ಮೈಸೂರು: ನಗರದ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80 ನೇ ಜನ್ಮದಿನೋತ್ಸವ, ಮಾತಾ ಜಯಲಕ್ಷ್ಮೀ ಅವರ ಜನ್ಮ ಶತಮಾನೋತ್ಸವ ಹಾಗೂ ನಾದಮಂಟಪದ ೨೪ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರದಿಂದ (ಮೇ 22) ಮೇ ೩೧ರವರೆಗೆ ಆಶ್ರಮದಲ್ಲಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಜನ್ಮ ಸ್ಥಳವಾದ ಮೇಕೆದಾಟುವಿನಿಂದ ಮೈಸೂರು ಆಶ್ರಮದವರೆಗೆ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ವಿಶ್ವಶಾಂತಿ ವಿಜಯಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.


ಗುರುವಾರ (ಮೇ 19) ಬೆಳಗ್ಗೆ ವೇದ ಸಭೆ, ವೇದ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ವಿತರಣೆ, ನಂತರ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರಿಗೆ ಸನ್ಮಾನ `ಚೈತ್ರಾರ್ಚನೆ’ ಕಾರ್ಯಕ್ರಮಗಳು ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದವು.ಇನ್ನು ಶುಕ್ರವಾರ (ಮೇ೨೦) ಬೆಳಗ್ಗೆ ೬.೩೦ರಿಂದ ಆಶ್ರಮದ ಆವರಣದಲ್ಲಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.