ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ೨೦ನೆ ಶತಮಾನದ ಪ್ರಾರಂಭದಲ್ಲಿ ಮೊದಲನೆ ವಿಶ್ವ ಯುದ್ಧ, ೨ನೆ ಮಹಾಯುದ್ಧ, ಪ್ರಪಂಚವನ್ನೆ ನಡುಗಿಸಿತ್ತು! ಗಾಂಧೀಜಿ ದಂಡಿಯಾತ್ರೆ[೧೯೩೦], ಕ್ವಿಟ್‌ಇಂಡಿಯ ಚಳುವಳಿ [೧೯೪೨], ಭಾರತೀಯರ ಅ-ಸ್ವಾತಂತ್ರ್ಯ ಕಾಲವು ಇನ್ನೇನು ಮುಗಿದು ಶತಾಯಗತಾಯ ನಮ್ಮ ಮಾತೃಭೂಮಿಯನ್ನು ಮರಳಿ ಪಡೆಯಲೇಬೇಕೆಂಬ ಛಲಬಲ ಹಳ್ಳಿಹಳ್ಳಿಯಲ್ಲು ಮುಗಿಲು ಮುಟ್ಟಿತ್ತು. ಸ್ವತಂತ್ರಕ್ಕಾಗಿ ಫಿ(ಪ)ರಂಗಿಜನರ ವಿರುದ್ಧ ಗಾಂಧೀಜಿ ಶಾಂತಿಮಂತ್ರ ನೇತಾಜಿಯ ಕ್ರಾಂತಿಕಹಳೆ ತಾರಕಕ್ಕೆಏರಿತ್ತು. ಆಂಗ್ಲರನ್ನು ಇಂಗ್ಲೆಂಡಿಗೆ ಓಡಿಸುವ ಭಾರತದ ೩೩ ಕೋಟಿ ಪ್ರಜೆಗಳ ಕ್ರೋಧಕಾವು ಹಿಮಾಲಯದ ಎತ್ತರದಲ್ಲಿತು! ಪ್ರತಿದಿನವೂ ಒಂದಿಲ್ಲೊಂದು ವಿಧ್ವಂಸಕ ವಿದ್ಯಮಾನದ ರೋಚಕ ಮಾಹಿತಿಯನ್ನು ಪ್ರಜೆಗಳಿಗೆ ತಲುಪಿಸಲು ಮಾಧ್ಯಮದ ಸಹಾಯ ಅವಶ್ಯಕವಾಗಿತ್ತು. ಆಕಾಲಕ್ಕೆ ಪ್ರಪಂಚ ದಾದ್ಯಂತ ೮೨%ಮುದ್ರಣ ಮಾಧ್ಯಮವಿತ್ತು. ಯಾವುದೆ ಅದ್ಭುತ ಆಶ್ಚರ್ಯ ಘಟನೆ ನಡೆದ ಅದೆಷ್ಟೊ ಗಂಟೆ/ದಿನ/ವಾರ/ ತಿಂಗಳ ನಂತರ ಅದರ ಸುದ್ದಿಯು ಸಾಮಾನ್ಯ ಪ್ರಜೆಗೆ ತಲುಪುವ ಪರಿಸ್ಥಿತಿ ಇತ್ತು!
ಜಗತ್ತಿನ ವರ್ತಮಾನವನ್ನು ಶ್ರೀಸಾಮಾನ್ಯನಿಗೆ ಬಿಸಿಸುದ್ದಿಯಾಗಿ ತಿಳಿಸುವ ದಿನಪತ್ರಿಕೆಗಳು ಪ್ರಕಟಗೊಳ್ಳುವ ಪರ್ವಕಾಲ ಭಾರತದಲ್ಲಿ ಪ್ರಾರಂಭವಾಯ್ತು. ವಿಶೇಷವಾಗಿ ಕರ್ನಾಟಕ[ಮೈಸೂರು] ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸಂಜೆಹೊತ್ತು ಪ್ರಕಟವಾಗುವ ಸಣ್ಣಪತ್ರಿಕೆಗಳು ಜನ್ಮ ತಾಳಿದವು! ಸ್ವಾತಂತ್ರ್ಯಪೂರ್ವದಲ್ಲಿ ಐದಾರು ಸಂಖ್ಯೆಯಷ್ಟಿದ್ದ ೧ಕಾಸಿನ ಸಾಯಂಕಾಲದ ಸಣ್ಣದಿನಪತ್ರಿಕೆಗಳು ಸ್ವಾತಂತ್ರ್ಯಾನಂತರ ಡಜ಼ನ್ಗಟ್ಟಲೆ ಶುರುವಾದವು. ಶತಮಾನದ ಅಂತ್ಯಕ್ಕೆ ವಿಶ್ವದಲ್ಲೆ ಅತಿಹೆಚ್ಚು ಸಂಖ್ಯೆಯ ೨ನಯಾಪೈಸೆ ಬೆಲೆಯ ಸಣ್ಣ ದಿನಪತ್ರಿಕೆ ಪ್ರಕಟಿಸುವ ನಗರವೆನಿಸಿ ಹೊಸ ಇತಿಹಾಸ ಬರೆಯಿತು! ತತ್ಪರಿಣಾಮವಾಗಿ ಸಣ್ಣಪತ್ರಿಕೆಗಳ ತವರು: ಮೈಸೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ದಾಖಲೆ ನಿರ್ಮಿಸಿತು!
