ಮೈಸೂರು: ಪರಮಪೂಜ್ಯ ಜಗದ್ಗುರು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳ ಮಾತೃಶ್ರೀ ಶಿವ ನಾಗಮ್ಮ ಅವರು ಲಿಂಗೈಕ್ಯರಾಗಿದ್ದು, ಅವರಿಗೆ ರಾಮಾನುಜರಸ್ತೆಯಲ್ಲಿನ ಜಯಚಾಮರಾಜೇಂದ್ರ ಆಟೋ ನಿಲ್ದಾಣದಲ್ಲಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಟೋ ಸಂಘದ ಅಧ್ಯಕ್ಷರಾದ ಅಟೋ ಮಹೇಶ್, ನಗರಪಾಲಿಕೆ ಸದಸ್ಯರಾದ ಶೋಭಾ ಸುನೀಲ್, ಮಾಜಿ ನಗರಪಾಲಿಕೆ ಸದಸ್ಯರಾದ ಪಾರ್ಥ ಸಾರಥಿ, ಕನ್ನಡ ಕ್ರಾಂತಿದಳ ಅಧ್ಯಕ್ಷರಾದ ತೇಜಸ್ವಿ ಕುಮಾರ್ ಪಾಟೀಲ್, ಆಟೋ ನರೇಂದ್ರ, ಕೆ.ಬಿ.ಸ್ವಾಮಿ, ಮುಖಂಡರಾದ ರಮೇಶ್, ಆಟೋ ನಂಜುಡ ಸ್ವಾಮಿ, ಆಟೋ ಶ್ರೀಧರ, ಎಳನೀರು ರಘು, ರವಿ, ಚಂದನ್ ಇದ್ದರು.