ಸರಕುಗಳ ಸಾಗಾಣೆಯನ್ನು ಹೆಚ್ಚಿಸಲು ಹಾಗು ವ್ಯಾಪಾರ ನಿಯಮಗಳನ್ನು ಸರಳೀಕರಣಗೊಳಿಸಲು ರೈಲ್ವೆ ಸಚಿವಾಲಯದ ನಿರ್ದೇಶನದ ಅನ್ವಯ ಜುಲೈನಲ್ಲಿ ಮೈಸೂರು ವಿಭಾಗವು ಬಿ.ಡಿ.ಯು. (ವ್ಯಾಪಾರ ಅಭಿವೃದ್ಧಿ ಘಟಕ) ಗಳನ್ನು ಸ್ಥಾಪಿಸಿದೆ. ಸಾಗಿಸುವ ಸಾಂಪ್ರದಾಯಿಕ ಸರಕುಗಳಲ್ಲಿ ರೈಲ್ವೆಯ ಪಾಲನ್ನು ಹಿಡಿದಿಡುವುದು ಮತ್ತು ವಿವಿಧ ಬೃಹತ್ ಸರಕುಗಳನ್ನು ಸಾಗಿಸುವುದು ಈ ಕ್ರಮದ ಉದ್ದೇಶವಾಗಿದೆ. ವಿಭಾಗೀಯ ಮಟ್ಟದಲ್ಲಿ ರೂಪುಗೊಂಡ ಬಿ.ಡಿ.ಯು. ಸರಕು ವ್ಯವಹಾರಕ್ಕೆ ಏಕಗವಾಕ್ಷಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಸ್ತೆಯ ಮೂಲಕ ನಡೆಯುವ ಸಾಗಾಣೆಯನ್ನು ಆಕರ್ಷಿಸುವ ಮತ್ತು ರೈಲಿನಲ್ಲಿ ಸರಕು ಸಾಗಣೆಯ ಪ್ರಮಾಣವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ.
ಮೈಸೂರು ವಿಭಾಗದ ಬಿ.ಡಿ.ಯು. ನ ನಿರಂತರ ಪ್ರಚಾರದ ಪ್ರಯತ್ನದ ಫಲವಾಗಿ ವಿಭಾಗವು ಆಟೋಮೊಬೈಲ್, ನೆಸ್ಲೆ ಉತ್ಪನ್ನಗಳು, ಅಡಿಕೆ ಬೀಜಗಳು, ಶುಂಠಿ ಮುಂತಾದ ಹೊಸ ಸರಕುಗಳ ಸಾಗಾಣೆಯ ಒಪ್ಪಂದವನ್ನು ಪಡೆದಿದೆ . ಕಳೆದ ವರ್ಷಕ್ಕೆ ಹೋಲಿಸಿದರೆ ವಿಭಾಗವು ಅಕ್ಟೋಬರ್ ತಿಂಗಳಲ್ಲಿ ಸರಕು ಲೋಡಿಂಗ್ನಲ್ಲಿ ಸುಮಾರು ಶೇಕಡ 16 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಕಿಸಾನ್ ವಿಷೇಶ ರೈಲುಗಳ ಮೂಲಕ ಕೃಷಿ ಉತ್ಪನ್ನಗಳ ಸಾಗಣೆಗೆ ಉತ್ತೇಜನ ನೀಡಲು ಆಯ್ದ ಕೃಷಿ ಸರಕುಗಳಿಗೆ ಶೇಕಡ 50 ರವರೆಗೆ ರಿಯಾಯಿತಿ ನೀಡಲಾಗುತ್ತದೆ.
ಲೋಡಿಂಗ್ ಅನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಗ್ರಾಹಕರ ಅನುಭವವನ್ನು ಸುಧಾರಿಸುವ ಸಲುವಾಗಿ, ಮೈಸೂರು ವಿಭಾಗದ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ಅವರು ಸುಬ್ರಹ್ಮಣ್ಯ ರೋಡ್, ಹಾಸನ, ಅರಸಿಕೆರೆ, ಮೈಸೂರು, ಶಿವಮೊಗ್ಗ ಮತ್ತು ದಾವಣಗೆರೆ ಸೇರಿದಂತೆ ಉಪ ವಿಭಾಗೀಯ ಮಟ್ಟದಲ್ಲಿ ವಾಣಿಜ್ಯ ಮತ್ತು ಕಾರ್ಯಾಚರಣಾ ವಿಭಾಗಗಳ ಮೇಲ್ವಿಚಾರಕರನ್ನು ಒಳಗೊಂಡ ಬಿ.ಡಿ.ಯು.ಗಳನ್ನು ರೂಪಿಸಲು ಮುಂದಾಗಿದ್ದಾರೆ.
ಮೈಸೂರು ವಿಭಾಗವು ಗ್ರಾಹಕರಿಗೆ ಎಲ್ಲಾ ಲೋಡಿಂಗ್ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅತ್ಯಂತ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ ಮತ್ತು ಗ್ರಾಹಕರು ತಮ್ಮ ಅಮೂಲ್ಯವಾದ ಸಲಹೆಗಳನ್ನು / ವಾಸ್ತವಿಕವಾದ ಕುಂದುಕೊರತೆಗಳನ್ನು ನಿವೇದಿಸಲು ಕೇಳಿಕೊಳ್ಳಲಾಗಿದೆ. ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲದೆ ತಮ್ಮ ಸರಕುಗಳ ಸಾಗಣೆಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಮತ್ತು ಪ್ರಕ್ರಿಯೆಗಳಲ್ಲಿನ ಸಣ್ಣ ಉಪದ್ರವಗಳನ್ನು ಸಹ ಆದ್ಯತೆಯ ಮೇರೆಗೆ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಲಾಗುವುದು.ಅದಕ್ಕಾಗಿ ಸಿಬ್ಬಂದಿಗಳ ಹೆಸರು ಮತ್ತು ಸಂಪರ್ಕ ಸಂಖ್ಯೆಗಳು ಈ ಕೆಳಗಿನಂತಿವೆ.
1 ಸುಬ್ರಹ್ಮಣ್ಯ ರೋಡ್ – ವಿಟ್ಟಲ್ ನಾಯಕ್ 8197176888 , ದೇವಪ್ಪ ನಾಯಕ್ 9731667942
2 ಹಾಸನ / ಅರಸಿಕೆರೆ – ಅಂಬರೀಶ್ 9731667982, ಶಿವಶಂಕರ್ 9731667919
3 ಶಿವಮೊಗ್ಗ – ವಿಶ್ವನಾಥ್ ನಾಯಕ್ 9739579198 , ನಾಗರಾಜ್ 9731667924
4 ಮೈಸೂರು – ಶ್ರೀನಿವಾಸ್ 9731647870, ಕಾರ್ತಿಕ್ 8884303801
5 ದಾವಣಗೆರೆ – ಶಂಕರಾನಂದ್ 9900971078, ಶಿವಮೂರ್ತಿ 9731667916
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ‘ಗೂಗಲ್ ಪ್ಲೆಸ್ಟೋರ್’ ನಿಂದ ನೈಋತ್ಯ ರೈಲ್ವೆಯ “SWIFT” ಮೊಬೈಲ್ ಅಪ್ಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.