ಮೈಸೂರು: ಕುವೆಂಪುನಗರದ ಸ್ಪಂದನ ಸಂಸ್ಥೆ ವತಿಯಿಂದ ಯೋಗದಿನಾಚರಣೆಯನ್ನು ಈ ಬಾರಿ ಮನೆಯಲ್ಲಿಯೇ ಆಚರರಿಸಲಾಯಿತು. ಸಂಸ್ಥೆ ವತಿಯಿಂದ ನೀಡಲಾದ ಮನೆಯಲ್ಲೇ ಇರಿ, ಮನೆಯಲ್ಲೇ ಯೋಗ ಮಾಡಿ ಎಂಬ ಕರೆಗೆ ಸ್ಪಂದಿಸಿ, ಸ್ಪಂದನ ಕುಟುಂಬದ ಸದಸ್ಯರು ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುವುದರೊಂದಿಗೆ ಎಲ್ಲರ ಗಮನಸೆಳೆದಿದ್ದಾರೆ.
ಪಿಂಕಿ ನಿರಂಜನ್ ಎನ್. ದಳಪತಿ ಎಂ.ಡಿ, ಡಾ.ಪಲ್ಲವಿ ಪ್ರಭು
ಈ ಕಾರ್ಯ ಕ್ರಮದಲ್ಲಿ ಡಾ.ಕೆ.ಆರ್ ಕುಮಾರಸ್ವಾಮಿ, ಡಾ.ಪ್ರಭುಲಿಂಗಸ್ವಾಮಿ ಎಂ.ಡಿ, ಡಾ.ಪಲ್ಲವಿ ಪ್ರಭು ಪ್ರೊ.ನರಸಿಂಹ ಮೂರ್ತಿ, ಡಾ.ರೇಖಾ, ನಿಶ್ಚಿತ , ಮತ್ತು ಮಕ್ಕಳಾದ ತಕ್ಷಯ್, ಸನ್ನಿಧಿ, ನಿರಂಜನ್ ಎನ್. ದಳಪತಿ ಅವರಲ್ಲದೆ ಆಮೇರಿಕದಿಂದ ಸ್ಪಂದನ ಅಭಿಮಾನಿ ಪಿಂಕಿ ದೀಪು ಭಾಗವಹಿಸಿದ್ದು ವಿಶೇಷವಾಗಿತ್ತು. ಜತೆಗೆ 5೦ಕ್ಕೂ ಹೆಚ್ಚು ಯೋಗ ಪಟುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆಕಟ್ಟಿದರು.ಡಾ.ಪ್ರಭುಲಿಂಗಸ್ವಾಮಿ ಡಾ.ಕೆ.ಆರ್ ಕುಮಾರಸ್ವಾಮಿ ಪ್ರೊ.ನರಸಿಂಹ ಮೂರ್ತಿ
ಈ ವೇಳೆ ಮಾತನಾಡಿದ ಸ್ಪಂದನ ಅಧ್ಯಕ್ಷರಾದ ಎಂ.ಜಯಶಂಕರ್ ಅವರು ಪರಮ ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಅಂದಿನ ದಿನಮಾನದಲ್ಲೆ ಯೋಗದ ಮಹತ್ವವನ್ನು ಅರಿತು ಯೋಗಾಭ್ಯಾಸಕ್ಕೆ ಒತ್ತುಕೊಟ್ಟಿದ್ದರು. 1979 ರಲ್ಲಿ ನಾನು ರಾಮಾನುಜ ರಸ್ತೆಯಲ್ಲಿದ್ದ (ಈಗ ಆಸ್ಪತ್ರೆ ಆಗಿದೆ) ಜೆಎಸ್ ಎಸ್ ಪ್ರೌಡ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದೆ. ಆಗ ನಮಗೆ ಯೋಗಾಭ್ಯಾಸವನ್ನು ಪ್ರತಿದಿನ ಸಂಜೆ 4 ರ ಸಮಯದಲ್ಲಿ ನಡೆಸಲಾಗುತ್ತಿತ್ತು.
ಇದು ಶ್ರೀಗಳು ಸಂಸ್ಥೆಯ ವಿದ್ಯಾರ್ಥಿಗಳ ಹಿತಕ್ಕಾಗಿ ನಡೆಸಿದ, ಅಕ್ಷರದಾಸೋಹ, ಅನ್ನದಾಸೋಹದ ಜತೆಗೆ ಆರೋಗ್ಯ ಕಾಪಾಡಿಕೊಳ್ಳಲು ಪ್ರಾರಂಭಿಸಿದ ಯೋಗದ ತರಬೇತಿಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಸಹಾಯಕವಾಗಿತ್ತು. ಹೀಗೆ ಅನೇಕ ಕಾರ್ಯಗಳನ್ನು ಮಾಡುತ್ತಾ ಹಗಲಿರುಳು ಶ್ರಮಿಸುತ್ತಿದ್ದುದನ್ನು ಸ್ಮರಿಸಿದ ಅವರು ಭಾವುಕರಾದರು.



