ಬೇರು ಫೌಂಡೇಶನ್ ವತಿಯಿಂದ ಶಿವರಾಂ ಕಾರಂತರ ನೆನಪಿನೋತ್ಸವ ಕಾರ್ಯಕ್ರಮ ವನ್ನು ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜಿನ ಸಮೀಪದಲ್ಲಿರುವ ಉದ್ಯಾನವನದಲ್ಲಿ ನಲ್ಲಿ ಹಲವು ಜಾತಿಯ ಸಸಿಗಳನ್ನು ನೆಡುವ ಮುಖಾಂತರ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಡಾ॥ ವೈ ಡಿ ರಾಜಣ್ಣ ಅವರು ಮಾತನಾಡಿ ಡಾಕ್ಟರ್ ಶಿವರಾಮ ಕಾರಂತರು ವಿದ್ಯಾಭ್ಯಾಸ ಮುಗಿಸದೆ ನೂರಾರು ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಸರು ಮಾಡಿದಂತಹ ಮಹಾನ್ ವ್ಯಕ್ತಿ ಶಿವರಾಮ ಕಾರಂತರು ಇವರು ರಾಜ್ಯಾದ್ಯಂತ ಸಂಚರಿಸಿ ಸಾಹಿತ್ಯಗಳ ಬಗ್ಗೆ ನಾಟಕದ ಬಗ್ಗೆ ಯಕ್ಷಗಾನದ ಬಗ್ಗೆ ತಿಳಿಸಿ ಕೊಡುವಂತಹ ಕೆಲಸವನ್ನು ಮಾಡಿದರು 400 ಕ್ಕೂ ಹೆಚ್ಚು ಪುಸ್ತಕವನ್ನು ಪ್ರಕಟಣೆ ಮಾಡಿದ ಹೆಗ್ಗಳಿಕೆ ಶಿವರಾಮ ಕಾರಂತರಿಗೆ ಸಲ್ಲುತ್ತದೆ ಅಲ್ಲದೆ ಹಲವಾರು ಕೃತಿ ಕಾದಂಬರಿಗಳನ್ನು ರಚಿಸಿದ್ದಾರೆ ಅವರ ಕಾದಂಬರಿ ಆಧಾರಿತ ಚಲನಚಿತ್ರಗಳು ಕೂಡ ಮೂಡಿಬಂದಿದೆ 1930 ರಲ್ಲಿ ಹಿಂದಿಯಲ್ಲಿ ಮೂಡಿಬಂದಿರುವ ಮೂಕಿ ಚಿತ್ರವನ್ನು ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ನಡೆಸಿದಂಥ ಹೆಗ್ಗಳಿಕೆ ಶಿವರಾಂ ಕಾರಂತರಿಗೆ ಸಲ್ಲುತ್ತದೆ ಈಗಿನ ಕಾಲದ ವಿದ್ಯಾರ್ಥಿಗಳು ಶಿವರಾಮ ಕಾರಂತರವರು ಕಾವ್ಯ ಪುಸ್ತಕವನ್ನ ಹೆಚ್ಚೆಚ್ಚಾಗಿ ಓದಬೇಕು ಶಿವರಾಮ ಕಾರಂತರು ಮೆಂಬರ್ ಆಫ್ ಪಾರ್ಲಿಮೆಂಟ್ ಗೆ ಜನಗಳ ಆಶಾಭಾವನೆ ಹೇಗಿರುತ್ತದೆಂದು ಅರಿತುಕೊಳ್ಳಲು ಸ್ಪರ್ಧಿಸಿದ್ದರು. ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲುವಂಥ ವ್ಯಕ್ತಿತ್ವವುಳ್ಳ ಅಂಥ ಮಹಾನ್ ವ್ಯಕ್ತಿ ಶಿವರಾಮ ಕಾರಂತರು ಯಾಕೆಂದರೆ ಇವರು ಕಾಲೇಜು ಶಿಕ್ಷಣವನ್ನೇ ಪಡೆಯದೆ ಹಲವಾರು ಕೃತಿ ಕಾದಂಬರಿಗಳನ್ನು ರಚಿಸಿ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಗೌರವ ಡಾಕ್ಟರೇಟ್ ಪಡೆದ ವ್ಯಕ್ತಿ ಶಿವರಾಮ ಕಾರಂತರು ಮತ್ತೊಮ್ಮೆ ಶಿವರಾಂ ಕಾರಂತರಿಗೆ ನುಡಿ ನಮನಗಳನ್ನು ಸಲ್ಲಿಸುತ್ತಾ ಎಲ್ಲರಿಗೂ ಶಿವರಾಂ ಕಾರಂತರವರ ಆದರ್ಶವನ್ನು ಪಾಲಿಸುವಂತಾಗಲಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಬೇರು ಫೌಂಡೇಶನ್ ಅಧ್ಯಕ್ಷ ಮಧು ಎನ್, ಸದಸ್ಯರಾದ ಸೋಮಶೇಖರ್, ಬಿಜೆಪಿ ಮುಖಂಡರಾದ ಶಿವಪ್ರಕಾಶ್, ಸುಚಿಂದ್ರ, ಬೇರು ಫೌಂಡೇಶನ್ ಸದಸ್ಯರು ಗಳಾದ ಚೇತನ್, ಸೂರಜ್, ಮೋಹನ್, ತೇಜಸ್, ಚೇತನ್ ಡಿ.ಕೆ, ಚಂದನ್, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.