ಜು 5.ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸುವರ್ಣ ಬೆಳಕು ಫೌಂಡೇಷನ್
ಹಾಗೂ ಹಿಮಾಲಯ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ ರಾಮಕೃಷ್ಣನಗರದ ಯೋಗ ಉದ್ಯಾನವನ ಬಳಿಯ ಪತಂಜಲಿ ಸಸ್ಯಧಾಮದಲ್ಲಿಪರಿಸರ ಪ್ರೇಮಿಗಳು ಹಾಗೂ ಪ್ರಕೃತಿ ಸಂರಕ್ಷಣೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಧನೆಗೈದಿರುವ ಪ್ರಸನ್ನ ಮೂರ್ತಿ ಹಾಗೂ ಡಾ. ಎಸ್. ಪಿ. ಯೋಗಣ್ಣ ಅವರಿಗೆ ಹಿರಿಯ ಸಮಾಜ ಸೇವಕ ಡಾ.ಕೆ. ರಘುರಾಮ್ ವಾಜಪೇಯಿ ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಅವರು ನಮ್ಮ ಸುತ್ತಮುತ್ತಲ ಪ್ರಕೃತಿಯನ್ನು ಪ್ರೀತಿಸಿ ಬದುಕಬೇಕೆಂದು ಹಾಗೂ ತಮ್ಮ ನಮ್ಮ ಪೂರ್ವಿಕರು, ಋಷಿಮುನಿಗಳು ಸಾರಿದಂತೆ ನೆಲ,ಜಲ, ಅರಣ್ಯಗಳ ರಕ್ಷಣೆ ನಮ್ಮ ಆದ್ಯತೆಯಾಗಬೇಕು ಎಂದರು.
ನಾವು ಅರಣ್ಯ ಸಂಪತ್ತನ್ನು ನಾಶಪಡಿಸುವುದು, ವಾಯುಮಾಲಿನ್ಯ ಮಾಡುವುದು ಪ್ರಕೃತಿಯ ಅಸಮಾನತೆಯಾಗುತ್ತದೆ ಎಂದರಲ್ಲದೆ ಪರಿಸರ ಜಾಗೃತಿಯ ಮೂಲಕ ಪ್ರಕೃತಿಯನ್ನು ಸಂರಕ್ಷಿಸೋಣ ಎಂದು ಹಿತ ನುಡಿದರು.ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಶ್ರೀ ಎಂ.ಎನ್ ನವೀನ್ ಕುಮಾರ್, ಇಂದಿನ ಕರೋನಾ ಪರಿಸ್ಥಿತಿಯಿಂದಾಗಿ ಪ್ರಪಂಚವೇ ಸಾಕಷ್ಟು ತೊಂದರೆಗೆ ಒಳಗಾಗಿದೆ. ಇದಕ್ಕೆ ನಾವುಗಳು ಮಿತಿಮೀರಿ ಹಾಳುಮಾಡಿದ ಪ್ರಕೃತಿಯ ನಾಶವೇ ಕಾರಣ ಎಂದರಲ್ಲದೆ ಪರಿಸರದ ಪುನರ್ ನಿರ್ಮಾಣ ಮಾಡುವತ್ತ ಪ್ರತಿಯೊಬ್ಬರೂ ಹೆಜ್ಜೆ ಹಾಕಬೇಕಿದೆ ಎಂದರು.
ಕಾರ್ಯಕ್ರಮದಲ್ಲಿಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಎಸ್. ಮಹೇಶ್ ನಾಯಕ್, ಹಿಮಾಲಯ ಫೌಂಡೇಶನ್ ಅಧ್ಯಕ್ಷ ಎನ್ ಅನಂತ್, ಕಾರ್ಯದರ್ಶಿ ಹರ್ಷವರ್ಧನ, ಸಿನರ್ಜಿ ಸಂಸ್ಥಾಪಕ ಪ್ರತಾಪ್,ಜೈ ಚಾವ್ಲ ,ಸದಸ್ಯ ಮಂಜುನಾಥ ಬಿ .ಆರ್. ಶಿವು, ಕುಮಾರ್,ಶ್ರೀಕಾಂತ್, ಮುಂತಾದವರು ಉಪಸ್ಥಿತರಿದ್ದರು.