ಬೆಂಗಳೂರಿನ ಎನ್.ಆರ್ ಕಾಲೋನಿ ಶ್ರೀರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾದ ಶ್ರೀ ಅಶೋಕ ಹಾರ್ನಹಳ್ಳಿ ಯವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರನ್ನು ನಮ್ಮ ಮೈಸೂರು ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ ಆರ್ ಸತ್ಯನಾರಾಯಣ, ಸಹ ಕಾರ್ಯದರ್ಶಿ ಶ್ರೀ ಎಸ್ ರಂಗನಾಥ,ಸಂಘದ ಸದಸ್ಯರು ಹಾಗೂ ಅಖಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಹ ಕಾರ್ಯದರ್ಶಿಗಳಾದ ವಿ ಹರೀಶ್,ಕರ್ನಾಟಕ ಬ್ರಾಹ್ಮಣ ಮಂಡಳಿ ಸದಸ್ಯರಾದ ಶ್ರೀ ಎಂ ಆರ್ ಬಾಲಕೃಷ್ಣ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಶ್ರೀ ಲಕ್ಷ್ಮಿ ಕಾಂತ ರವರು ಉಪಸ್ಥಿತರಿದ್ದರು.
