- ಶ್ರೀ ವಿಷ್ಣು ಸಹಸ್ರನಾಮ ಸೇವಾ ಸಮಿತಿ ಮತ್ತು ಪ್ರಚೋದಯಾತ್ ಸಂಸ್ಥೆ ವತಿಯಿಂದ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಶ್ರೇಷ್ಠ ಸಾಧಕ ರತ್ನ ಪ್ರಶಸ್ತಿ ಪ್ರದಾನವನ್ನು ವಿದ್ಯಾರಣ್ಯಪುರಂನಲ್ಲಿರುವ ಅವನಿ ಶಂಕರ ಮಠದಲ್ಲಿ ಆಯೋಜಿಸಲಾಯಿತು.
- ಶ್ರೇಷ್ಠ ಸಾಧಕ ರತ್ನ ಪ್ರಶಸ್ತಿಗೆ ಭಾಜನರಾದ
- ಶ್ರೀ ಸಾಂಬಮೂರ್ತಿ (ಗಾಯನ ಕ್ಷೇತ್ರ ) ಡಾ॥ವಿ ಶ್ರೀಕಂಠಸ್ವಾಮಿ ದೀಕ್ಷಿತ್ (ಧಾರ್ಮಿಕ ಕ್ಷೇತ್ರ )
- ಶ್ರೀಮತಿ ವಿಜಯಲಕ್ಷ್ಮಿ (ಸಾಹಿತ್ಯ ಕ್ಷೇತ್ರ )ಡಾ॥ ಪಿ ಶಾಂತರಾಜ ಅರಸ್ (ಸಮಾಜ ಸೇವಾ ಕ್ಷೇತ್ರ )
- ಜಿ ಎಸ್ ಸುನೀಲ್ (ವೈದ್ಯಕೀಯ ಕ್ಷೇತ್ರ ) ಮುರುಳಿ (ಉದ್ಯಮ ಕ್ಷೇತ್ರ )
- ಅಜಯ್ ಶಾಸ್ತ್ರಿ (ಸಾಮಾಜಿಕ ಕ್ಷೇತ್ರ ) ಇವರಿಗೆ ಶ್ರೇಷ್ಠ ಸಾಧಕ ರತ್ನ ಪ್ರಶಸ್ತಿ ನೀಡಲಾಯಿತು
ಜಿ.ಎಸ್.ಎಸ್ ಯೋಗ ಸಮಿತಿ ಸಂಸ್ಥಾಪಕರಾದ ಶ್ರೀಹರಿ ರವರು ನಂತರ ಮಾತನಾಡಿ
ಮೈಸೂರಿನ ರಾಮಮಂದಿರ ದೇವಸ್ಥಾನಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಧಾರ್ಮಿಕ ಶಕ್ತಿಯೊಂದಿಗೆ ಆಧ್ಯಾತ್ಮಿಕ ಸಾಮಾಜಿಕ ಸಂಘಟನೆ ಬಲಪಡಿಸಬಹುದು, ವಿಷ್ಣು ಸಹಸ್ರನಾಮ ಪಾರಾಯಣ ವಿದ್ಯಾರ್ಥಿಗಳಿಗೆ ಅಧ್ಯಯನ ಜ್ಞಾಪಕ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಿರಿಯರಲ್ಲಿ ಆರೋಗ್ಯ ವೃದ್ಧಿಸುತ್ತದೆ, ಆದಿಜಗದ್ಗುರು ಶಂಕರಾಚಾರ್ಯರು ಹೇಳಿರುವಂತೆ ಸಾಮೂಹಿಕ ಪಾರಯಣದಿಂದ ಕೇಳುವರಲ್ಲಿ
ಶ್ರವಣ ಶಕ್ತಿ, ಜಪಿಸುವರಲ್ಲಿ ಪಠಣದಿಂದ ನಿರೋಧಕ ಶಕ್ತಿ, ಮನನದಿಂದ ಜೀವನದ ಸಾತ್ವಿಕ ಸನ್ಮಾರ್ಗ, ಅಧ್ಯಯನ ಅಭ್ಯಾಸದಿಂದ ಯುವಪೀಳಿಗೆಗೆ ಸನಾತನದ ಅರಿವು ಮತ್ತು ಮನೆಗಳಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದರು
ನಂತರ ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ ವಿಷ್ಣುಸಹಸ್ರನಾಮ ಪಾರಾಯಣಕ್ಕೆ ಸಹಸ್ರಮಾನಗಳ ಇತಿಹಾಸವಿದೆ, ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ದೇವಸ್ಥಾನ ರಾಮಮಂದಿರಗಳಲ್ಲಿ ವಿಷ್ಣುಸಹಸ್ರನಾಮ ಆಯೋಜಿಸುವ ಯೋಜನೆಗಳನ್ನ ದೇವಸ್ಥಾನಗಳಲ್ಲಿ ಜಾರಿಗೆ ತರಬೇಕು ಎಂದರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಎಸ್ ಎಸ್ ಯೋಗ ರಿಸರ್ಚ್ ಫೌಂಡೇಶನ್ ಸಂಸ್ಥಾಪಕರಾದ ಶ್ರೀಹರಿ ಗುರೂಜಿ ,ಅಧ್ಯಕ್ಷತೆ ವಹಿಸಿದ ಸಾಂಸ್ಕೃತಿ ಪೋಷಕರು ಕೆ ರಘುರಾಂ ವಾಜಪೇಯಿ ,ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿಗಳಾದ ಕೆ ಲೀಲಾ ಪ್ರಕಾಶ್ ,ಧಾರ್ಮಿಕ ಚಿಂತಕರಾದ ಕೆ ಪ್ರಹ್ಲಾದ್ ರಾವ್ ,ಪ್ರಚೋದಯಾತ್ ಅಧ್ಯಕ್ಷರಾದ ಜಿ ರಮೇಶ್ , ಎನ್ ಅನಂತ್ ದೀಕ್ಷಿತ್ ,ಎಂವಿ ನಾಗೇಂದ್ರಬಾಬು ,ವಿಕ್ರಂ ಅಯ್ಯಂಗಾರ್ ,ಹಾಗೂ ಇನ್ನಿತರರು ಹಾಜರಿದ್ದರು
Attachments area