ಚಾಮರಾಜನಗರ: ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಪದವೀಧರರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಶೇ. ೭೩.೨೧ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ ಒಟ್ಟು ೧೨೧೪೭ ಪದವೀಧರ ಕ್ಷೇತ್ರದ ಮತದಾರರಿದ್ದಾರೆ. ಈ ಪೈಕಿ ೭೯೧೨ ಪುರುಷರು, ೪೨೩೩ ಮಹಿಳೆಯರು, ಇತರೆ ಇಬ್ಬರು ಇದ್ದಾರೆ. ಇವರಲ್ಲಿ ಒಟ್ಟು ೮೮೯೩ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ೬೦೦೭ ಪುರುಷರು, ೨೮೮೬ ಮಹಿಳೆಯರು ಮತ ಚಲಾಯಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. ೭೨.೦೭ ರಷ್ಟು ಮತದಾನವಾಗಿದೆ. ತಾಲೂಕಿನಲ್ಲಿ ೧೬೩೭ ಪುರುಷರು, ೭೪೪ ಮಹಿಳೆಯರು ಸೇರಿದಂತೆ ಒಟ್ಟು ೨೩೮೧ ಮತದಾರರಿದ್ದಾರೆ. ಇವರಲ್ಲಿ ೧೨೨೨ ಪುರುಷರು, ೪೯೪ ಮಹಿಳೆಯರು ಸೇರಿದಂತೆ ಒಟ್ಟು ೧೭೧೬ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಾಮರಾಜನಗರ ತಾಲೂಕಿನಲ್ಲಿ ಶೇ. ೭೦.೮೨ ರಷ್ಟು ಮತದಾನವಾಗಿದೆ. ತಾಲೂಕಿನಲ್ಲಿ ೨೫೯೫ ಪುರುಷರು, ೧೫೩೩ ಮಹಿಳೆಯರು, ಇತರೆ ಇಬ್ಬರು ಸೇರಿದಂತೆ ಒಟ್ಟು ೪೧೩೦ ಮತದಾರರು ಇದ್ದಾರೆ. ಈ ಪೈಕಿ ಇವರಲ್ಲಿ ೧೯೧೦ ಪುರುಷರು, ೧೦೧೫ ಮಹಿಳೆಯರು ಸೇರಿದಂತೆ ಒಟ್ಟು ೨೯೨೫ ಮತದಾರರು ಮತ ಚಲಾಯಿಸಿದ್ದಾರೆ.
ಯಳಂದೂರು ತಾಲೂಕಿನಲ್ಲಿ ಶೇ. ೮೧.೯೯ ರಷ್ಟು ಮತದಾನವಾಗಿದೆ. ತಾಲೂಕಿನಲ್ಲಿ ೮೫೩ ಪುರುಷರು, ೪೫೨ ಮಹಿಳೆಯರು ಸೇರಿದಂತೆ ಒಟ್ಟು ೧೩೦೫ ಮತದಾರರಿದ್ದಾರೆ. ಇವರಲ್ಲಿ ೭೧೭ ಪುರುಷರು, ೩೫೩ ಮಹಿಳೆಯರು ಸೇರಿದಂತೆ ಒಟ್ಟು ೧೦೭೦ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನಲ್ಲಿ ಶೇ. ೭೨.೬೦ ರಷ್ಟು ಮತದಾನವಾಗಿದೆ. ತಾಲೂಕಿನಲ್ಲಿ ೧೬೫೧ ಪುರುಷರು, ೧೦೧೦ ಮಹಿಳೆಯರು ಸೇರಿದಂತೆ ಒಟ್ಟು ೨೬೬೧ ಮತದಾರರಿದ್ದಾರೆ. ಇವರಲ್ಲಿ ೧೨೫೧ ಪುರುಷರು, ೬೮೧ ಮಹಿಳೆಯರು ಸೇರಿದಂತೆ ಒಟ್ಟು ೧೯೩೨ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹನೂರು ತಾಲೂಕಿನಲ್ಲಿ ಶೇ. ೭೪.೮೫ ರಷ್ಟು ಮತದಾನವಾಗಿದೆ. ತಾಲೂಕಿನಲ್ಲಿ ೧೧೭೬ ಪುರುಷರು, ೪೯೪ ಮಹಿಳೆಯರು ಸೇರಿದಂತೆ ಒಟ್ಟು ೧೬೭೦ ಮತದಾರರಿದ್ದಾರೆ. ಇವರಲ್ಲಿ ೯೦೭ ಪುರುಷರು, ೩೪೩ ಮಹಿಳೆಯರು ಸೇರಿದಂತೆ ಒಟ್ಟು ೧೨೫೦ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.