ಅರುಣೋದಯದ ಗೋಧೂಳಿ ಹೊತ್ತಿನ ಸುಂದರಾದಿತ್ಯ
ಅಡಗೂಲಜ್ಜಿಯ “ಒಂದೂರಲ್ಲೊಬ್ಬ ರಾಜ…ರಾಣಿ…ರಾಜ್ಯ”
ಬೊಚ್ಚು ಬಾಯಜ್ಜನ ತಿಂಗಳಬೆಳಕಿನ ಪರಸಂಗದ ಪಾಂಡಿತ್ಯ
ಅತ್ತೆಗೊಂದುಕಾಲ ಸೊಸೆಗೊಂದುಕಾಲದ ಪಾರಪತ್ಯ
ಅರ‍್ವನ ಕೈ-ಬಾಯ್-ಕಚ್ಚೆ ಶುದ್ಧ ರಾಜಕಾರಣದ ಅಧಿಪತ್ಯ
ರಘುರಾಮನ ನಡೆ: ಕ್ಷಮಾದಾನದ ಸದೃಢದ ಅಚಲತೆ
ರಾಧಾಮಾಧವನ ನುಡಿ: ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಗೆ ಸಿದ್ಧತೆ
ಜಾನಕಿಯ ಸರಳ ಸಜ್ಜನ ಸುಂದರ ಸಹನಾಶೀಲತೆ
ಪಾಂಚಾಲಿಯ ಸಹಕಾರ ವ್ಯಂಗ್ಯ ಶಪಥ ಶರ‍್ಯತೆ
ಮಾತಾಪಿತರ ತಾರತಮ್ಯ ರಹಿತ ಪೋಷಣಾ ಸಮಾನತೆ
ಆಚರ‍್ಯರ ಗುರುಸಂಹಿತೆ ಸರಿಸಮಾನ ಬೋಧನಾ ಬದ್ಧತೆ
ಅಂಚೆಅಣ್ಣನ ಶತಮಾನಗಳ ಚರಿತ್ರರ‍್ಹ ಪ್ರಾಮಾಣಿಕತೆ
ವೈದ್ಯನ ಔಷ್ಧೋಪಚಾರ ಸಂ-ಶೋಧನಾ ನಿತ್ಯ(ನಿಶ್)ಚಿತ್ತತೆ
ಆದಿತ್ಯನಾಥಯೋಗಿಯ ಉತ್ತರೋತ್ತರ ಉದ್ಧಾರ ಉದಾರತೆ
ನಮೋಜೀಯವರ ಜಾಗತಿಕ ಜಾಗೃತದ ಜಾಣ ಜಾಗರೂಕತೆ
ಆರು ದಶಕ ಉಪ್ಪು ತಿಂದವರು ನೀರು ಕುಡಿಯುವ ಅನನ್ಯತೆ
ಅನುಕಂಪ(ಮತ)ದ (ವೃದ್ಧ)ನಾರೀ(ಸತಿವ್ರತ) ಪತಿವ್ರತೆ
ಹುಟ್ಟಿದ ಮೊದಲನೇ……
ದಿನದ ಕಾಗೆ-ಕೋಗಿಲೆ, ಕೋತಿ-ಕೋಳಿ ಮರಿ
ವಾರದ ಮೇಕೆ-ಕುರಿ, ಮೊಲ-ಬೆಕ್ಕಿನ ಮರಿ
ಪಾಕ್ಷಿಕದ ಕತ್ತೆ-ಕುದುರೆ, ನಾಯಿ-ಹಂದಿ ಮರಿ
ತಿಂಗಳ ಕೆಚ್ಚಲುಣ್ಣುವ ಆಕಳ ಕರುವಿನ ಸಿರಿ
ತ್ರೈಮಾಸಿಕದ ರಾಗಿ ಭತ್ತ ಜೋಳದ ಹಸಿರು
ರ‍್ಧರ‍್ಷದ ಬಾಳೆಗರಿ ಕಬ್ಬಿನಸಿರಿ ಉಸಿರು
ನವಮಾಸದ ನವದಂಪತಿ ಮೊಗದಕಳೆ ಬಸಿರು
