ಚಾಮರಾಜನಗರ: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಚಾಮರಾಜನಗರದ ರಕ್ಷಿತ ಮಹಲ್ ಕಲ್ಯಾಣ ಮಂಟಪದಲ್ಲಿ ಒಂಟಿ ಎತ್ತಿನ ಗಾಡಿ ಹಾಗೂ ಲಾರಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಕಾಳಪ್ಪ (ನಂಜುಂಡ ಶೆಟ್ಟಿ) ರವರಿಗೆ ಎಪಿಎಂಸಿ ಸದಸ್ಯರಾದ ವೆಂಕಟ್ ರಾವ್ ರವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಕಾರ್ಮಿಕರ ಜೀವನವು ತುಂಬಾ ಬಡತನದಿಂದ ಕೂಡಿರುತ್ತದೆ, ಕಾರ್ಮಿಕರು ಒಂದು ಶಕ್ತಿ ಈ ಮೂಲಕ ಸಮಾಜ ಮತ್ತು ರಾಷ್ಟ್ರವನ್ನು ಅಭಿವೃದ್ಧಿ ಕಡೆ ಕೊಂಡೊಯ್ಯಕು. ಕಾರ್ಮಿಕರಿಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಎಪಿಎಂಸಿ ಸದಸ್ಯರಾದ ವೆಂಕಟರಾವ್ ತಿಳಿಸಿದರು.
ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಮಾತನಾಡಿ ನಾನು ಸುಮಾರು ಮೂವತ್ತು ವರ್ಷಗಳಿಂದಲೂ ಕೂಲಿಯನ್ನೇ ಮಾಡಿಕೊಂಡು ಬಂದಿದ್ದೇನೆ ಆದರೆ ಕಾರ್ಮಿಕರಿಲ್ಲದೆ ಜೀವನ ತುಂಬಾ ಕಷ್ಟ ಕಷ್ಟಕರವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ನಾಗೇಂದ್ರ ,ರಾಜಶೇಖರ್ ಮುರುಗ,ರಂಗಸ್ವಾಮಿ ,ಕೆ ನಾರಾಯಣ್ ,ಬಿ. ಸ್ವಾಮಿ ಮತ್ತಿತರರು ಇದ್ದಾರೆ.