ಸುಧೀರ್ಘ ಸುದ್ದಿಯನ್ನು ಪುಟ್ಟಪುಟ್ಟ ಸುದ್ದಿಯನ್ನಾಗಿಸಿ ಕೈಗೆಟಕುವ ದರದಲ್ಲಿ ಪ್ರತಿಯೊಬ್ಬರಿಗೂ ತಿಳಿಸುವ ಸಣ್ಣ ಪತ್ರಿಕೆಗಳು ಮರಳುಗಾಡಿನ ಓಯಸಿಸ್‌ನಂತೆ ಕಂಡವು! ಬಹುಶಃ cheap & best ಪದ ಮೊಟ್ಟಮೊದಲು ಅನ್ವಯಿಸಿದ್ದು ಸಣ್ಣಪತ್ರಿಕೆಗೆ ಎನ್ನಬಹುದು? ಅಂಗಡಿ ಮನೆ ವರ್ಕ್‌ಶಾಪ್ ಸೆಲೂನ್ ಗ್ಯಾರೇಜ್ ಟಾಕೀಸ್ ಹೊಟೇಲ್ ಶಾಲಾ-ಕಾಲೇಜ್ ಸಂಘ-ಸಂಸ್ಥೆ ಹಾಗೂ ವಾರ್ಷಿಕ ಚಂದಾದಾರರಿಗೆ ರಿಯಾಯ್ತಿ ದರದಲ್ಲಿ ಪತ್ರಿಕೆಹಂಚುವ ಹುಡುಗರಿಂದ ಬಾಗಿಲಿಗೆ ತಲುಪಿಸುವ ವ್ಯವಸ್ಥೆಇತ್ತು!
ಅಂದು ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿ ವಿಷಾದನೀಯ ಸ್ಥಿತಿಯಲ್ಲಿತ್ತು ೧೫%ಮಾತ್ರ ವಿದ್ಯಾವಂತರಿದ್ದು ನಿತ್ಯ ಜೀವನದ ತುಟ್ಟಿ ನಿರ್ವಹಣೆ ಕಾಲ ಎಲ್ಲೆಡೆ ಮನೆಮಾಡಿತ್ತು! ಪತ್ರಿಕೆ ಓದುಗರ ಸಂಖ್ಯೆ ಕೇವಲ ೯%ಇದ್ದು ಶೇ.೮೮ರಷ್ಟು ಕಡು ಬಡತನದ ಪ್ರಜೆಗಳಿದ್ದು ಅವರ ಸರಾಸರಿ ವಾರ್ಷಿಕ ಆದಾಯ ಕೇವಲ೩೬/-ರೂಪಾಯಷ್ಟಿತ್ತು! ಹಾಗಾಗಿ[೧೦ಬಿಡಿಗಾಸು] ೫ಪೈಸೆ ಬೆಲೆಯ ದೊಡ್ಡಪತ್ರಿಕೆಗಳ ವಾಚಕರಿಗಿಂತ [೨ಕಾಸು]೧ಪೈಸೆಯ ಸಣ್ಣಪತ್ರಿಕೆಗಳ ಓದುಗರೆ ಹೆಚ್ಚಾಗಿದ್ದುದರಿಂದ ಸಹಜವಾಗಿ ಸಣ್ಣ ಪತ್ರಿಕೆಗಳು ರಾಷ್ಟ್ರೀಯ ಪತ್ರಿಕೆಗಳನ್ನು ಪಕ್ಕಕ್ಕೆ ತಳ್ಳುವಲ್ಲಿ ಯಶಸ್ವಿಯಾದವು!
