ಮೈಸೂರು, -ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋ ಜಿಸಿರುವ ೧೧ ದಿನಗಳ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಸಿಲ್ಕ್ ಇಂಡಿಯ-೨೦೨೫ ಮೇಳಕ್ಕೆ ರಾಜಲಕ್ಷ್ಮಿ,ಕೆ ಮೂರ್ತಿ ಚಾಲನೆ ನೀಡಿದರು. ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂ ವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ೬೦ಕ್ಕೂ ಹೆಚ್ಚಿನ ಮಳಿಗೆ ಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು

ದೇಶದಲ್ಲಿ ವಾಯುಗುಣ ಮತ್ತು ನಿಸರ್ಗಕ್ಕೆ ಅನುಗುಣವಾಗಿ ೪ ವಿವಿಧ ಪ್ರಭೇದದ ರೇಷ್ಮೆಗಳಿದ್ದು ಅವುಗಳಲ್ಲಿ ತಸ್ಸರ್, ಎರಿ, ಮುಲ್ಬಾರಿ ಮತ್ತು ಮುಗಾ ರೇಷ್ಮೆಯ ಪ್ರಮುಖವಾಗಿದ್ದು, ಇದರಲ್ಲಿ ಟಸ್ಸರ್ ಮತ್ತು ಮುಗಾ ರೇಷ್ಮೆಯು ಒಂದು ನೈಜವಾದ ಹಾಗೂ ಉಷ್ಣವಲಯದಲ್ಲಿ ಬೆಳೆಯುವ ವನ್ಯ ರೇಷ್ಮೆ ಹಾಗೂ ಸಾವಯವ (ಆರ್ಗಾನಿಕ್) ರೇಷ್ಮೆಯಾಗಿದೆ. ತಸ್ಸರ್ ಮತ್ತು ಮುಗಾ ರೇಷ್ಮೆ ಉತ್ಪಾದನೆಯಲ್ಲಿ ಅಸ್ಸಾಂ, ಬಿಹಾರ್ ಮತ್ತು ಛತ್ತಿಸ್ಗಡ್ ರಾಜ್ಯಗಳು ದೇಶದಲ್ಲಿ ಪ್ರಮುಖವಾಗಿದೆ.

‘ಅಭಿವೃದ್ಧಿ’ ಸಂಸ್ಥೆಯು ಭಾರತದಲ್ಲಿರುವ ಕುಶಲಕರ್ಮಿಗಳು ಮತ್ತು ನೇಕಾರರ ಶ್ರೋಯೋಭಿವೃದ್ಧಿಗಾಗಿ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ.

Leave a Reply