಪೋಕರಿಗಳು ರಸ್ತೆ ಬದಿಗಳಲ್ಲಿ ಮತ್ತು ನಡೆದು ಬರುವ ಮಹಿಳೆಯರೊಂದಿಗೆ ಅಸಭ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ನೊಂದ ಮಹಿಳೆಯರು ಅಲವತ್ತುಕೊಂಡಿದ್ದಾರೆ.

ಜಯದೇವ ಆಸ್ಪತ್ರೆ ಬರುವ ರೋಗಿಯ ಸಂಬಂಧಿಗಳು ಹತ್ತಿರದಲ್ಲೇ ಅಂಗಡಿ ಇದ್ದರೂ ಸಹ ಔಷಧಿ ಊಟ-ಉಪಚಾರಗಳಿಗೆ ಬೇರೆಡೆಗೆ ತೆರಳುವÀ ಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ, ಇನ್ನುಈ ಬಗ್ಗೆ ಕ್ರಮ ಕೈಗೊಂಡಿಲ್ಲದರ ಬಗ್ಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಇಲ್ಲಿನ ಇನ್ನಾದರೂ ಪೊಲೀಸರು ಇಲ್ಲಿನ ಸಮಸ್ಯೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುತ್ತಮುತ್ತಲಿನ ನಿವಾಸಿಗಳು ಈ ಮೂಲಕ ಮನವಿ ಮಾಡಿದ್ದಾರೆ.

ಇದರ ಪರಿಣಾಮ ಇನ್ನೀತರೇ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಲಿ ಎಂಬ ಸ್ಥಳೀಯ ನಾಗರೀಕರ ಕೋರಿಕೆಗೆ ಸಂಬಂಧ ಪಟ್ಟ ಅಧೀಕಾರಿಗಳು ಇನ್ನಾದರೂ ಇತ್ತ ಗಮನ ಹರಿಸುವರೋ ಕಾದುನೋಡಬೇಕಿದೆ.

ವರದಿ: ಮಹೇಶ್ ನಾಯಕ್

By admin