ಆಹಾರ, ಹಣಕಾಸು, ಆರೋಗ್ಯ, ಓದುಗರ ಕ್ಷಾಮದ ದುರ್ಭಿಕ್ಷೆ ಕಾಲದ 1899 ರಲ್ಲಿ ಒಂದು ಕಾಸಿಗೆ ’ಸಾಧ್ವಿ’ ಪತ್ರಿಕೆಯನ್ನು ವೃದ್ಧ ಪಿತಾಮಹ ಎಂ.ವೆಂಕಟಕೃಷ್ಣಯ್ಯನವರು ರಾಜ್ಯ(ರಾಷ್ಟ್ರ)ದ ಪ್ರಪ್ರಥಮ ಸಣ್ಣಪತ್ರಿಕೆಯನ್ನಾಗಿ ಮೈಸೂರಲ್ಲಿ ಪ್ರಾರಂಭಿಸಿದರು! ಆಕಾಲಕ್ಕೆ ಪತ್ರಿಕಾ ಕೆಲಸಗಾರರು-ವರದಿಗಾರರು ದೊರಕದ ಕಾರಣ ಸುದ್ದಿ-ಸಂಪಾದಕೀಯ ಬರವಣಿಗೆ [ಎಡಿಟರ್] ಮೊದಲ್ಗೊಂಡು ಮುದ್ರಕ[ಪ್ರಿಂಟರ್] ಪ್ರಕಾಶಕ[ಪಬ್ಲಿಶರ್] ಮೊಳೆಜೋಡಕ[ಕಂಪಾಜ಼ಿಟರ್] ಕಾಯಕದ ಜತೆಗೆ ವಿತರಕ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ಆಗಿನ ಮಹಾರಾಜರು ದಿವಾನರು ಪ್ರಧಾನಮಂತ್ರಿ ರಾಷ್ಟ್ರಪತಿ ಆದಿಯಾಗಿ ಎಲ್ಲರಿಂದ ಬಿರುದು ಬಹುಮಾನ ಗಳಿಸಿದರು. ಪತ್ರಿಕೋದ್ಯಮಪ್ರಪಂಚಕ್ಕೆ ಮಾದರಿಪತ್ರಕರ್ತನಾಗಿ ಪ್ರಖ್ಯಾತರಾದ ಈ ಪುಣ್ಯಾತ್ಮನ ಬಗ್ಗೆ ಮಹಾನ್ ಗ್ರಂಥವನ್ನೆ ಬರೆಯಬಹುದು! ಸಮಾಜ ಸೇವೆಯಲ್ಲು ಅಪ್ರತಿಮರಾದ ಇವರು ಮೈಸೂರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅನಾಥಾಲಯದ ಸಂಸ್ಥಾಪಕರೂ ಹೌದು! ಸಣ್ಣಪತ್ರಿಕೆಗಳ ಪಿತಾಮಹ ತಾತಯ್ಯನವರ ಪ್ರತಿಮೆ ಈಗಲೂ ನಗರದ ಕೆ.ಆರ್.ಸರ್ಕಲ್ ಬಳಿ ಉದ್ಯಾನವನದಲ್ಲಿದೆ! ಸಂಸ್ಥಾಪಕ-ಸಂಪಾದಕರಾದ ಇವರ ನಂತರ 1940ರಿಂದ 1ಪೈಸೆಗೆ ಸಾಧ್ವಿ ಪತ್ರಿಕೆಯನ್ನು ಅವರ ಪರಮಶಿಷ್ಯರಾಗಿದ್ದ ಅಗರಂ ರಂಗಯ್ಯನವರು ಸುಮಾರು ೫೦ ವರ್ಷಕಾಲ ಯಶಸ್ವಿಯಾಗಿ ನಡೆಸಿದರು!
