ಮೈಸೂರು ಜನವರಿ 08- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಸವಿತಾ ಮಹರ್ಷಿ ಜಯಂತ್ಯೋತ್ಸವ ಸಮಿತಿಯ ಸಹಯೋಗದಲ್ಲಿ ಮಂಗಳವಾರ ನಗರದ ಕಲಾಮಂದಿರದ ಕಿರು ರಂಗಮAದಿರದಲ್ಲಿ ಶ್ರೀ ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಅವರು ಪುಷ್ಪಾರ್ಚನೆ ಮಾಡುವುದರ ಮೂಲಕ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.


ಬಳಿಕ ಮಾತನಾಡಿ ಅವರು, ಸವಿತ ಸಮಾಜದವರು ಇಂದಿಗೂ ವೃತ್ತಿ, ಸಂಗೀತ ಮತ್ತು ಆಯುರ್ವೆದದ ಮುಖಾಂತರ ಸರ್ವರಿಗೂ ಚಿಕಿತ್ಸೆ ನೀಡುವ ಪದ್ಧತಿಯನ್ನು ಉಳಿಸಿಕೊಂಡು ಬಂದಿದೆ. ಆದರೆ ಆಧುನಿಕತೆಯ ಪ್ರಭಾವದಿಂದ ಸವಿತಾ ಸಮಾಜದ ವೃತ್ತಿಗಳು ಕಣ್ಮರೆಯಾಗುತ್ತಿದ್ದು, ಆ ಸಮುದಾಯದ ಯುವಕರು ಸಹ ತಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ನಿರಾಸಕ್ತಿ ತೋರಿಸುತ್ತಿರುವುದು ವಿಷಾಧನೀಯ ಎಂದು ಹೇಳಿದರು.


ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷರಾದ ಎನ್.ಅರ್.ನಾಗೇಶ್ ಅವರು ಮಾತನಾಡಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಸವಿತ ಸಮಾಜದ ಬಂದುಗಳಿಗೆ ಸವಿತ ಕಲೋನಿಯನ್ನು ಮಾಡಲು ನಿವೇಶನಗಳನ್ನು ಕಡಿಮೆ ದರದಲ್ಲಿ ಒದಗಿಸುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.


ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕಮಲಾಬಾಯಿ, ಸವಿತ ಸಮಾಜದ ಟ್ರಸ್ಟ್ ಅಧ್ಯಕ್ಷರಾದ ಶಿವಣ್ಣ, ಸವಿತ ಸಮಾಜದ ಸಂಘದ ನಿರ್ದೇಶಕರಾದ ಲೋಕೆಶ್ ನಾಗಪ್ಪ, ಪ್ರೇಮ್‌ಕುಮಾರ್, ಸೌಮ್ಯರಾಣಿ ಮುರಳೀಧರ ಸೇರಿದಂತೆ ಇತರರು ಹಾಜರಿದ್ದರು.