ವರ‍್ಷಿಕ ಆ(ದಾ)ಯ-ವ್ಯಯ ಏರುಪೇರಿನ ಏದುಸಿರು
ಅರಳುಹೂವಿನ ಅಮೋಘ ಪರಿಮಳದ ಪರಮಾನಂದ
ಅಳು(ನಗು)ವಕಂದನ ಅಪರ‍್ವ ಹಾಲ್ಗೆನ್ನೆ ಅಮಿತಾನಂದ
ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ನಂ.೧ ಸ್ಥಾನದ ಭಾರತ
ನೆಲ ಜಲ ಗ(ನು)ಡಿ ನಾಡು ಸಮಸ್ಯೆ ಇಲ್ಲದ ರ‍್ನಾಟಕ
ವಸಂತ ಕೋಗಿಲೆಯ ಇಂಪು ಗಾಯನ
ವೈಣಿಕ ಕೈಚಳಕ ವೀಣಾಸ್ಪಂದನ ಸುರಗಾನ
ಟಪಟಪ ಆಲಿಕಲ್ಲು ಬಿದ್ದ ಮಣ್ಣಿನ ಘಮನ
ತೊಟತೊಟ ಹನಿಗಳಾ ತುಂತುರು ಸಿಂಚನ
ಹದಿ ಹರೆಯದವರ ಮುಂಜಿ ಕಂಪನ
ಪಡ್ಡೆ ಹೈಕಳ ಮದುವೇ ಸೋಬಾನ
ಕಪ್ಪೆ-ಮಂಡರಗಪ್ಪೆಗಳ ವಟವಟ ದನಿ
ಹುಳ-ಉಪ್ಪಟೆ ಜೀರುಂಬೆಗಳ ಕಟಕಟ ಪ್ರತಿಧ್ವನಿ
ಪಚ್ಚೆಪೈರು ತೆನೆಗೊನೆ ಗೊಂಚಲ ಸಿರಿಧರೆ
ಶುಭ್ರಶ್ವೇತ ಧುಮ್ಮಿಕ್ಕುವ ಜಲಧಾರೆ ನೊರೆ
ಒನಪು ವಯ್ಯಾರ ಶೃಂಗಾರ ಅಲಂಕಾರ ಧಾರೆ
ಕವಿ-ಕಲೆಗಾರ-ವಿದ್ವಾಂಸರ ಗೀತೆ-ಚಿತ್ರ-ಸಂಗೀತಸೂರೆ
ರ‍್ಣ ನಯನಾನಂದದ ಹೃನ್ಮನ ತುಂಬಿದ ವಸುಂಧರೆ
ಕುಣಿದು ಕುಪ್ಪಳಿಸಿ ನಲಿದು ರ‍್ತಿಸುವ ಚಂದಿರ ತಾರೆ
ಸಬಲರಿಂದ ಅಬಲರಿಗೆ ಪ್ರಬಲ ಉಪಕಾರ
ಸುಖ ಶಾಂತಿ ನೆಮ್ಮದಿಯ ಸಾದರ ಸ್ವೀಕಾರ
ಮೊಟ್ಟ ಮೊದಲ ಶಾಲಾ ಕಾಲೇಜು ದಿನ
ಕಟ್ಟ ಕಡೆಯ ಉದ್ಯೋಗ ದುಡಿಮೆಯ ಕ್ಷಣ
ನಟ್ಟ ನಡುವಿನ ಪಂಕ್ತಿಯ ಬೂರಿ ಭೋಜನ
ಇಟ್ಟ ಗುರಿಯನು ಮು(ಮೆ)ಟ್ಟಿದ ಸ್ರ‍್ಧಾಕಣ
ನೆಟ್ಟ ನೋಟದ ಒಲವಿನಾ ಮೊದಲ ದಿನ
ತೊಟ್ಟ ತೂಕದ ವಸ್ರಾಭರಣ ಕಳಚಿದ ಕ್ಷಣ
ಚಟ್ಟ ಕಟ್ಟುವ ಬೊಂಬುಸವಾರಿ ಅನುಭವದಾ ಕ್ಷಣ
ಆಪ್ಯಾಯಮಾನ !!!
ಇಲವಾದರಿಲವೆನ್ನಿ ….?

ಕುಮಾರಕವಿ ಬೋ.ನಾ.ನಟರಾಜ