ಪಿರಿಯಾಪಟ್ಟಣ ತಾಲೂಕಿನ ಕಾವೇರಿ ನದಿ ದಂಡೆಯಲ್ಲಿರುವ ಸೂಳೆಕೋಟೆ( ಹನುಮಂತಪುರ) ಗ್ರಾಮದಲ್ಲಿ ಇಂದು ಶ್ರೀ ಆಂಜನೇಯಸ್ವಾಮಿ ವಾರ್ಷಿಕ ಬ್ರಹ್ಮ ರಥೋತ್ಸವ ನಡೆಯಿತು.
ಸತತ ಎರಡು ವರ್ಷಗಳಿಂದ ಕೋವಿಡ್ ,19 ಎಂಬ ಮಹಾಮಾರಿ ಇಂದ ದೇವಾಲಯದ ಕಾರ್ಯಕ್ರಮಗಳು ಸರ್ಕಾರದ ಆದೇಶದಂತೆ ಸ್ಥಗಿತಗೊಂಡಿದ್ದವು.
ಸರ್ಕಾರವು ಕೊರೊನಾ ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಿದ್ದರಿಂದ ಈ ಬಾರಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.ದೇವಾಲಯ ಆವರಣದಲ್ಲಿ ಬೆಟ್ಟದಪುರದ ಸಲೀಲಾಖ್ಯ ಮಠದ ಶ್ರೀ ಚನ್ನಬಸವ ದೇಶೀಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ದೇವಾಲಯದ ಆವರಣದಲ್ಲಿ ರಥಾಂಗ ಹೋಮ ನಡೆಯಿತು.ನಂತರ ಸ್ವಾಮೀಜಿ ಹಾಗೂ ತಾಲ್ಲೂಕು ದಂಡಾಧಿಕಾರಿ ಚಂದ್ರಮೌಳಿ ಶ್ರೀ ಆಂಜನೇಯ ಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು.
ತಾಲ್ಲೂಕು ದಂಡಾಧಿಕಾರಿ ಚಂದ್ರಮೌಳಿ ಶ್ರೀ ಆಂಜನೇಯ ಸ್ವಾಮಿಯ ದೇವರ ದರ್ಶನ ಪಡೆದು ಮಾಧ್ಯಮದೊಂದಿಗೆ ಮಾತನಾಡಿ ಕಳೆದ 2ವರ್ಷಗಳಿಂದ ರಾಜ್ಯ ದೇಶದಲ್ಲಿ ಕೊರೋನಾವೈರಸ್ ಮಹಾಮಾರಿ ಇದ್ದದ್ದರಿಂದ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ಜಾತ್ರೆಗಳು ಸಭೆ ಸಮಾರಂಭಗಳು ಸ್ಥಗಿತಗೊಂಡಿದ್ದವು. ದೇವಾಲಯದ ಜೀರ್ಣೋದ್ಧಾರ ಸಮಿತಿಯವರು ವ್ಯವಸ್ಥಿತವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ.
ಬೆಟ್ಟದಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಾಶ್ ಯತ್ತಿನಮನಿ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾನಾ ಜಿಲ್ಲೆಗಳಿಂದ ಬಂದಂತಹ ಸಾವಿರಾರು ಭಕ್ತಾದಿಗಳು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಂದಂತಹ ಭಕ್ತಾಧಿಗಳಿಗೆ ದೇವಾಲಯದ ಸಮಿತಿ ಹಾಗೂ ದಾನಿಗಳಿಂದ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿತ್ತು .
ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೆಚ್.ಸಿಂಗ್ರಿ ಶೆಟ್ಟರ್ ,ಕಾರ್ಯದರ್ಶಿ ಎಂ. ಕೆ. ಶಿವರಾಂ,ಖಜಾಂಜಿ ಕುಮಾರಸ್ವಾಮಿ ,ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಶ್ರೀ, ಬೆಂಗಳೂರು ಎ ಆರ್ ಕ ಸ್ಟ್ರಕ್ಷನ್ ಕೆ.ಅರುಣ್ ಕುಮಾರ್ , ಎಪಿಎಂಸಿ ಅಧ್ಯಕ್ಷ ಅಧ್ಯಕ್ಷ ಶಂಕರಪ್ಪ ,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೋಹನ್ ರಾಜ್ , ಹಾರ್ನಳ್ಳಿ ಹಾರ್ನಳ್ಳಿಯ ಉಪತಹಸೀಲ್ದಾರ್ ಆರ್ ಮಹೇಶ್ ,ಕಂದಾಯ ನಿರೀಕ್ಷಕ ಪ್ರದೀಪ್ ,ಎಸ್. ಟಿ. ಮಂಜುನಾಥ್,ಸುರೇಶ್ ,ನಂದಕುಮಾರ್ ,ಕೇಬಲ್ ನಂಜುಂಡಸ್ವಾಮಿ ಹಾಗೂ ಭಕ್ತಾದಿಗಳು ಹಾಜರಿದ್ದರು ,