ಮೈಸೂರು, ಫೆಬ್ರವರಿ 05 ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ ಪ್ರಧಾನ ಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ಮೈಸೂರು ಜಿಲ್ಲೆಗೆ ಬಾಳೆ ಆಯ್ಕೆ ಮಾಡಲಾಗಿದ್ದು, ಬಾಳೆ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಕಿರುಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣಕ್ಕೆ ನೀಡುತ್ತಿದ್ದ ಸಾಲ ಸಂಪರ್ಕಿತ ಸಹಾಯಧನವನ್ನು 35% ರಿಂದ 50% ಹೆಚ್ಚಿಸಲಾಗಿದೆ.


  ಕಿರು ಆಹಾರ  ಸಂಸ್ಕರಣಾ ಘಟಕಗಳ ಸ್ಥಾಪನೆಗಾಗಿ http://pmfme.mofpi.gov.in/ ಪೋರ್ಟಲ್‍ನಲಿ ್ಲಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲೆಯ ಎಲ್ಲಾ ವೈಯಕ್ತಿಕ ಕಿರುಆಹಾರ ಸಂಸ್ಕರಣಾ ಘಟಕಗಳು, ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ಸಂಘಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ವಿ.ರಮೇಶ್ ಮೊಬೈಲ್ ಸಂಖ್ಯೆ: 9611782126, ಕೆ.ಜಗದೀಶ್‍ಗಚ್ಚಿನಮಠ್ ಮೊಬೈಲ್ ಸಂಖ್ಯೆ:9449012580, ಡಾ.ಎಚ್.ಎಸ್. ವಿಭಾಕರ್ ಮೊಬೈಲ್ ಸಂಖ್ಯೆ:7406328938, ವೀಣಾ ಭಟ್ ಮೊಬೈಲ್ ಸಂಖ್ಯೆ:9632203794 ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.