ಚಾಮರಾಜನಗರ: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಪದವೀಧರರ ಕ್ಷೇತ್ರದಿಂದ ನಡೆಯುವ ದ್ವೈವಾರ್ಷಿಕ ಚುನಾವಣೆ-೨೦೨೨ರ ಸಂಬಂಧ ಜಿಲ್ಲೆಯ ತಾಲೂಕುಗಳ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚುವಿಕೆ, ಸಮಾಜವಿರೋಧಿ ಚಟುವಟಿಕೆಗಳು, ಮದ್ಯ ಹಂಚುವಿಕೆ ಇತ್ಯಾದಿ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಪರಿಶೀಲನೆ ಮಾಡಲು ಕ್ಷಿಪ್ರ ಪರಿಶೀಲನಾ (ಫ್ಲೈಯಿಂಗ್ ಸ್ಕ್ಯಾಡ್) ತಂಡವನ್ನು ೨೪*೭ ಅವಧಿಗೆ ಮೂರು ಪಾಳೀಯಲ್ಲಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿಯಂತ್ರಣಕ್ಕೆ ಒಳಪಟ್ಟು ನೇಮಕ ಮಾಡಿರುವ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ಅವರ ವ್ಯಾಪ್ತಿಯಲ್ಲಿ ಚುನಾವಣಾ ಅಪರಾಧಗಳಿಗೆ ಸಂಬಂಧಿಸಿದ ದೂರುಗಳು ಬಂದಲ್ಲಿ ತ್ವರಿತವಾಗಿ ಕ್ರಮ ಕೈಗೊಂಡು, ನಿಯಮಾನುಸಾರ ಪ್ರಕರಣ ದಾಖಲಿಸಿ ಕ್ರಮ ವಹಿಸಬೇಕು. ಅಲ್ಲದೇ ಯಾವುದೇ ಚುನಾವಣಾ ಅಪರಾಧ ಮತ್ತು ಅಕ್ರಮಗಳು ನಡೆಯದಂತೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ದೈನಂದಿನ ವರದಿಯನ್ನು ನಿಗಧಿತ ನಮೂನೆಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ್ ಅವರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ಮೊದಲನೇ ಪಾಳಿಯೂ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೨ ಗಂಟೆಯವರೆಗೆ, ೨ನೇ ಪಾಳಿ ಮಧ್ಯಾಹ್ನ ೨ರಿಂದ ರಾತ್ರಿ ೮ ಗಂಟೆಯವರೆಗೆ ಹಾಗೂ ೩ನೇ ಪಾಳಿ ರಾತ್ರಿ ೮ರಿಂದ ಬೆಳಿಗ್ಗೆ ೬ ಗಂಟೆಯವರೆಗೆ ಇರಲಿದೆ.
ಕೊಳ್ಳೇಗಾಲ ತಾಲೂಕು ಪಾಳ್ಯ ಹೋಬಳಿ, ಹನೂರು ಪಟ್ಟಣ ಪಂಚಾಯಿತಿ ಮತ್ತು ಗಾಮ ಪಂಚಾಯಿತಿ ವ್ಯಾಪ್ತಿಗೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿ. ನವೀನ್ ಮಠದ ಅವರು (ಮೊ. ಸಂ ೯೬೮೬೬೩೩೩೫೧) ಮೊದಲನೇ ಪಾಳಿಯಲ್ಲಿ, ಕೊಳ್ಳೇಗಾಲ ಎಪಿಎಂಸಿ ಕಾರ್ಯದರ್ಶಿ ರಘು ಅವರು (ಮೊ. ಸಂ ೯೯೮೦೭೯೫೧೬೩) ಎರಡನೇ ಪಾಳಿಯಲ್ಲಿ, ಹಾಗೂ ಕೊಳ್ಳೇಗಾಲ ಕಾವೇರಿ ನೀರಾವರಿ ನಿಗಮ ನಿಯಮಿತ ನಂ ೩, ಕೆಸಿಐ ಉಪ ವಿಭಾಗದ ಸಹಾಯಕ ಇಂಜಿನಿಯರ್ ಎಸ್. ಬಸವೇಶ್ (ಮೊ. ಸಂ ೬೩೬೩೦೬೫೩೬೯) ಅವರು ಮೂರನೇ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಹನೂರು ತಾಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಮಲೆ ಮಹದೇಶ್ವರ ಬೆಟ್ಟ ವಿಬಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಮಹದೇವಸ್ವಾಮಿ (ಮೊ. ಸಂ ೯೪೪೮೫೯೫೭೭೦) ಮೊದಲನೇ ಪಾಳಿಯಲ್ಲಿ, ಹನೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಾಣಾಧಿಕಾರಿ ಟಿ. ಆರ್ ಸ್ವಾಮಿ (ಮೊ. ಸಂ ೯೦೦೮೪೬೦೬೧೯) ಎರಡನೇ ಪಾಳಿಯಲ್ಲಿ ಹಾಗೂ ಮಲೆ ಮಹದೇಶ್ವರ ಬೆಟ್ಟ ವಿಬಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹೇಶ್ (ಮೊ. ಸಂ ೯೯೬೪೨೨೮೭೪೨) ಮೂರನೇ ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಗೆ ಕೊಳ್ಳೇಗಾಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ನಾಗೇಶ್ (ಮೊ. ಸಂ ೮೪೯೪೮೩೨೯೪೫) ಮೊದಲನೇ ಪಾಳಿಯಲ್ಲಿ, ಕೊಳ್ಳೇಗಾಲ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಗಂಗಾಧರ್ (ಮೊ. ಸಂ ೯೪೮೧೫೩೨೩೧೮) ಎರಡನೇ ಪಾಳಿಯಲ್ಲಿ ಹಾಗೂ ಕೊಳ್ಳೇಗಾಲ ಕಾವೇರಿ ನೀರಾವರಿ ನಿಗಮ ನಿಯಮಿತದ ಸಹಾಯಕ ಕಾರ್ಯಪಾಲಕ ಅಭಿಯಂತಕರಾದ ಶಾಂತಕುಮಾರ್ (ಮೊ. ಸಂ ೮೮೬೧೩೪೬೩೩೧) ಮೂರನೇ ಪಾಳಿಯಲ್ಲಿ ಕರ್ತವ್ಯ ಮಾಡಲಿದ್ದಾರೆ.
ಕೊಳ್ಳೇಗಾಲ ತಾಲೂಕು ಕಸಬಾ ಹೋಬಳಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮ ನಂ.೨ ಕೆಸಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಲ್. ಅಶೋಕ್ (ಮೊ. ಸಂ ೯೮೮೦೭೭೩೫೧೪ ಮತ್ತು ೮೬೧೮೩೯೦೧೬೮) ಮೊದಲನೇ ಪಾಳಿಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಾಣಾಧಿಕಾರಿ ಎಸ್ ಚಂದ್ರಪಾಟೀಲ್ (ಮೊ. ಸಂ ೯೪೮೦೩೬೨೭೨೭) ಎರಡನೇ ಪಾಳಿಯಲ್ಲಿ ಹಾಗೂ ಲೋಕೋಪಯೋಗಿ ಇಲಾಖೆ ನಂ. ೫ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಈ. ರಾಮಸ್ವಾಮಿ (ಮೊ. ಸಂ ೯೪೪೮೯೧೪೩೫೭) ಮೂರನೇ ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಯಳಂದೂರು ತಾಲೂಕು ಕಸಬಾ ಹೋಬಳಿ, ಪಟ್ಟಣ ಪಂಚಾಯಿತಿ ಮತ್ತು ಅಗರ ಹೋಬಳಿ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಕಾಂತ (ಮೊ. ಸಂ ೯೮೮೬೨೫೫೯೭೦) ಮೊದಲನೇ ಪಾಳಿಯಲ್ಲಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಹರೀಶ್ (ಮೊ. ಸಂ ೭೮೯೨೮೧೦೭೬೭) ಎರಡನೇ ಪಾಳಿಯಲ್ಲಿ ಹಾಗೂ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತೇಶ್ ಅವರು (ಮೊ. ಸಂ ೯೪೪೮೦೩೬೧೩೧) ಮೂರನೇ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ..