ಜಾಹಿರಾತುದಾರರು ಚಂದಾದಾರರು ಹಾಗೂ ವಿತರಕರು ೨ಪುಟದಲ್ಲಿ ೧೦೦ಸುದ್ದಿ ನೀಡುವ ಸಣ್ಣಪತ್ರಿಕೆಗಳ ಜೀವನಾಡಿ:-
ಪ್ರತಿದಿನ ಜಾಹಿರಾತು ನೀಡುವ ವರ್ಥನೆಯವರು, ತುಂಡು ಜಾಹೀರಾತುದಾರರು, ಹಬ್ಬಹರಿದಿನಗಳಂದು ಮಾತ್ರ ಪ್ರಚಾರ ಮಾಡಿಸಿಕೊಳ್ಳುವಂಥ ದೊಡ್ಡಗಿರಾಕಿಗಳು ಪತ್ರಿಕಾ ಬಳಗಕ್ಕೆ ಅನ್ನದಾತರು! ವಿಶೇಷಾಂಕ/ವಾರ್ಷಿಕಸಂಚಿಕೆ ಜಾಹೀರಾತು ಜತೆಗೆ ಮಾಸಿಕ/ವಾರ್ಷಿಕ ಚಂದಾದಾರರು ಪತ್ರಿಕೆ ಸಿಬ್ಬಂದಿಯನ್ನು ಸಲಹುವರು. ದಿನವೂ ’ನೋಲಾಸ್ ನೋಪ್ರಾಫ಼ಿಟ್’ ಫ಼ಲಿತಾಂಶದಿಂದ ರೋಸಿಹೋಗುವ ಸಣತ್ರಿಕಾವರ್ಗಕ್ಕೆ ವರ್ಷಕ್ಕೊಮ್ಮೆ ದೊರಕುವ ಸಂಕ್ರಾಂತಿ/ಯುಗಾದಿ/ದಸರ-ದೀಪಾವಳಿ/ಇಂಡಿಪೆಂಡೆನ್ಸ್‌ಡೆ/ರಿಪಬ್ಲಿಕ್‌ಡೇ ವಿಶೇಷಾಂಕದ ಜಾಹೀರಾತು-ಸರ್ಕ್ಯುಲೇಶನಿಂದ ಬರುವ ಬಂಪರ್ ಆದಾಯ ವಾರ್ಷಿಕ ಸಂತಸ ನೀಡುತ್ತಿತ್ತು! ಆಗಾಗ್ಗೆ/ಅಪರೂಪಕ್ಕೆ ಸಿಗುವ ಗಣ್ಯಾತಿಗಣ್ಯ/ವಿಐಪಿ/ಮಂತ್ರಿವರ್ಯರ ಸುದ್ದಿಗೋಷ್ಟಿ, ಪಾರ್ಟಿ ಮದುವೆ ಮುಂಜಿ ನಾಮಕರಣ ಗೃಹಪ್ರವೇಶ ಕಾರ್ಯಕ್ರಮದ ಬೊಂಬಾಟ್ ಭೋಜನದಿಂದ ತೃಪ್ತರಾದ ಪತ್ರಿಕಾ ಉದ್ಯಮಿ ಮುಖದಲ್ಲಿ ಮಂದಹಾಸಕಳೆ! ಇಷ್ಟಾದರೂ ’ಇದುವೆಜೀವ : ಇದುಜೀವನ’ ಮನಗಂಡು ಎಲ್ಲರೊಡನೆ ನಾಜೂಕಾಗಿ ಸ್ನೇಹ-ಸಹನೆಯಿಂದ ಇರಬೇಕಾದ್ದು ಸಣ್ಣಪತ್ರಿಕೆ ಸಂಪಾದಕ-ಮಾಲೀಕರ ’ಫ಼ಸ್ಟ್-ಫ಼ೋರ್‌ಮೋಸ್ಟ್ ಕ್ವಾಲಿಫ಼ಿಕೇಶನ್?!’
