ಅದೃಷ್ಟ, ಹಣ ಮತ್ತು ಶಿಫಾರಸ್ಸಿನ ಹಿಂದೆ ಓಡದೆ ಶ್ರದ್ಧೆ, ಆಸಕ್ತಿ ಮತ್ತು ಶ್ರಮದ ಹಿಂದೆ ಓಡಿದರೆ ಯಶಸ್ಸು ನಿಮ್ಮದಾಗಲಿದೆ ಎಂದು ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಅಭಿಪ್ರಾಯಪಟ್ಟರು.
ಬುಧವಾರ ನಗರದ ಲಕ್ಷ್ಮಿಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ಪದವಿಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಓದು ಅನ್ನುವುದು ತಪಸ್ಸು, ಕಲಿಕೆ ಧ್ಯಾನ ಮತ್ತು ಜೀವನ ಒಂದು ಕಲೆ ಇದ್ದ ಹಾಗೆ. ಹಿಂದೆ ಕನ್ನಡ ಎಂ.ಎ., ಓದುತ್ತಿರುವಾಗಲೇ ನಮ್ಮಕಾಲೇಜಿಗೆ ಅಧ್ಯಾಪಕರು ಬೇಕು ಅಂತ ?ಬುಕ್? ಮಾಡುತ್ತಿದ್ದರು.
ನಂತರ ಓದಿದ ಹುಡುಗರ ಮನೆಗೆ ಹೋಗಿ ಕರೆದು ಅಧ್ಯಾಪಕರ ಕೆಲಸ ಕೊಡುತ್ತಿದ್ದರು. ಬರುತ್ತಾ ಅಧ್ಯಾಪಕರ ಕೆಲಸವನ್ನು ಪಡೆದುಕೊಳ್ಳಬೇಕಿತ್ತು. ಈಗ ಕಾಲ ಬದಲಾಗಿದೆ ಮುಕ್ತವಾಗಿ ಪರೀಕ್ಷೆಯನ್ನು ಬರೆದು ಸ್ವಂತ ಪ್ರತಿಭೆ ಮತ್ತು ಶ್ರಮದ ಮೂಲಕ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವೆಲ್ಲರೂ ಕುವೆಂಪು ಹೇಳಿದ ಹಾಗೆ ತಪಸ್ಸುಮಾಡಬೇಕು ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕರಾದ ಡಾ. ಡಿ.ಕೆ. ರಾಜೇಂದ್ರ ಅವರು ೨೩೦ ಪುಟದ ಅಧ್ಯಯನ ಪುಸ್ತಕದ ಸಿ.ಡಿ ಬಿಡುಗಡೆ ಮಾಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಜ್ಞಾನಬುತ್ತಿ ಸಂಸ್ಥೆಯು ಜ್ಞಾನದ ಜೊತೆಗೆ ಗುರಿ, ಆತ್ಮವಿಶ್ವಾಸ ಮತ್ತು ಮಾರ್ಗದರ್ಶನವನ್ನು ನೀಡುತ್ತಿದೆ. ಇಂದು ಜ್ಞಾನಾರ್ಜನೆಯ ಜೊತೆ ಶೀಲಾರ್ಜನೆಯನ್ನು ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು


ಭಾರತೀಯ ಮತ್ತು ಪಾಶ್ಚಾತ್ಯ ತಾತ್ವಿಕ ಚಿಂತನೆಗಳು ಕುರಿತು ಕೃಷ್ಣರಾಜನಗರ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಸತೀಶ್ ಚಂದ್ರ ಉಪನ್ಯಾಸ ನೀಡಿದರು. ಕವಿರಾಜಮಾರ್ಗ ಕನ್ನಡದ ಅಸ್ಮಿತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ, ಜಯಪ್ಪಹೊನ್ನಾಳಿ, ಪ್ರೊ. ಸೀತಾರಾಮ ಜಾಗೀರದಾರ್, ಡಾ. ಎಸ್. ನಾಗಾಚಾರಿ, ರಾ. ರಾಮಕೃಷ್ಣ, ಎಚ್. ಬಾಲಕೃಷ್ಣ, ಜೈನಹಳ್ಳಿ ಸತ್ಯನಾರಾಯಣಗೌಡ, ವಿ.ಜಯಪ್ರಕಾಶ್, ಪ್ರೊ. ಕೃ.ಪ. ಗಣೇಶ, ಸಂಯೋಜಕ ಕೆ.ವೈ ನಾಗೇಂದ್ರ ಇದ್ದರು.