ಗುಂಡ್ಲುಪೇಟೆ ತಾಲೂಕಿನ ಹಂಗಳ, ಕಸಬಾ ಹೋಬಳಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ನಂಜುಂಡೇಗೌಡ (ಮೊ. ಸಂ ೮೯೧೪೪೪೮೩೯) ಮೊದಲನೇ ಪಾಳಿಯಲ್ಲಿ, ಎಪಿಎಂಸಿ ಕಾರ್ಯದರ್ಶಿ ಎಸ್. ಶ್ರೀಧರ್ (ಮೊ.ಸಂ.೯೮೪೪೨೧೧೮೮೫) ಎರಡನೇ ಪಾಳಿಯಲ್ಲಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ (ಮೊ. ಸಂ. ೯೪೪೮೯೩೮೭೬೯) ಮೂರನೇ ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಮತ್ತು ತೆರಕಣಾಂಬಿ ಹೋಬಳಿ ವ್ಯಾಪ್ತಿಯಲ್ಲಿ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ವಿವೇಕ್ (ಮೊ. ಸಂ ೮೬೬೦೪೭೪೪೧೫) ಮೊದಲನೇ ಪಾಳಿಯಲ್ಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಲುವರಾಜು (ಮೊ. ಸಂ. ೯೯೦೦೭೯೪೪೮೦) ಎರಡನೇ ಪಾಳಿಯಲ್ಲಿ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಶವಂತ್‌ಗೌಡ (ಮೊ.ಸಂ. ೯೯೦೨೬೩೬೩೫೯) ಮೂರನೇ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಚಾಮರಾಜನಗರ ತಾಲೂಕಿನ ಹರವೆ ಮತ್ತು ಹರದನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಟ್ಟುಗುಳಿಪುರ ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಮಹೇಶ್ (ಮೊ.ಸಂ ೯೭೩೧೬೩೪೭೬೦) ಮೊದಲನೇ ಪಾಳಿಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿಕ್ಕಬಸವಯ್ಯ ಅವರು ಎರಡನೇ ಪಾಳಿಯಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ (ಮೊ.ಸಂ. ೯೧೪೧೨೯೯೯೮) ಅವರು ಮೂರನೇ ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಚಾಮರಾಜನಗರ ತಾಲೂಕಿನ ಕಸಬಾ, ಚಂದಕವಾಡಿ ಹೋಬಳಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಎಪಿಎಂಸಿ ಕಾರ್ಯದರ್ಶಿ ಟಿ.ವಿ. ಪ್ರಕಾಶ್ (ಮೊ.ಸಂ ೮೭೬೨೮೯೮೩೯೪ ಮತ್ತು ೯೯೧೬೨೨೪೬೬೯) ಮೊದಲನೇ ಪಾಳಿಯಲ್ಲಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಶಾಂತ್ (ಮೊ.ಸಂ. ೮೧೨೩೭೪೭೩೩೪) ಎರಡನೇ ಪಾಳಿಯಲ್ಲಿ ಹಾಗೂ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ (ಮೊ.ಸಂ. ೯೪೪೮೫೦೦೯೯೬) ಅವರು ಮೂರನೇ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸಂತೇಮರಹಳ್ಳಿ ವಿಭಾಗದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಂ. ಜಯಶೀಲ (ಮೊ.ಸಂ ೯೭೪೧೮೪೩೨೧೮) ಮೊದಲನೇ ಪಾಳಿಯಲ್ಲಿ, ಸಂತೇಮರಹಳ್ಳಿ ವಿಭಾಗದ ನಂ.೩ ಕೆಸಿಸಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಡಿ.ಎಸ್. ಉಮೇಶ್ (ಮೊ.ಸಂ. ೯೬೧೧೫೦೬೪೧೬) ಎರಡನೇ ಪಾಳಿಯಲ್ಲಿ ಹಾಗೂ ಯಳಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು (ಮೊ.ಸಂ. ೯೪೮೦೬೯೫೧೧೦) ಮೂರನೇ ಪಾಳಿಯಲ್ಲಿ ಕಾರ್ಯ ನಿರ್ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ವಿಡಿಯೋ ಸರ್ವೇಕ್ಷಣಾ ತಂಡ ರಚನೆ : ರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಪದವೀಧರರ ಕ್ಷೇತ್ರದಿಂದ ದ್ವೈವಾರ್ಷಿಕ ಚುನಾವಣೆ-೨೦೨೨ರ ಸಂಬಂಧ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲನೆ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ನಿಗಾ ವಹಿಸಲು ವಿಡಿಯೋ ಸರ್ವೇಕ್ಷಣಾ ತಂಡಗಳನ್ನು ತಾಲೂಕುವಾರು ನಿಯೋಜಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿಗೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಶಿವಕುಮಾರ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗರಾಜು ನಿಯೋಜನೆಗೊಂಡಿದ್ದಾರೆ.
ಚಾಮರಾಜನಗರ ತಾಲೂಕಿಗೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೋಹನ್‌ರಾಜ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಣುಕೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂದೇಶ್ ನಿಯೋಜನೆಗೊಂಡಿದ್ದಾರೆ.
ಯಳಂದೂರು ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕರಾದ ಶಿವಾಲಂಕರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಎಂಜಿನಿಯರ್ ಧನಲಕ್ಷ್ಮೀ, ಸಹಾಯಕ ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ ನಿಯೋಜಿತರಾಗಿದ್ದಾರೆ.
ಕೊಳ್ಳೇಗಾಲ ತಾಲೂಕಿಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಭಾಸ್ಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸುಂದ್ರಮ್ಮ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ನಿಯೋಜಿತರಾಗಿದ್ದಾರೆ.

ಹನೂರು ತಾಲೂಕಿಗೆ ಕೃಷಿ ಅಧಿಕಾರಿ ರಘುವೀರ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ರವೀಂದ್ರ, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಸತೀಶ್‌ಚಂದ್ರ ನಿಯೋಜನೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.