
ಚಾಮರಾಜನಗರ: ಅಶ್ರಯ ಸಮಿತಿ ನೂತನ ನಾಮನಿರ್ದೇಶನ ಸದಸ್ಯರುಗಳಿಗೆ ಬಿಜೆಪಿ ನಗರ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಆಶ್ರಯ ಸಮಿತಿಗೆ ನೂತನ ನಾಮನಿರ್ದೇಶನ ಸದಸ್ಯರಾಗಿ ನೇಮಕವಾದ ರಾಮಸಮುದ್ರ ಶಿವಕುಮಾರ್, ಬೃಂಗೇಶ್, ಪ್ರೇಮ್ ಚಂದ್,ಜಯಶ್ರೀ ಅವರನ್ನು ನಗರದ ಮೇಘಾಕಾಂಪ್ಲೆಕ್ಸ್ ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಘಟಕದ ವತಿಯಿಂದ ಸನ್ಮಾನಿಸಿ ಅದೇಶಪತ್ರ ವಿತರಿಸಲಾಯಿತು.

ನಗರವನ್ನು ಗುಡಿಸಲು ಮುಕ್ತ ಮಾಡಲು ಶ್ರಮಿಸಿ: ಸನ್ಮಾನಿಸಿ, ಆದೇಶಪತ್ರ ವಿತರಿಸಿದ ಜಿಲ್ಲಾಧ್ಯಕ್ಷ ಅರ್.ಸುಂದರ್ ಮಾತನಾಡಿ, ಆಶ್ರಯ ಸಮಿತಿಗೆ ನೂತನ ನಾಮನಿರ್ದೇಶನ ಸದಸ್ಯರಾಗಿ ನೇಮಕವಾಗಿರುವ ನಾಲ್ವಾರು ಅರ್ಹ ಫಲಾನುಭವಿಗಳನ್ನು ಗುರುತಿಸುವ ಮೂಲಕ ನಗರವನ್ನು ಗುಡಿಸಲು ಮುಕ್ತ ನಗರವನ್ನಾಗಿ ಮಾಡಲು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿಬಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಜಿಲ್ಲಾ ಕಾರ್ಯದರ್ಶಿಗಳಾದ ಪದ್ಮ, ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ರಾಜು, ನಗರಸಭಾ ನಾಮನಿರ್ದೇಶನ ಸದಸ್ಯೆ ವನಜಾಕ್ಷಮ್ಮ, ಎಸ್ಸಿ ಮೋರ್ಚಾದ ಉಪಾಧ್ಯಕ್ಷ ವೇಣುಗೋಪಾಲ್ ಹಾಜರಿದ್ದರು.
