ಚಾಮರಾಜನಗರ: ಈಚೆಗೆ ನಿಧನರಾದ ತಾಲೂಕು ಉಪ್ಪಾರಸಂಘದ ಉಪಾಧ್ಯಕ್ಷ ನೀಲಶೇಖರ್ ಅವರ ಗೌರವಾರ್ಥ ಸಂಘದ ವತಿಯಿಂದ ನಗರದಪ್ರವಾಸಿಮಂದಿರದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನೀಲಶೇಖರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ತಾಲೂಕು ಅಧ್ಯಕ್ಷ ಬೂದಿತಿಟ್ಟು ಪಿ.ಲಿಂಗರಾಜು ಮಾತನಾಡಿ, ನೀಲಶೇಖರ್ ಅವರು ಸಂಘದ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ಸಂಘದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಮಗೆ ಹಲವಾರು ಸಲಹೆಸೂಚನೆ ನೀಡುವ ಮೂಲಕ ಮಾರ್ಗದರ್ಶಕರಾಗಿದ್ದರು, ಸಂಘದ ಚಟುವಟಿಕೆಗೆ ಸೀಮಿತವಾಗದ ಅವರು, ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಛಾಪು ಮೂಡಿಸಿದ್ದರು. ಇವರ ಅಕಾಲಿಕ ನಿಧನ ಸಂಘಕ್ಕೆ ತುಂಬಲಾರದ ನಷ್ಟ ಎಂದರು.
ಪ್ರಧಾನ ಕಾರ್ಯದರ್ಶಿ ಎನ್.ಮಹದೇವಸ್ವಾಮಿ, ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು, ಕಾರ್ಯಾಧ್ಯಕ್ಷ ಕೆ.ಕೆ.ಹುಂಡಿನಾಗರಾಜು, ಸಿ.ಬಿ.ನಾಗರಾಜು,ಬಂಡಿಗೆರೆಮಹದೇವಶೆಟ್ಟಿ, ಚಾ.ಹ.ಶಿವರಾಜು, ವಕೀಲಲೋಕೇಶ್, ಕೆಂಪನಪುರಮಹದೇವಶೆಟ್ಟಿ, ಗಿರೀಶ್, ಮಹೇಶ್,ರಾಜೇಂದ್ರ, ಕೊರಿಯರ್ ಮಹದೇವಸ್ವಾಮಿ ಹಾಜರಿದ್ದರು.
