ಚಾಮರಾಜನಗರ: ನಗರದ ಸಿಮ್ಸ್ ನಲ್ಲಿ ಡಿ.ಗ್ರೂಪ್ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ಗಾಳಿಪುರ ಬಡಾವಣೆ ನಿವಾಸಿ ಮಹೇಶ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಕುಟುಂಬಕ್ಕೆ ಸೂಕ್ತಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜನಹಿತಾಶಕ್ತಿ ಹೋರಾಟ ವೇದಿಕೆ, ಜಿಲ್ಲಾ ಕನ್ನಡ ಯುವಸೇನೆ ಸೇರಿದಂತೆ ಕುಟುಂಬಸ್ಥರ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಡಳಿತಭವನದ ಆವರಣದಲ್ಲಿ ಜಮಾವಣೆಗೊಂಡ ಸಂಘಟನೆಗಳ ಮುಖಂಡರು ಸಿಮ್ಸ್ ಆಸ್ಪತ್ರೆ ಮುಖ್ಯಸ್ಥರ ವಿರುದ್ದ ಘೋಷಣೆ ಕೂಗಿಕೆಲಕಾಲ ಪ್ರತಿಭಟನೆ ನಡೆಸಿದರು.
ನಂತರ ಚುನಾವಣಾ ತಹಸೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜನಹಿತಾಶಕ್ತಿ ಹೋರಾಟಸಮಿತಿ ಅಧ್ಯಕ್ಷ ರಾಮಸಮುದ್ರಸುರೇಶ್ ಮಾvನಾಡಿ,
ನಗರದ ಗಾಳಿಪುರ ಬಡಾವಣೆ ನಿವಾಸಿ ದಲಿತಸಮುದಾಯದ ಮಹೇಶ್ ಎಂಬವರು ಕಳೆದ ೧೪ ವರ್ಷಗಳಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಮೂರುದಿನಗಳ ಹಿಂದೆ ಮಹೇಶ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಾಜಕೀಯ ಪಕ್ಷದ ಕಾರ್ಯಕರ್ತರಿಬ್ಬರು ವಿಡಿಯೋ ಚಿತ್ರಿಕರಣ ಮಾಡಿ, ಈತನಿಗೆ ಮಾನಸಿಕವಾಗಿ ನಿಂದಿಸುವ ಕೆಲಸ ಮಾಡಿದ್ದಾರೆ. ಇಲ್ಲಸಲ್ಲದ ಆರೋಪವೊರಿಸಿ ಕೆಲಸದಿಂದ ತೆಗೆದುಹಾಕುವ ಘಟನೆಯೂ ಜರುಗಿದೆ. ಇದರಿಂದ ಮಹೇಶ್ ಮನನೊಂದು ಆತ್ಮಹತ್ಯೆಗೆ ಶರಣರಾಗಿದ್ದಾರೆ. ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಡಳಿತ ಮೃತಮಹೇಶ್ ಕುಟುಂಬಕ್ಕೆ ಸೂಕ್ತಪರಿಹಾರ ನೀಡಬೇಕು, ಕುಟುಂಬದ ಸದಸ್ಯರಿಗೆ ಆಸ್ಪತ್ರೆಯಲ್ಲಿ ಉದ್ಯೋಗ ನೀಡಬೇಕು, ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿಸಂಸದ ಶಿವಣ್ಣ ಸೇರಿದಂತೆ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ತೆರಳಿ ಪ್ರತಿಭಟನಾನಿರತರಿಗೆ ಬೆಂಬಲನೀಡಿದರು.
ನಿಜಧ್ವನಿಸೇನಾ ಸಮಿತಿ ಅಧ್ಯಕ್ಷ ಸಿ.ಎನ್. ಗೋವಿಂದರಾಜು, ತಾಲೂಕು ಅಧ್ಯಕ್ಷ ಮರಿಯಾಲದಹುಂಡಿಕುಮಾರ್, ಕನ್ನಡ ಯುವಸೇನೆ ಅಧ್ಯಕ್ಷ ಸೋಮನಾಯಕ, ನಗರಸಭೆ ಸದಸ್ಯ ಎಂ.ಮಹೇಶ್, ಕನ್ನಡಪರ ಸಂಘಟನೆಯ ಚಾ.ರಂ.ಶ್ರೀನಿವಾಸಗೌಡ ನಾರಾಯಣಸ್ವಾಮಿ ಸಣ್ಣ ಮಾದಯ್ಯ ನಾಗೇಂದ್ರ ಜಗದೀಶ್ ಮಹೇಶ್ ಮೂರ್ತಿ ಶಂಕರ್ ದೂರೆಮುತ್ತಿಗೆ ಮೃತರ ಕುಟುಂಬವರ್ಗದವರು, ಸೇರಿದಂತೆ ಇತರರು ಇದ್ದರು ಹಾಜರಿದ್ದರು.