ಸಣ್ಣ ಪತ್ರಿಕಾ ಕ್ಷೇತ್ರದಲ್ಲಿ ದು(ಮ)ಡಿದವರೆಲ್ಲ ಯಾರಿಗೂ ನೋವಾಗದಂತೆ ಸಮಾಜದ ಓರೆಕೋರೆಗಳನ್ನು ತಿದ್ದಿತೀಡುತ್ತ; ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡು ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಿ ಬಾಳಿದವರು ಬೆರಳೆಣಿಕೆಯಷ್ಟು ಮಾತ್ರ! ಇಲ್ಲಿ ಸೋತು-ಗೆದ್ದ ಅಥವ ಗೆದ್ದು-ಸೋತ ಪತ್ರಕರ್ತರ/ಸಂಪಾದಕರ/ಮಾಲೀಕರ ಲುಕ್/ಕಾಸ್ಟ್ಯೂಂಸ್ ಯೂನಿಫ಼ಾರ್ಮ್ಆಗಿತ್ತು:
ಕಂಡಕೂಡಲೆ ಗುರುತಿಸುವಂಥ ಜುಬ್ಬ್ಬಪೈಜಾಮ/ಕಚ್ಚೆ, ಗಡ್ಡಮೀಸೆ, ಹೆಗಲಚೀಲ, ಪೆನ್-ನೋಟ್‌ಬುಕ್, ಹವಾಯಿ ಚಪ್ಪಲಿ. ಅಪರೂಪಕ್ಕೆ: ವೇಸ್ಟ್‌ಕೋಟ್, ಹ್ಯಾಟ್, ಛತ್ರಿ! ಅರಮನೆ-ಗುರುಮನೆ-ಕಿರುಮನೆ-ಸೆರೆಮನೆ ಎಲ್ಲಿಗಾದರೂ ನುಗ್ಗುವ ರಹದಾರಿ/ಪದ್ಧತಿಇತ್ತು?! ಯೂತ್ಸ್,ಬಿಗ್‌ಶಾಟ್ಸ್,ಬಿಸಿನೆಸ್‌ಮನ್,ಕ್ಯಾಪಿಟಲಿಸಂ,ಕಮ್ಯುನಿಸಂ,ಸೆಕ್ಯುಲರಿಸಂ,ಢೋಂಗಿ,ಡೌಲು ಡಂಭಾಚಾರದ ಪಾಲಿಟ್ರಿಕ್ಸ್ ಜತೆಗೆ ಮುತ್ಸದ್ದಿಗಳ ಅಂಕುಡೊಂಕು ಎತ್ತಿತೋರಿಸಿ ಸಿನಿಮ ನಾಟಕ ಕಲೆ ನೃತ್ಯ ಕ್ರೀಡೆ ಇತರೆ ಕ್ಷೇತ್ರದ ಟೀಕೆ-ಟಿಪ್ಪಣಿಗಳನ್ನು ಚಾಣಾಕ್ಷತೆಯಿಂದ ನಿಭಾಯಿಸುತ್ತ pen is mightier than sword ನಾಣ್ಣುಡಿಯನ್ನು ರುಜುವಾತು ಪಡಿಸಲು diplomatic ಆದವರೆ ಹೆಚ್ಚು?! ಈಕಾಲಕ್ಕೆ ಸಕಲಕಲಾ ವಲ್ಲಭನಾಗಿದ್ದರೆ ಮಾತ್ರ ತಾನೂ ಬದುಕಿ ತನ್ನ ಸಿಬ್ಬಂದಿಯನ್ನೂ ಬದುಕಿಸಬಹುದು! ಏಕೆಂದರೆ ಸಮುದ್ರವನ್ನು ಈಜುವುದಕ್ಕಿಂತ ಕಷ್ಟಸಾಧ್ಯ/ಜವಾಬ್ಧಾರಿ ಕಾಯಕವೆ ಸಣ್ಣ ಪತ್ರಿಕೋದ್ಯಮ, ಇಲ್ಲಿ ಗೆದ್ದವರು ಲೋಕವನ್ನೆ ಗೆದ್ದಂತೆ?!

ಮೈಸೂರು ಮೂಲದ ಸಣ್ಣ ಪತ್ರಿಕೆಗಳ ಸಂಕ್ಷಿಪ್ತ ಮಾಹಿತಿ:-
1. ಸಾಧ್ವಿ: 1940ರಿಂದ 2010ವರೆಗೆ ವೆಂಕಟಕೃಷ್ಣಯ್ಯ ಮತ್ತು ಅಗರಂ ರಂಗಯ್ಯ ನಂತರ ಮಹೇಶ್ವರನ್
2. ಮೈಸೂರುಪತ್ರಿಕೆ: 1942ರಿಂದ 2009ವರೆಗೆ ತಿರುಮಕೂಡ್ಲು ನಾರಾಯಣ, ಟಿ.ಎನ್.ವೆಂಕಟರಾಮು
ನಂತರ ಅವರ ಪುತ್ರಿ ಕುಮಾರಿ ವಿಜಯಾ
3. ವರ್ತಮಾನ್: 1947ರಿಂದ ಈವರೆಗೆ ವಿ.ಟಿ.ರಾಮನ್ ಮತ್ತು ಎಂ.ಎನ್.ತಿಮ್ಮಯ್ಯ, ನಂತರ ಎಂ.ಟಿ.ಜಯರಾಂ
4. ಅರುಣ: 1949ರಿಂದ 1989ವರೆಗೆ ಕೆ.ರಾಮಯ್ಯ
5. ವಿಜಯ: 1950ರಿಂದ 2001ವರೆಗೆ ಎ.[ಕುಂಟು]ರಾಮಣ್ಣ
6. ವಿಶ್ವದೂತ: 1956ರಿಂದ…..
