ಮೈಸೂರಿನ ಕಾಳಿದಾಸ ರಸ್ತೆ (ಕೆ.ಡಿ. ರೋಡ್)ಯಲ್ಲಿ ನೂತನವಾಗಿ ಆರಂಭಗೊಂಡಿರುವ ಕಲ್ಯಾಣ್ ಜುವೆಲರ್ಸ್ ೨ನೇ ಮಳಿಗೆಗೆ ಖ್ಯಾತ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಕುಂದ್ರಾ ಚಾಲನೆ ನೀಡಿದರು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳತ್ತ ಕೈಬೀಸಿಕಿರುನಗೆ ಬೀರುತ್ತಾ ಆಗಮಿಸಿದ ಅವರು, ಟೇಪ್ ಕತ್ತರಿಸಿ,ಮೂಲಕ ನೂತನ ಶೋರೂಂಗೆ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ಶೋರೂಂ ಎದುರಿದ್ದ ವೇದಿಕೆಗೆ ಆಗಮಿಸಿದ ಅವರು, ನಾನು ಕರ್ನಾಟಕದ ಹುಡಗಿ ಕನ್ನಡದವಳು ಎಂದು ಮಾತು ಆರಂಭಿಸಿದರಲ್ಲದೆ ಮೈಸೂರಿ ನಲ್ಲಿ ಕಲ್ಯಾಣ್ ಜುವೆಲರ್ಸ್ ೨ನೇ ಹೊಸ ಶೋರೂಂ ಆರಂಭಿಸಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನನಗೆ ಮೈಸೂರೆಂದರೆ ಅಚ್ಚುಮೆಚ್ಚು. ಮೈಸೂರು ಪಾಕ್ ನನಗೆ ಇಷ್ಟ. ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ನಟಿಸುವುದಾಗಿಯೂ ತಿಳಿಸಿದರು. ಶಿಲ್ಪಾ ಶೆಟ್ಟಿ ನಟಿಸುತ್ತಿರುವ ಕನ್ನಡದ ಕೆ.ಡಿ ಚಿತ್ರದಲ್ಲಿ ಅಭಿನಯಿಸಿದ್ದೇನೆ.ಎಂದರು.
ಈ ವೇಳೆ ಕಲ್ಯಾಣ್ ಜುವೆಲರ್ಸ್ ಕಾರ್ಯನಿರ್ವಾಹಕ ನಿರ್ದೆಶಕ ರಮೇಶ್ ಕಲ್ಯಾಣರಾಮನ್ ಮತ್ತಿತರರಿದ್ದರು. ಶೇ.೫೦ ರಿಯಾಯ್ತಿ!: ಕಾಳಿದಾಸ ರಸ್ತೆಯಲ್ಲಿ ನೂತನವಾಗಿ ಆರಂಭವಾಗಿ ರುವ ಕಲ್ಯಾಣ್ ಜುವೆಲರ್ಸ್‌ನಲ್ಲಿ ಪ್ರತೀ ಚಿನ್ನಾಭರಣದ ಮೇಕಿಂಗ್ ಚಾರ್ಜ್

ಮೇಲೆ ಫ್ಲಾಟ್ ಶೇ.೫೦ ರಷ್ಟು ರಿಯಾಯ್ತಿ ನೀಡಲಾಗಿದೆ. ಕಲ್ಯಾಣ್ ಸ್ಪೆಷಲ್ ಗೋಲ್ಡ್ ರೇಟ್ ನೊಂದಿಗೆ ಅಪರೂಪದ ಡಿಸೈನ್ ಗಳು ಲಭ್ಯವಿವೆ. ಮುಹೂರ್ತ್ (ವೆಡ್ಡಿಂಗ್ ಜುವೆಲರಿ ಲೈನ್), ಮುದ್ರಾ(ಕೈಯಿಂದ ಮಾಡಿದ ಆಂಟಿಕ್ ಆಭರಣ), ನಿಮಾಹ್
(ಟೆಂಪಲ್ ಜುವೆಲರಿ), ಗ್ಲೋ (ಡ್ಯಾನ್ಸಿಂಗ್ ಡೈಮಂಡ್ಸ್), ಝಿಯಾಹ್ (ಸಾಲಿಟೇರ್ ಲೈಕ್ ಡೈಮಂಡ್ ಜುವೆಲರಿ), ಅನೋಬಿ(ಆನ್ ಕಟ್ ಡೈಮಂಡ್ಸ್), ಅಪೂರ್ವ(ವಿಶೇಷ ಸಂದರ್ಭಗಳಿಗಾಗಿ ಸಿದ್ದಗೊಳಿಸಿರುವ ಡೈಮಂಡ್ಸ್), ಅಂತರಾ (ವೆಡ್ಡಿಂಗ್ ಡೈಮಂಡ್ಸ್), ಹೇರಾ (ದೈನಂ ದಿನ ಧರಿಸುವ ಡೈಮಂಡ್ಸ್), ರಂಗ್ (ಪ್ರೀಷಿಯಸ್ ಸ್ಟೋನ್ಸ್ ಜುವೆಲರಿ) ಹಾಗೂ ಲೀಲಾ(ಕಲರ್ಡ್ ಸ್ಟೋನ್ಸ್ ಮತ್ತು ಡೈಮಂಡ್ ಜ್ಯುವೆಲ್ಲರಿ) ಉತ್ಪನ್ನಗಳು ಕೂಡ ಲಭ್ಯವಿವೆ.

Leave a Reply