ಮೈಸೂರು, ನವೆಂಬರ್ – ವಿಶೇಷ ಕೈಮಗ್ಗ ಮೇಳ ಉದ್ಘಾಟನೆಯನ್ನು ನ. 20 ರಂದು ಸಂಜೆ 4.00 ಗಂಟೆಗೆ ಜೆ.ಎಸ್.ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಏರ್ಪಡಿಸಲಾಗಿದೆ ಎಂದು ಜೆ.ಎಸ್.ಎಸ್. ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ|| ಸಿ. ರಂಗನಾಥಯ್ಯ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಸಾಂಸ್ಕøತಿಕ ಮತ್ತು ಅರಮನೆಗಳ ನಗರ ಎಂದೇ ಪ್ರಸಿದ್ಧಿಯಾದ ಮೈಸೂರು ನಗರದಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 6ರವರೆಗೆ ವಿಶೇಷ ಕೈಮಗ್ಗ ಮೇಳ- ಸಂಸ್ಕøತಿ-2020 ಕಾರ್ಯಕ್ರಮವನ್ನು ಜೆ.ಎಸ್.ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಏರ್ಪಡಿಸಲಾಗಿದ್ದು, ಮೇಳದ ಅವಧಿಯಲ್ಲಿ ಕೋವಿಡ್-19ನ ಸರ್ಕಾರದ ಮತ್ತು ಆಡಳಿತ ಮಂಡಳಿಯ ನಿಯಮಗಳಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕಳೆದÀ ಸೆಪ್ಟಂಬರ್ ನಲ್ಲಿ ಕೋವಿಡ್-19 ಲಾಕ್ ಡೌನ್ ಸಡಿಲಿಸಿದ ನಂತರ ಪ್ರಪ್ರಥಮವಾಗಿ ಯಶಸ್ವಿಯಾಗಿ ನಡೆಸಿದ್ದು, ಇದಕ್ಕೆ ಗ್ರಾಹಕರ ಪ್ರೋತ್ಸಾವು ಪೂರಕವಾಗಿದೆ ಎಂದರಲ್ಲದೇ, ನೇಕಾರರು/ನೇಕಾರರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ್ ಉತ್ಪನ್ನಗಳು ಹೆಚ್ಚು ಮಾರುಕಟ್ಟೆಗೆ ಒದಗಿಸುವುದು ಮತ್ತು ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗಲು ಈ ಮೇಳವನ್ನು ಆಯೋಜಿಸುತ್ತಿರುವುದಾಗಿ ಹೇಳಿದರು.
ಮೇಳದಲ್ಲಿ ಉತ್ತರ ಭಾರತದ ಮಧ್ಯ ಪ್ರದೇಶ, ಉತ್ತರ ಪ್ರದೇಶ, ದಕ್ಷಿಣ ಭಾರತದ ತಮಿಳುನಾಡು ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಗುಲ್ಬರ್ಗ ಮತ್ತು ಇಳಕಲ್ ಪ್ರದೇಶದ ಕೈಮಗ್ಗ ನೇಕಾರರ ಸಹಕಾರಿ ಸಂಘಗಳಲ್ಲಿ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ ಹತ್ತಿ ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ ಎಂದರು.
ಮೇಳದಲ್ಲಿ ಪ್ರದರ್ಶನ ಉತ್ಪನ್ನಗಳು:
ರೇಷ್ಮೇ ಸೀರೆ, ಮೊಳಕಾಲ್ಮೂರು, ಇಳಕಲ್ ಸೀರೆ ಕಸೂತಿ ಸೀರೆ, ತಮಿಳುನಾಡಿನ ಖನಿಜವರಮ್ ಸೀರೆ, ಬಿಹಾರದ ತಷರ್ ಸೀರೆ, ಕಾಂತ ಸೀರೆ, ಬಲಚುರಿ ಸೀರೆ, ಬುಟಿಕ್ ಸೀರೆ, ಪಶ್ಚಿಮ ಬಂಗಾಳದ ಬೆಂಗಾಲಿ ಸೀರೆ, ಒರಿಸ್ಸಾ ರಾಜ್ಯದ ಸಂಬಲ್‍ಪುರಿ ಸೀರೆ, ಇಕ್ಕತ್, ಬೊಂಕಾಯಿ ಸೀರೆ, ಕಾಶ್ಮೀರ ರಾಜ್ಯದ ಪಶ್ಮನಾ ಶಾಲ್, ಆಂಧ್ರ ಪ್ರದೇಶದ ಗೊಲ್‍ವಾಲ್ ರೇಷ್ಮೇ ಸೀರೆ, ಕಲ್ಮಕಾರಿ ಸೀರೆ, ಪೊಚಂಪಲ್ಲಿ ಸೀರೆಗಳು ಮತ್ತು ಮಧುರೈ ಟೈ ಅಂಡ್ ಡೈ, ಗುಜರಾತ್ ರಾಜ್ಯದ ಪಟೋಲ ರೇಷ್ಮೇ ಸೀರೆಗಳು ಇತರೇ ಎಲ್ಲಾ ರಾಜ್ಯದ ರೇಷ್ಮೇ ಹಾಗೂ ಕಾಟನ್ ಕೈಮಗ್ಗ ಡ್ರೆಸ್ ಮೆಟೀರಿಯಲ್‍ಗಳು ಕಸೂತಿ ವಸ್ತ್ರಗಳು ಟವಲ್‍ಗಳು, ಮೇಲು ಹಾಸು ಮತ್ತು ಹೊದಿಕೆಗಳು ನೆಲಹಾಸು ಮತ್ತು ಹೊದಿಕೆಗಳು ಮತ್ತು ಇತರೇ ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಡೆ ದೊರೆಯುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಲಕ್ಷಮಣ್ ತಳವಾರ ಮತ್ತು ರಾಜೇಶ್ ಉಪಸ್ಥಿತರಿದ್ದರು.