7. ಮೈಸೂರುವೃತ್ತಾಂತ: 1959ರಿಂದ 1964ವರೆಗೆ ನಾಡಿಗ್ ಕೃಷ್ಣಮೂರ್ತಿ, ನಂತರ ಖಾದ್ರಿ ಶಾಮಣ್ಣ
8. ರಾಜ್ಯಧರ್ಮ: 1961ರಿಂದ ಈವರೆಗೆ ಎಂ.ವಿಠಲ್ ನಂತರ ಅವರ ಪುತ್ರ ಕಿರಣ್, ಪ್ರಸ್ತುತ ಮಹಿಮಹೇಶ್
9. ಅಶೋಕ: 1962ರಿಂದ 1986ವರೆಗೆ ರವೀಂದ್ರನಾಥ್
10. ಪೌರಧ್ವನಿ: 1975ರಿಂದ 1995ವರೆಗೆ ರೇಣುಕಾಲಿಂಗಯ್ಯ
11. ಮಹಾನಂದಿ: 1976ರಿಂದ 1987ವರೆಗೆ ಎಂ.ಬಸವಣ್ಣ
12. ಆಂದೋಲನ: 1977ರಿಂದ ಈವರೆಗೆ ಎಂ.ರಾಜಶೇಖರ ಕೋಠಿ, ನಂತರ ರವಿ ಕೋಠಿ
13. ಮೈಸೂರುಮಿತ್ರ: 1978ರಿಂದ ಈವರೆಗೆ ಕೆ.ಬಿ.ಗಣಪತಿ
14. ಸಂಕ್ರಾಂತಿ: 1979ರಿಂದ ಡಿ.ಜಯದೇವರಾಜೆಅರಸ್; ನಂತರ ಚಂದ್ರಶೇಖರಕುಕ್ಕಿಕಟ್ಟೆ
15. ಕನ್ನಡಪುತ್ರ: 1979ರಿಂದ 1995ವರೆಗೆ ನ.ನಾಗಲಿಂಗಸ್ವಾಮಿ
16. ಆರತಿ: 1980ರಿಂದ ಎಂ.ಎನ್.ನಾಗರಾಜರಾವ್
17. ಸತ್ಯವಾದಿ: 1981ರಿಂದ…..
18. ನವಧ್ವನಿ: 1982ರಿಂದ 1989ವರೆಗೆ ಎಸ್.ಪಟ್ಟಾಭಿರಾಮನ್
19. ಪ್ರಜಾನುಡಿ: 2000ದಿಂದ ಈತಹಲ್ವರೆಗೆÉ ಪಿ.ವಾಸು
20. ಕನ್ನಡಜನಮನ: 2014ರಿಂದ 2015ವರೆಗೆ ಕಿರಣ್ಕುಮಾರ್
21. ಸುಧರ್ಮ: 1977ರಿಂದ ದ.ಭಾರತದ ಮೊಟ್ಟಮೊದಲ ಸಂಸ್ಕೃತ ಸಣ್ಣ ದಿನಪತ್ರಿಕೆï
22. ಪ್ರಾಕೃತ್: 1979ರಿಂದ ದ.ಭಾರತದ ಮೊಟ್ಟಮೊದಲ ಹಿಂದಿ ಸಣ್ಣ ದಿನಪತ್ರಿಕೆ
23. ssಸಾಲಾರ್: ದ.ಭಾರತದ ಮೊಟ್ಟಮೊದಲ ಉರ್ದು ಸಣ್ಣ ದಿನಪತ್ರಿಕೆ
24. ಕೌಸರ್: ಉರ್ದು
25. Afthab: ಉರ್ದು
26. ಮಿನೊನ್ಯುಸ್ ಉರ್ದು
- ARATHY English daily:M.N.Nagaraja Rao
- INDEPENDENT English daily
- MYSORE TODAY English daily
- SAMACHAR English daily SATHYANARAYAN
- STAR OF MYSORE English daily: K.B.GANAPATHI

ಕುಮಾರಕವಿ ಬಿ.ಎನ್.ನಟರಾಜ್ ೯೦೩೬೯೭೬೪೭೧