ಡಾ.ಪಿ ಕೃಷ್ಣಯ್ಯ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ, ಇವರ ನೇತೃತ್ವದಲ್ಲಿ ಜುಲೈ 31 ಶನಿವಾರದಂದು ಮುಂಜಾನೆಯ ಸಮಯದಲ್ಲಿ ಶ್ರಮಾದಾನ ಕೆಲಸವನ್ನು ಮೈಸೂರು ವಿ.ವಿ ಗೆ ಸಂಬಂಧಪಟ್ಟ ಮೈದಾನಗಳಲ್ಲಿ ಹಮ್ಮಿಕೊಳ್ಳಲಾಯಿತು.

ಈ ಶುಚಿಕಾರ್ಯಕ್ಕೆ ಎಲ್ಲಾ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರು ದೈಹಿಕ ಶಿಕ್ಷಣದ ವಿಭಾಗಕ್ಕೆ ಒಳಪಟ್ಟ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಯ ಮುಖ್ಯ ತರಬೇತುದಾರರು ಹಾಗೂ ಕ್ರೀಡಾ ವಿದ್ಯಾರ್ಥಿಗಳು, ಕಲಿಕಾಗಾರರು, ಶಿಬಿರಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಮೈದಾನಗಳಲ್ಲಿ ಮತ್ತು ಸುತ್ತಲ ಆವರಣದಲ್ಲಿ ಇದ್ದಂತಹ ಪ್ಲ್ಯಾಸ್ಟಿಕ್ ತೆಗೆದು ಮತ್ತು ಪಾರ್ಥೇನಿಯಂ ಗಿಡಗಳನ್ನು ಕಿತ್ತು ಪ್ಲಾಸ್ಟಿಕ್ ಮುಕ್ತ ಮೈದಾನವನ್ನಾಗಿ ಮಾಡಿ ಶುಚಿಗೊಳಿಸಿದರು.

ಈ ಸ್ವಚ್ಛತಾ ಶ್ರಮಾದಾನವನ್ನು ಕುರಿತು ಮಾತನಾಡಿದ ಡಾ.ಪಿ ಕೃಷ್ಣಯ್ಯ ಅವರು ಹೇಳಿದ್ದು ಹೀಗೆ. ಕ್ರೀಡಾಪಟುಗಳು ಆರೋಗ್ಯದಾಯಕವಾಗಿ ಕ್ರೀಡಾ ಅಭ್ಯಾಸ ಮಾಡಲು ಉಪಯೋಗವಾಯಿತು. ಈ ಕರೋನಾ ಸಂಧರ್ಭದಲ್ಲಿ ನಮ್ಮ ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಡುವುದು ಅಗತ್ಯ. ಆ ನಿಟ್ಟಿನಲ್ಲಿ ನಮ್ಮ ಮೈಸೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಎಲ್ಲಾ ಕ್ರೀಡೆಯ ತರಬೇತುದಾರರು ಕ್ರೀಡಾಪಟುಗಳು ಸ್ವತಃ ಉತ್ಸುಕರಾಗಿ ಶ್ರಮಾದಾನ ಮಾಡಿದ್ದಾರೆ ಜೊತೆಗೆ ಆರೋಗ್ಯಯುತ ಕ್ರೀಡೆಯನ್ನು ಮುಂದುವರೆಸಲು ಶ್ರಮವಹಿಸಿದ್ದಾರೆ. ಈ ವಿಷಯ ನಮ್ಮ ಮೌಲ್ಯಯುತ ಬದುಕಿಗೆ ಕ್ರೀಡಾರ್ಥಿಗಳ ಶಿಸ್ತಿಗೆ ಅಗತ್ಯ ಎಂದರು.ಮತ್ತು ಶ್ರಮಾದಾನಕ್ಕೆ ಒಳಪಟ್ಟ ಎಲ್ಲರಿಗೂ ವಂದನೆ ಸಲ್ಲಿಸಿದರು.

By admin