ತಿರುವನಂತಪುರಂ (ಕೇರಳ) : ೧೫ನೇ ಆವೃತ್ತಿಯ ಇಂಡಿಯನ್.ಪ್ರೀಮಿಯರ್ ಲೀಗ್‌ನ(ಐಪಿಎಲ್) ಹರಾಜು ಪ್ರಕ್ರಿಯೆಯಲ್ಲಿಈಗಾಗಲೇ ತಮ್ಮ ಹೆಸರು ನೋಂದಣಿ ಮಾಡಿಕೊಂಡಿರುವಟೀಂ ಇಂಡಿಯಾ ಮಾಜಿ ಬೌಲರ್ ಎಸ್.ಶ್ರೀಶಾಂತ್ ಇದೀಗಕೇರಳ ರಣಜಿ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಕೇರಳ ಕ್ರಿಕೆಟ್ ಅಸೋಸಿಯೇಷನ್ ನಿಂದಘೋಷಣೆಯಾಗಿರುವ ೨೦ ಆಟಗಾರರ ರಣಜಿ ತಂಡದಲ್ಲಿ ೩೯ವರ್ಷದ ಶ್ರೀಶಾಂತ್ ಅವರಿಗೆ ಅವಕಾಶ ಸಿಕ್ಕಿದೆ. ಈ ಮೂಲಕ ೮ವರ್ಷಗಳ ಬಳಿಕ ರಣಜಿ ತಂಡದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ೨೦೧೩ರಲ್ಲಿ ಅವರು ಕೊನೆಯದಾಗಿ ಪ್ರಥಮ ದರ್ಜೆಪಂದ್ಯವನ್ನಾಡಿದ್ದರು.೨೦೧೩ರಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಶ್ರೀಶಾಂತ್ ೭ ವರ್ಷಗಳಕಾಲ ಕ್ರಿಕೆಟ್‌ನಿಂದ ದೂರವಿದ್ದರು. ಆದರೆ ಕೋರ್ಟ್‌ನಿಂದಅವರಿಗೆ ಈಗಾಗಲೇ ಕ್ಲೀನ್ ಚಿಟ್ ಸಿಕ್ಕಿದೆ. ಈ ಹಿಂದೆ ಟೀಂಇಂಡಿಯಾ ತಂಡದ ಕಾಯಂ ಸದಸ್ಯರಾಗಿದ್ದ ಶ್ರೀಶಾಂತ್ ಎರಡುಬಾರಿ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದರು