ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದ ಬಾಬು ಜಗಜೀವರಾಂ ಬಡಾವಣೆ ವತಿಯಿಂದ ಕಾರ್ತಿಕ ಮಾಸದ ಅಂಗವಾಗಿ ಸಿದ್ದಪ್ಪಾಜಿ ಕಂಡಾಯ ಮೆರವಣಿಗೆ ಮತ್ತು ವೇಣುಗೋಪಾಲ ಸ್ವಾಮಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೇವರ ವಿಗ್ರಹ ಮತ್ತು ಸಿದ್ದಪ್ಪಾಜಿ ಕಂಡಾಯಗಳನ್ನು ಗ್ರಾಮದ ಕೆರೆಗೆ ಕೊಂಡೊಯ್ದು ಶುಚಿಗೊಳಿಸಿ ವಿಭೂತಿ ಹಚ್ಚಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಯಿತು. ನಂತರ ಮುಖ್ಯ ರಸ್ತೆಯ ಮೂಲಕ ಛತ್ರಿ, ಚಾಮರಗಳ ಸಮೇತ ತಮಟೆ ಸದ್ದಿನೊಂದಿಗೆ ಮೆರವಣಿಗೆ ಮಾಡಲಾಯಿತು.
ಕಂಡಾಯವನ್ನು ಬಾಬು ಜಗಜೀವರಾಂ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸಿ ಕಾಯಿ ಹೊಡೆದು ಭಕ್ತಿ ಭಾವ ಸಮರ್ಪಿಸಿದರು. ಬಡಾವಣೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಯಿತು
ಬಾಬು ಜಗಜೀವರಾಂ ಬಡಾವಣೆ ಯಜಮಾನರಾದ ಪರಮೇಶ್ವರ, ಚಿಕ್ಕಯ್ಯ, ಗೋಪಾಲ, ಕೇಶವಮೂರ್ತಿ, ಬೆಳ್ಳಯ್ಯ, ರಾಚಯ್ಯ, ಸಿದ್ದರಾಜು, ಶಿವಣ್ಣ, ಕೂಸಯ್ಯ, ಕರಿಯಯ್ಯ, ಪುಟ್ಟಯ್ಯ, ಸಿದ್ದಪ್ಪಾಜಿ, ರಿಸಿ ನರ್ಸರಿಯ ಗಿರೀಶ್ ಬಾಬು, ಯುವಕರಾದ ಮಣಿ ಸೇರಿದಂತೆ ಬೀದಿಯ ಯುವಕರು, ಮಹಿಳೆಯರು ಭಾಗವಹಿಸಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin