ಮೈಸೂರು.17.ಲಾಕ್‍ಡೌನ್ ಸಂದರ್ಭದಲ್ಲಿ ಸಂಘದ ಕೆಲ ಸದಸ್ಯರು ಸಂಕಷ್ಟದಲ್ಲಿರುವುದರಿಂದ ಅವರಿಗೆ ಸ್ವಲ್ಪ ಮಟ್ಟಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಆಹಾರದ ದಿನಸಿ ‍ಕಿಟ್ಗಳನ್ನು ವಿತರಿಸಿದರು ಎಂದು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ. ಆರ್. ಸತ್ಯನಾರಾಯಣ್ ತಿಳಿಸಿದರು. ಹೊಯ್ಸಳ ಕರ್ನಾಟಕ ಸಂಘದಲ್ಲಿ ಸೋಮವಾರ ಶ್ರೀ ಶಂಕರ

ಚಾರ್ಯರ ಜಯಂತಿ ಅಂಗವಾಗಿ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೋವಿಡ್ ನಿಯಮಗಳನ್ನು ಪಾಲಿಸಿ  ಜನದಟ್ಟಣೆ ಸೇರದ ರೀತಿಯಲ್ಲಿ ನಿಗಾ ವಹಿಸಿ ಸಂಬಂಧಪಟ್ಟವರಿಗೆ  ಮಾಹಿತಿಯನ್ನು ನೀಡಿ ಈ ಮಹತ್ಕಾರ್ಯಕ್ಕೆ ಕೈ ಹಾಕಲಾಗಿದೆ.  ಸಂಘದ ಸದಸ್ಯರಿಂದಲೇ ದೇಣಿಗೆ ಪಡೆದು 100ಕ್ಕೂ ಹೆಚ್ಚು ಸದಸ್ಯರಿಗೆ ಕಿಟ್ ವಿತರಿಸಲಾಯಿತು. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ತಂಡ ಮಾಡಿ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭ ಮಾಜಿ ಅಧ್ಯಕ್ಷರಾದ ಎಂ. ಮಂಜುನಾಥ್, ಉಪಾಧ್ಯಕ್ಷರಾದ ಎಚ್. ಆರ್. ಸುಂದರೇಶನ್, ಕಾರ್ಯದರ್ಶಿ ಪಿ. ಶ್ರೀನಿಧಿ, ಸಹ ಕಾರ್ಯದರ್ಶಿ ಎಸ್. ರಂಗನಾಥ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎಚ್. ಎಸ್. ಶಂಕರನಾರಾಯಣ್, ಎನ್. ಚಂದ್ರಶೇಖರ್, ಎನ್. ಎಸ್. ಜಯಸಿಂಹ, ಶ್ರೀಮತಿ ಅನುಪಮ ಹಾಗೂ ಸಂಘದ ಸದಸ್ಯರುಗಳಾದ ಎಚ್. ಕೆ. ನಾಗೇಶ್, ವಿಜಯಕುಮಾರ್, ಸುಂದರಮೂರ್ತಿ, ಪ್ರಶಾಂತ್ ಮತ್ತಿತರಿದ್ದರು.

By admin