ಗಣರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಧ್ವಜಾರೋಹಣ ಮಾಡಿ, ರಾಷ್ಟ್ರ ಗೀತೆ ಹಾಡಿ, ದೇಶಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿಕೊಳ್ಳಲಾಗಿದೆ. ನಟ ಶಿವರಾಜಕುಮಾರ್ ಅವರು ಮೈಸೂರಿನ ಶಕ್ತಿಧಾಮದಲ್ಲಿ ೭೩ನೇ ವರ್ಷದ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಪತ್ನಿ ಗೀತಾ ಶಿವರಾಜ್ಕುಮಾರ್ ಜೊತೆ ಸೇರಿ ಅವರು ಧ್ವಜಾರೋಹಣ

ಮಾಡಿದ್ದಾರೆ. ಬಳಿಕ ಆಶ್ರಮದ ಮಕ್ಕಳಿಗೆ ಸಿಹಿ ಹಂಚಿ, ಅವರ ಜೊತೆ ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ ಶಿವಣ್ಣ. ಅನೇಕ ಸಿನಿಮಾಗಳಲ್ಲಿ ಹ್ಯಾಟ್ರಿಕ್ ಹೀರೋ ತುಂಬಾ ಬ್ಯುಸಿ ಇದ್ದಾರೆ. ಆದರೆ ಇಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುವು ಮಾಡಿಕೊಂಡು ಮಕ್ಕಳಿಗಾಗಿ ದಿನವನ್ನು ಮೀಸಲಿಟ್ಟಿರುತ್ತಾರೆ. ಮಕ್ಕಳ ಜೊತೆ ಶಿವಣ್ಣ ಜಾಲಿ ರೈಡ್ ಕೂಡ ಮಾಡಿದರು. ಅವರ ಜೊತೆ ಬೆರೆತ ಶಕ್ತಿಧಾಮದ ಮಕ್ಕಳು ಖುಷಿಖುಷಿಯಾಗಿ ಕಾಲ ಕಳೆದು ಸಂಭ್ರಮಿಸಿದರು.