ಮೈಸೂರು ವಾಣಿವಿಲಾಸ ರಸ್ತೆಯ ಬದಿಯಲ್ಲಿರುವ ಫ್ಲಡ್ ಲೈಟ್ ದೀಪದ ವ್ಯವಸ್ಥೆ ಸರಿಗಾಗಿ ಅಳವಡಿಸದೆ ಗಾಳಿಯಲ್ಲಿ ತೇಲಾಡುತ್ತ ಜೋಕಾಲಿ ರೀತಿಯಲ್ಲಿ ತೂಗುತಿದ್ದು ಯಾವ ಸಮಯದಲ್ಲಾದರು ಬೀಳಬಹುದು. ನಗರಪಾಲಿಕೆ ಸದಸ್ಯರು ಇದಕ್ಕೆ ಸಂಬ0ಧಪಟ್ಟ ಚೆಸ್ಕಾಂ ಸಿಬ್ಬಂದಿಯವರು ಏನು ಮಾಡುತ್ತಿದ್ದಾರೆ ಅನ್ನುವುದೆ ಪ್ರಶ್ನೆಯಾಗಿದೆ.ಇಲ್ಲಿ ಬಸ್ ನಿಲ್ದಾಣವಿದ್ದು ಸಾರ್ವಜನಿಕರು ಓಡಾಡುತ್ತಿದ್ದು ಅವರ ಮೇಲೆ ಏನಾದರೂ ಬಿದ್ದರೆ ಇನ್ನೋಬ್ಬರ ಮನೆಯ ದೀಪದ ಬೆಳಕಹಾರಿಹೋಗುವುದು ಖಂಡಿತ.
ಜನರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಫ್ಲಡ್ ಲೈಟ್ ದೀಪ ಬೀಳುವ ಸ್ಥಿತಿ ಇದ್ದರು ಸಂಬ0ಧ ಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಕರೋನ ಸಮಯದಲ್ಲಿ ಯಾವ ಸಾರ್ವಜನಿಕರು ಮನೆಯಿಂದ ಬಾರದ ಕಾರಣ ಮುಂದಿನ ದಿನಗಳಲ್ಲಿ ಸರ್ಕಲ್‌ನಲ್ಲಿ ಸಾವಿರಾರು ವಾಹನ ಸವಾರರು ಸಾಗುತ್ತ ವಿಧ್ಯಾರ್ಥಿಗಳು ಸಾರ್ವಜನಿಕರು ಸಂಚರಿಸುವ ರಸ್ತೆಯಾಗಿದ್ದು ಸಾವಿನ ಆಹ್ವಾನ ಕೊಡವ ಸ್ಥಿತಿಯಲ್ಲಿರುವ ವಿದ್ಯುತ್ ದೀಪ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಾ ಸಂಭವಿಸಲಿದೆ.
ಇದಕ್ಕೆ ಸಂಬ0ಧಪಟ್ಟ ಆಧಿಕಾರಿಗಳು ಸರಿಪಡಸಿಲಿ ಎಂದು ಸುವರ್ಣ ಬೆಳಕು ಫೌಂಡೇಷನ್ ಮಹೇಶ್ ನಾಯಕ್ ಅಧ್ಯಕ್ಷರು ಆಗ್ರಹಿಸಿದ್ದಾರೆ.